ನಮ್ಮ ಸುತ್ತಮುತ್ತಲ ವಾತಾವರಣದಲ್ಲಿ ಹೆಚ್ಚು ಹ್ಯುಮಿಡಿಟಿ (ಆರ್ದ್ರತೆ) ಕೂದಲು ಉದುರುವಿಕೆಯ ಮುಖ್ಯ ಕಾರಣವಾಗಿದೆ. ಈ ಬೇಸಿಗೆಯಲ್ಲಿ ಕೂದಲು ಪರಿಸರದ ಜಲಜನಕವನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುತ್ತದೆ, ಹಾಗಾಗಿ ಅದು ಶುಷ್ಕ ನಿರ್ಜೀವ ಆಗಿಬಿಡುತ್ತದೆ.

ಇದಕ್ಕೆ ಕೇಶತಜ್ಞರು ನೀಡುವ ಸಲಹೆಗಳೇನು? :

ಡೀಪ್ಕಂಡೀಶನಿಂಗ್ಮಾಡಿ : ಬಹಳ ಹೊತ್ತು ಬಿಸಿಲಿಗೆ ಕೂದಲನ್ನು ಒಡ್ಡುವುದರಿಂದ ಅದು ತೀವ್ರ ಶುಷ್ಕ ಕಾಂತಿಹೀನ ಆಗುತ್ತದೆ. ಕೂದಲನ್ನು ಮತ್ತೆ ಕಾಂತಿಯುತಗೊಳಿಸಲು ಸ್ಕಾಲ್ಪ್ ವರೆಗೂ ಡೀಪ್‌ ಕಂಡೀಶನಿಂಗ್‌ ಮಾಡಲೇಬೇಕು. ಆಗ ಮಾತ್ರ ಈ ಉರಿ ಬೇಸಿಗೆಯಲ್ಲೂ ಅದಕ್ಕೆ ನುರಿತ ಪೋಷಣೆ ಸಾಧ್ಯ.

ಕೂದಲನ್ನು ಹೀಟ್ನಿಂದ ದೂರವಿಡಿ : ಪರಿಸರದ ಆರ್ದ್ರತೆಯ ಕಾರಣ, ನೀವು ನಿಮ್ಮ ಒದ್ದೆ ಕೂದಲ ಮೇಲೆ ಹೀಟಿಂಗ್‌ ಉಪಕರಣ ಬಳಸಿದರೆ, ಅದು ಖಂಡಿತಾ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಬ್ಲೋಡ್ರೈಯರ್‌,ಸ್ಟ್ರೇಟ್‌ ನರ್‌, ಕರ್ಲಿಂಗ್‌ ರಾಡ್‌ ಇತ್ಯಾದಿ ಯಾವುದನ್ನೂ ಬಳಸಲೇಬೇಡಿ. ಇವು ಕೂದಲನ್ನು ನಿರ್ಜೀವಗೊಳಿಸಿ, ನೈಸರ್ಗಿಕ ಹೊಳಪನ್ನು ಹಾಳು ಮಾಡುತ್ತವೆ, ಕೂದಲು ಹಾಗೇ ಒಣಗಲು ಬಿಡಿ.

ಕೂದಲಿನ ಬುಡಕ್ಕೆ ಎಣ್ಣೆ ತಲುಪಲಿ : ಇಡೀ ವರ್ಷ ಎಲ್ಲಾ ಋತುಮಾನಗಳಲ್ಲೂ ತಲೆಗೆ ಎಣ್ಣೆ ಹಚ್ಚಬೇಕಾದುದು ಅನಿವಾರ್ಯ. ಈ ಬೇಸಿಗೆಯಲ್ಲಂತೂ ಅದು ಮತ್ತಷ್ಟು ಮುಖ್ಯ! ವಾರದಲ್ಲಿ ಕನಿಷ್ಠ 2 ಸಲ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್‌ ಮಾಡಲು ಮರೆಯದಿರಿ.

ಪೌಷ್ಟಿಕ ಆಹಾರ ಧಾರಾಳ ಸೇವಿಸಿ : ಕೂದಲನ್ನು ಸದಾ ಆರೋಗ್ಯಕರವಾಗಿಡಲು ಮುಖ್ಯ ಆಧಾರವೆಂದರೆ ಪೌಷ್ಟಿಕ ಆಹಾರ. ಹೀಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆ, ಮೀನು, ಸ್ಪ್ರೌಟ್ಸ್, ಹಸಿರು ತಾಜಾ ತರಕಾರಿ ಮುಂತಾದವನ್ನು ಧಾರಾಳ ಬೆರೆಸಿಕೊಳ್ಳಿ. ಇವು ಪ್ರೋಟೀನ್‌, ಕಬ್ಬಿಣಾಂಶಗಳಿಂದ ತುಂಬಿರುತ್ತವೆ. ಅದೇ ತರಹ ಅಖರೋಟ್‌ ಸಹ ಕೂದಲಿನ ಪೋಷಣೆಗೆ ಬಲು ಸಹಾಯಕ. ಏಕೆಂದರೆ ಇದರಲ್ಲಿ ಒಮೇಗಾ 3, ಫ್ಯಾಟಿ ಆ್ಯಸಿಡ್‌, ವಿಟಮಿನ್‌ಧಾರಾಳ ಅಡಗಿದ್ದು ಆರೋಗ್ಯಕ್ಕೆ ಆಧಾರವಾಗುತ್ತದೆ.

ಕೂದಲನ್ನು ಸದಾ ಟ್ರಿಮ್ ಆಗಿಡಿ : ಶುಷ್ಕ ಅಥವಾ ಸೀಳು ತುದಿಯ ಕೂದಲನ್ನು ಆಗಾಗ ಕತ್ತರಿಸಿ, ಟ್ರಿಮ್ ಮಾಡಿ, ಅದರಿಂದ ಮುಕ್ತಿ ಪಡೆಯಿರಿ.

ಕೂದಲನ್ನು ಅತಿ ಬಿಗಿಯಾಗಿ ಬಿಗಿಯಬೇಡಿ : ಲೂಸ್‌ ಬನ್ಸ್, ನಾಟ್ಸ್, ಮೆಸ್ಸಿ ಬ್ರೆಡ್ಸ್ ಇತ್ತೀಚೆಗೆ ಬಲು ಫ್ಯಾಷನೆಬಲ್ ಟ್ರೆಂಡಿ ಎನಿಸಿವೆ. ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಾಗ, ಟೈಟ್‌ ಆಗಿ ಬಿಗಿದ ಕೂದಲು ಹಿಂಸೆ ಎನಿಸುತ್ತದೆ. ಜೊತೆಗೆ ಅದರ ಬೇರು ಸಹ ದುರ್ಬಲಗೊಳ್ಳುತ್ತದೆ, ಸುಲಭವಾಗಿ ತುಂಡರಿಸಿ, ಉದುರುತ್ತದೆ. ಹೀಗಾಗಿ ಕೂದಲನ್ನು ಲೂಸ್‌ ಆಗಿ ಹೆಣೆದು ಟ್ರೆಂಡಿ ಎನಿಸಿರಿ.

ನ್ಯಾಚುರಲ್ ಹೇರ್ಮಾಸ್ಕ್ ಬಳಸಿರಿ : ಮನೆಯಲ್ಲೇ ನಾವು ತಯಾರಿಸಬಹುದಾದ ಹರ್ಬಲ್ ಹೇರ್‌ ಮಾಸ್ಕ್, ರೆಡಿಮೇಡ್‌ ಕೆಮಿಕಲ್ಸ್ ಯುಕ್ತ ಶ್ಯಾಂಪೂಗಳಿಗಿಂತ ಎಷ್ಟೋ ಉತ್ತಮ. ಇದು ಕೂದಲಿಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಮನೆಯಲ್ಲೇ ಹರ್ಬಲ್ ಹೇರ್‌ ಮಾಸ್ಕ್ ತಯಾರಿಸಲು 1 ಬಾಳೆಹಣ್ಣು, ಜೇನುತುಪ್ಪ, ಬಾದಾಮಿ ಎಣ್ಣೆ ಸೇರಿಸಿ ಮಿಶ್ರಣ ಕಿವುಚಿಡಿ. ಇದನ್ನು ನೀಟಾಗಿ ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಬಿಸಿ ನೀರಲ್ಲಿ ಹಿಂಡಿದ ಟವೆಲ್ ‌ಸುತ್ತಿಕೊಳ್ಳಿ. ನಂತರ ಯಾವುದೇ ಸೌಮ್ಯ ಹರ್ಬಲ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ಇದರಿಂದ ದಟ್ಟ ವ್ಯತ್ಯಾಸ ತಿಳಿಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ