ಹೆಚ್ಚುತ್ತಿರುವ ವಯಸ್ಸನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ. ಆದರೆ ಹೆಚ್ಚುತ್ತಿರುವ ವಯಸ್ಸಿನ ಗುರುತುಗಳನ್ನು ಹಿಂದೆ ಬಿಟ್ಟು ಯಂಗ್‌ ಆಗಿ ಸ್ಮಾರ್ಟಾಗಿ ಕಾಣುವುದು ಖಂಡಿತಾ ನಮ್ಮ ಕೈಯಲ್ಲಿದೆ. ಯಾವುದೇ ಮಹಿಳೆಯ ಸೌಂದರ್ಯದ ಮೊದಲ ಮಾನದಂಡ ಕೂದಲಾಗಿದೆ. ಅದರಿಂದ ಮಹಿಳೆಯ ಸೌಂದರ್ಯಕ್ಕೆ ಕಾಂತಿ ಬರುತ್ತದೆ. ಹೀಗಿರುವಾಗ ಕಪ್ಪು ಕೂದಲಿನ ಮಧ್ಯೆ ಹೊಳೆಯುವ ಬಿಳಿ ಕೂದಲಿಗೆ ಕಲರಿಂಗ್‌ ಅಥವಾ ಹೇರ್‌ ಕಟಿಂಗ್‌ನಿಂದ ಹೇಗೆ ಸ್ಮಾರ್ಟ್‌ ಮತ್ತು ಫಾಸ್ಟ್ ಫಾರ್ವರ್ಡ್ ಲುಕ್ ಕೊಡಬಹುದೆಂಬುದನ್ನು ಹೇರ್‌ ಎಕ್ಸ್ ಪರ್ಟ್ಸ್ ನೀಡುವ ಸಲಹೆಗಳಿಂದ ತಿಳಿಯೋಣ. ತಜ್ಞರ ಪ್ರಕಾರ, ಕಲರಿಂಗ್‌ ಮತ್ತು ಕಟಿಂಗ್‌ನ ವಿಧಾನಗಳನ್ನು ಬಳಸಿಕೊಂಡು ಯಾವುದೇ ಮಹಿಳೆ ಫ್ಯಾಷನೆಬಲ್ ಹಾಗೂ ಸ್ಮಾರ್ಟ್‌ ಆಗಿ ಕಾಣಿಸಬಹುದು.

ಹೇರ್ಕಲರಿಂಗ್ಮತ್ತು ಪ್ರಿವೇಟಿಂಗ್‌ : ಹೇರ್‌ ಕಲರಿಂಗ್‌ ಮಾಡಿಸುವ ಮೊದಲು ಕೂದಲು ವರ್ಜಿನ್‌ ಆಗಿದೆಯೋ ಅಥವಾ ಕಲರ್ ಅಥವಾ ಹೆನ್ನಾ ಹಚ್ಚಿದೆಯೋ ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಇದೇ ಆಧಾರದ ಮೇಲೆ ಕಲರ್‌ನ್ನು ಆರಿಸಲಾಗುತ್ತದೆ. ಕೂದಲಿಗೆ ಹೆನ್ನಾ, ಸೀಗೇಕಾಯಿ, ಶ್ಯಾಂಪೂ, ಅಂಟವಾಳಕಾಯಿ ಅಥವಾ ಯಾವುದೇ ಬಣ್ಣ ಮುಂತಾದ ಉತ್ಪನ್ನವನ್ನು ಉಪಯೋಗಿಸಿರದ ಕೂದಲನ್ನು ವರ್ಜಿನ್‌ ಹೇರ್‌ ಎನ್ನುತ್ತಾರೆ. ಒಂದುವೇಳೆ ಕೂದಲಿಗೆ ಹೆನ್ನಾ ಉಪಯೋಗಿಸಿದ್ದರೆ ಅಂಥವರು ಮೊದಲು ತಮ್ಮ ಕೂದಲನ್ನು ಪ್ರಿವೇಟ್‌ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕಾಗಿ ಕೂದಲಿಗೆ ಬ್ಲಾಂಡರ್‌ ಹಚ್ಚಿ. ಬ್ಲಾಂಡರ್‌ನ್ನು ಕೂದಲಿನ ಥಿಕ್‌ನೆಸ್‌ಗೆ ತಕ್ಕಂತೆ ಹಚ್ಚಿ. 20-30 ವಾಲ್ಯೂಮ್ನ್ನು 35 ರಿಂದ 40 ನಿಮಿಷಗಳರೆಗೆ ಕೂದಲಿಗೆ ಹಚ್ಚಿ. ಅದರಿಂದ ಕೂದಲಿನ ಒಳಗೆ ಕಲರ್‌ ಚೆನ್ನಾಗಿ ಬೆರೆತುಕೊಳ್ಳುತ್ತದೆ. ಹೆನ್ನಾ ಹಚ್ಚಿದ ಕೂದಲಿಗೆ ಮೊದಲ ಬಾರಿ 20 ವಾಲ್ಯೂಮ್ ಹಚ್ಚಿ. 2 ದಿನಗಳ ಬಳಿಕ ಮತ್ತೊಮ್ಮೆ ಹಚ್ಚಿ. ಅದರಿಂದ ಕೂದಲು ಪ್ರಿವೇಟ್‌ ಆಗುತ್ತದೆ. ಕೂದಲನ್ನು ಪ್ರಿವೇಟ್‌ ಮಾಡಿದ ನಂತರ ಶ್ಯಾಂಪೂ ಮತ್ತು ಕಂಡೀಶನರ್‌ ಅಗತ್ಯವಾಗಿ ಹಚ್ಚಿ. ಅನೇಕ ಬಾರಿ ಚಳಿಗಾಲದಲ್ಲಿ ಹೆಚ್ಚು ಡ್ರೈನೆಸ್‌ನಿಂದಾಗಿ ಕಲರ್‌ನಲ್ಲಿರುವ ಹೈಡ್ರೋಜನ್‌ಮತ್ತು ಅಮೋನಿಯಾ `ಇಚಿಂಗ್‌' ಉಂಟು ಮಾಡುತ್ತದೆ. ಆದ್ದರಿಂದ 50% ಡೆವೆಲಪರ್‌ ಮೇಲೆ ನೀರು ಹೊಯ್ಯಿರಿ. ಅದರಿಂದ ಕಲರ್‌ 30ರ ಬದಲು 25 ವಾಶ್‌ವರೆಗೆ ನಡೆಯುತ್ತದೆ. ಆದರೆ ಹೀಗೆ ಮಾಡುವುದರಿಂದ ಕೂದಲಿಗೆ ಹಾನಿಯಾಗುವುದಿಲ್ಲ.

ಕಲರ್‌ ಹಚ್ಚುವಾಗ ಕ್ರೌನ್‌ನ ಅರ್ಧ ಇಂಚಿನ ಭಾಗ ಬಿಟ್ಟು ಕಲರ್‌ ಹಚ್ಚಿ. ಕಲರ್‌ನ್ನು ಯಾವಾಗಲೂ ಜಿಗ್‌ಜ್ಯಾಗ್‌ ಸ್ಟೈಲ್‌ನಲ್ಲೇ ಹಚ್ಚಿ. ವಾಲ್ಯೂಮ್ ಹೆಚ್ಚಿಸಲು ಕೂದಲಿನಲ್ಲಿ ಬೌನ್ಸ್ ಕೊಡುವ ಶ್ಯಾಂಪೂ ಉಪಯೋಗಿಸಿ. ಪ್ರಿವೇಟ್‌ ಮಾಡುವಾಗ ಏರ್‌ಕಂಡೀಶನರ್‌ಗೆ ನೇರವಾಗಿ ಎದುರು ಕೂರಬೇಡಿ. ಇಲ್ಲದಿದ್ದರೆ ಅದು ಕೆಮಿಕಲ್‌ನ ಹೀಟ್‌ ಜನರೇಟ್‌ ಮಾಡುವುದನ್ನು ನಿಲ್ಲಿಸಿಬಿಡುತ್ತದೆ.

ಕಲರ್ ಆಯ್ಕೆ : ಕೂದಲನ್ನು ಯಾವಾಗಲೂ ನ್ಯಾಚುರಲ್ ಬೇಸ್‌ ಲೆವೆಲ್ ‌ಆಧಾರದಲ್ಲಿ ಕಲರ್‌ ಮಾಡಲಾಗುತ್ತದೆ. ನ್ಯಾಚುರಲ್ ಬೇಸ್‌ನಲ್ಲಿ 1 ರಿಂದ 10 ಲೆವೆಲ್ ‌ಇರುತ್ತವೆ. ಅವು ಕಲರ್‌ನ ವೈಟ್‌ನೆಸ್‌ ಮತ್ತು ಡಾರ್ಕ್‌ನೆಸ್‌ನ ಡಿಗ್ರಿ ಬಗ್ಗೆ ಹೇಳುತ್ತಲೇ ನೀವು ಎಷ್ಟು ಕಡಿಮೆ ನಂಬರ್‌ನ ಶೇಡ್‌ ಉಪಯೋಗಿಸುತ್ತೀರೋ ಅಷ್ಟೇ ಹೆಚ್ಚು ಬಿಳಿ ಕೂದಲಿನ ಕವರ್‌ ಆಗುತ್ತದೆ. ಎಷ್ಟು ಹೆಚ್ಚು ನಂಬರ್‌ನ ಶೇಡ್‌ ಇರುತ್ತದೋ ಅಷ್ಟೇ ಬಿಳಿ ಕೂದಲಿನ ಕವರೇಜ್‌ ಕಡಿಮೆಯಾಗುತ್ತದೆ. ಯಾವಾಗಲೂ ಕಲರ್‌ ಮತ್ತು ಡೆವೆಲಪರ್‌ನ್ನು ಸಮ ಪ್ರಮಾಣದಲ್ಲಿ ಸೇರಿಸಿ ಉಪಯೋಗಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ