ಬೇಸಿಗೆಯಲ್ಲಿ ನಮ್ಮ ಚರ್ಮದಲ್ಲಿ ಸಣ್ಣಪುಟ್ಟ ಬದಲಾವಣೆ ಗೋಚರಿಸುತ್ತದೆ. ಹೊರಗಿನ ತಾಪಮಾನ ಹೆಚ್ಚುವುದರಿಂದ ತ್ವಚೆಯ ಸೆಲ್ಸ್ ಮೇಲೆ ಪರಿಣಾಮ ಆಗಿಯೇ ಆಗುತ್ತದೆ. ಹೀಗಿರುವಾಗ ನೀವು ಕೇಲವು ಮೇಕಪ್‌ನಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡರೆ ಸಾಲದು, ಟ್ರೆಂಡ್‌ಕಲರ್ಸ್‌ ಬಗ್ಗೆಯೂ ಗಮನ ಕೊಡಬೇಕು.

ಡೀಪ್‌ ಆರೆಂಜ್‌, ಪ್ಲಮ್ ಆರೆಂಜ್‌, ಪಿಂಕ್‌, ಕೋರಲ್ ಪಿಂಕ್‌, ಪೇ್‌ರೆಡ್‌ ಇತ್ಯಾದಿ ಬಣ್ಣಗಳು ಬಿಸಿಲಿನ ದಿನಗಳಿಗೆ ಆದರ್ಶ ಎನಿಸಿವೆ.

ಹಾಗೆ ನೋಡಿದರೆ ಬೇಸಿಗೆಯಲ್ಲಿ, ಯಾವುದೇ ಬಗೆಯ ಚರ್ಮಕ್ಕೂ ಮೇಕಪ್‌ ಮಾಡುವುದು ಕಷ್ಟವೇ ಸರಿ.

ಇತರ ಫೌಂಡೇಶನ್‌ಗಳಿಗೆ ಹೋಲಿಸಿದಾಗ ಕ್ರೀಮ್ ಫೌಂಡೇಶನ್‌ ಹೆಚ್ಚು ಪರಿಶ್ರಮ ಬೇಡುತ್ತದೆ, ಜೊತೆಗೆ ಇದರ ಕಾರಣದಿಂದ ಚರ್ಮ ಹೆಚ್ಚು ತೈಲೀಯ ಆಗುತ್ತದೆ. ಹೀಗಾಗಿ ಆಯ್ಲಿ ಸ್ಕಿನ್‌ನವರು ಇದನ್ನು ಬಳಸುವ ಮೊದಲು ಮ್ಯಾಟಿಫೈಯಿಂಗ್‌ ಪ್ರೈಮರ್‌ ಅಥವಾ ಆಯಿಲ್ಫ್ರೀ ಮಾಯಿಶ್ಚರೈಸರ್‌ನ್ನು ಬಳಸಬೇಕು. ಹೀಗೆ ಮಾಡುವುದರಿಂದ ತ್ವಚೆಯ ತೈಲೀಯ ಅಂಶಗಳು ಹಿಂಗಿಹೋಗಿ, ಮೇಕಪ್‌ ನಂತರ ಅದು ನೀಟಾಗಿ ಕಾಣಿಸುತ್ತದೆ.

ಇದರ ಜೊತೆಗೆ ಲಿಕ್ವಿಡ್‌ ಫೌಂಡೇಶನ್‌ ಸಹ ಬಳಸಬಹುದು. ಆದರೆ ಇದು ಚರ್ಮವನ್ನು ಒಣಗಿಸುತ್ತದೆ ಹಾಗೂ ಆಯ್ಲಿ ಸ್ಕಿನ್‌ ಮೇಲೆ ಈ ಲಿಕ್ವಿಡ್‌ ಫೌಂಡೇಶನ್‌ ಕನಿಷ್ಠ ಹೊತ್ತು ಮಾತ್ರ ಇರುತ್ತದೆ. ಆದ್ದರಿಂದ ಉತ್ತಮ ಉಪಾಯ ಎಂದರೆ ನೀವು ಕ್ರೀಂ ಫೌಂಡೇಶನ್‌ನ್ನೇ ತ್ವಚೆಯ ಮೇಲೆ ಕವಚದ ಹಾಗೆ ಹೆಚ್ಚಿನ ಭಾಗಕ್ಕೆ ಲೇಪಿಸಿಕೊಳ್ಳಿ.

ಆಯ್ಲಿ ಸ್ಕಿನ್‌ಗೆ ಪೌಡರ್‌ ಫೌಂಡೇಶನ್‌ ಸಹ ಸರಿಹೋಗದು, ಏಕೆಂದರೆ ಅದು ಅಂಟಿದಂತೆ ತೋರುತ್ತದೆ.

ಲಿಪ್‌ ಬಾಮ್ ಬಳಸುವುದು ಸಹ ಮುಖ್ಯವಾಗುತ್ತದೆ. ಈ ಸೀಸನ್‌ನಲ್ಲಿ ನಿಮ್ಮ ತುಟಿ ಒಣಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲ, ತುಟಿಗಳ ಮೇಲೆ ಒಣಗಿದಂಥ ಗುರುತು ಕಾಣಿಸಬಾರದು ಎಂಬುದಕ್ಕಾಗಿ ಲಿಪ್‌ ಬಾವ್‌ ಬಳಸಬೇಕು.

ತುಟಿಗಳ ಮೇಲೆ ಕೋರಲ್ ಪಿಂಕ್‌/ ಸ್ಕಿನ್‌ ಕಲರ್‌ ಪೆನ್ಸಿಲ್ ‌ಬಳಸಬೇಕು. ತುಟಿಗಳ ಔಟ್‌ಲೈನ್‌ನ್ನು ಇದರಿಂದ ಸುರಕ್ಷಿತವಾಗಿಡಬೇಕು. ಎಷ್ಟು ಸಾಧ್ಯವೋ ಅಷ್ಟು, ಇದನ್ನು ತುಟಿಗಳ ನೈಸರ್ಗಿಕ ಗಡಿಗಳವರೆಗೂ ಎಳೆಯಿರಿ, ನಂತರ ಅದನ್ನು ಗಮನವಿರಿಸಿ ಲಿಪ್‌ ಪೆನ್ಸಿಲ್‌ನಿಂದ ತುಂಬಿಸಿ.

ಲಿಪ್‌ಸ್ಟಿಕ್‌ ಬಳಸುವ ಬದಲು ಲಿಪ್‌ ಟಿಂಟೆಡ್‌ ಬಾಮ್ ಅಥವಾ ಗ್ಲಾಸ್‌, ಈ ಬೇಸಿಗೆಗೆ ಹಿತಕರ ಎನಿಸುತ್ತದೆ. ನೀವು ಆರೆಂಜ್‌ ಬೇಸ್ಡ್ ಲಿಪ್‌ ಟಿಂಟ್‌ ಅಥವಾ ಪಿಂಕ್‌ ಬೇಸ್ಡ್ ಟಿಂಟ್‌ ಬಳಸಬಹುದು. ಬೇಸಿಗೆಯ ಕಾಲದಲ್ಲಿ ಕಣ್ಣು ಕುಕ್ಕುವ ಗಾಢ ಬಣ್ಣಗಳಿಂದ ದೂರವಿರಿ. ಲೈಟ್‌ ಕಲರ್ಸ್‌ ಮಾತ್ರ ಈ ಕಾಲದಲ್ಲಿ ಸೂಕ್ತ.

ನೀವೇನಾದರೂ ಕಾಂರ್‌, ಆರೆಂಜ್‌ ಕಲರ್‌ನಂಥ ವಾರ್ಮ್ ಶೇಡ್ಸ್ ಬಳಸುವಿರಾದರೆ, ಹೊಳಪಿಲ್ಲದ ಟೆಕ್ಸ್ ಚರ್‌ನ ಐಶ್ಯಾಡೋ ಬಳಸಬೇಕು. ಹೊಳೆಹೊಳೆಯುವ ಐ ಶ್ಯಾಡೋ ಸಹ ಬಳಸಬಹುದು. ಆದರೆ ಇವನ್ನು ಸಂಜೆ ಅಥವಾ ರಾತ್ರಿಯ ವೇಳೆಗೆ ಮಾತ್ರ ಬಳಸಿರಿ. ಹಗಲಿನ ಮೇಕಪ್‌ಗೆ ಮ್ಯಾಟ್‌ ಕಲರ್‌ ಮತ್ತು ಟೆಕ್ಸ್ ಚರ್‌ ಜೊತೆ ಚೆನ್ನಾಗಿ ಹೊಂದುತ್ತದೆ ಹಾಗೂ ಇದು ಚರ್ಮಕ್ಕೂ ಅನುಕೂಲಕರ.

ಬೇಸಿಗೆಯ ಮೇಕಪ್‌ಗೆ ಸಾಧ್ಯವಾದಷ್ಟೂ ಪೌಡರ್‌ ಕಡಿಮೆ ಇರಬೇಕು. ಹೆಚ್ಚು ಪೌಡರ್‌ ಬಳಸಿದಷ್ಟೂ ಚರ್ಮವನ್ನು ಇನ್ನಷ್ಟು ಶುಷ್ಕಗೊಳಿಸೀತು ಅಥವಾ ಮೇಕಪ್‌ ಕೃತಕವಾಗಿರುವಂತೆ ಕಂಡೀತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ