ಸೌಂದರ್ಯ ಸಂರಕ್ಷಣೆಯ ಸಮಯದಲ್ಲಿ ಚರ್ಮದ ಆರೋಗ್ಯದತ್ತಲೂ ನಾವು 100% ಗಮನಹರಿಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಬಗೆಯ ಪ್ರಾಡಕ್ಟ್ಸ್, ತ್ವಚೆಯ ರಕ್ಷಣೆ ಬಗ್ಗೆ ಹೇಳುತ್ತವೆ. ಆದರೆ ಅಸಲಿಗೆ ಬ್ಯೂಟಿಫುಲ್ ಸ್ಕಿನ್ ಗಾಗಿ ಎಲ್ಲಕ್ಕೂ ಮುಖ್ಯವೆಂದರೆ, ನಿಮ್ಮ ಲೈಫ್ ಸ್ಟೈಲ್‌ಹೈಜೀನ್ ನಲ್ಲಿ ಬದಲಾವಣೆ ಎಂದಿನ ನಿಮ್ಮ ದಿನಚರಿಯಲ್ಲಿ ಆರೋಗ್ಯದ ಕಡೆಯೂ ಅಷ್ಟೇ ಗಮನಕೊಟ್ಟರೆ, ಸೌಂದರ್ಯ ತಂತಾನೇ ವೃದ್ಧಿಸುತ್ತದೆ.
ನಮ್ಮ ಚರ್ಮವನ್ನು ಸದಾ ಸ್ವಚ, ಶುಭ್ರ, ಮೃದುವಾಗಿರಿಸಿಕೊಳ್ಳಲು, ಎಲ್ಲಕ್ಕೂ ಅತಿ ಅಗತ್ಯವಾದುದು ಎಂದರೆ ಸ್ಕಿನ್ ಕೇರ್ ರೊಟೀನ್. ಸ್ವಚ್ಛ, ಮೃದು ಚರ್ಮಕ್ಕಾಗಿ ಈ ಕಡೆ ಗಮನಹರಿಸಿ!
ಒಂದು ದಿನ ತಪ್ಪಿಸದೆ ಈ ಬಗ್ಗೆ ಗಮನಹರಿಸಲು ಹೆಂಗಸರು ಬಲು ಸೋಮಾರಿಗಳೆಂದೇ ಹೇಳಬೇಕು. ಹಾಗಾಗಿ ಅವರ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಇಂಥ ಸ್ಟ್ರಿಕ್ಟ್ ರೊಟೀನ್ ಇಲ್ಲದಿದ್ದರೆ, ಸೌಂದರ್ಯ ಸಂವರ್ಧನೆಯ ಎಲ್ಲಾ ಪ್ರಯತ್ನಗಳೂ ವೇಸ್ಟ್. ಈ ಕೆಳಗಿನ ಸಲಹೆಗಳನ್ನು ಅನುಸರಿಸಿ, ಆ ನಿಟ್ಟಿನಲ್ಲಿ ವಿಜಯಿಗಳಾಗಿ.
ದಿನದಾರಂಭ ಡ್ರೈ ಬ್ರಶ್ಶಿಂಗ್
ಡ್ರೈ ಬ್ರಶ್ಶಿಂಗ್ ಮೂಲಕ ನಿಮ್ಮ ದಿನ ಆರಂಭಿಸಿ. ಇದು ಡೆಡ್ ಸ್ಕಿನ್ ನ ಜೀವಕೋಶಗಳನ್ನು ತೊಲಗಿಸುವ ಪ್ರಾಚೀನ ಟೆಕ್ನಿಕ್. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಪ್ರತಿದಿನ ಡ್ರೈ ಬ್ರಶ್ಶಿಂಗ್ ಮಾಡುವುದರಿಂದ ಚರ್ಮ ಹೊಳೆಯತೊಡಗುತ್ತದೆ.
ನ್ಯಾಚುರಲ್ ಫೈಬರ್ ತುಂಬಿರುವಂಥ ಡ್ರೈ ಬ್ರಶ್ಶನ್ನೇ ಆರಿಸಿ, ಪ್ಲಾಸ್ಟಿಕ್ ನದು ಬೇಡ. ನ್ಯಾಚುರಲ್ ಫೈಬರ್ ಬ್ರಶ್ಶಿನಿಂದ ಚರ್ಮಕ್ಕೆ ಎಂದೂ ನವೆ, ಕಡಿತ ಉಂಟಾಗದು.
ಹೊರಗಿನಿಂದ ಒಳಭಾಗದತ್ತ, ನಿಮ್ಮ ಕಾಲಿನಿಂದ ಶುರು ಮಾಡಿ, ಮೇಲ್ಭಾಗಕ್ಕೆ ಸರಿಯುತ್ತಾ, ಆರಾಮವಾಗಿ ಬ್ರಶ್ಶನ್ನು ದೇಹದ ಎಲ್ಲಾ ಭಾಗಕ್ಕೂ ಚಲಾಯಿಸಿ. ಮುಖಕ್ಕಾಗಿ ಸಣ್ಣ, ಮೃದು ಬ್ರಶ್ ಬಳಸಲು ಮರೆಯದಿರಿ.
ಡ್ರೈ ಬ್ರಶ್ಶಿಂಗ್ ಶುರು ಮಾಡುವಾಗ, ಸದಾ ಬ್ರಶ್ ಮತ್ತು ಚರ್ಮ ಒಣಗಿರಬೇಕು ಎಂಬುದನ್ನು ಗಮನಿಸಿ. ಒದ್ದೆ ಚರ್ಮವನ್ನು ಬ್ರಶ್ ಮಾಡುವುದರಿಂದ ಉತ್ತಮ ಪರಿಣಾಮ ಸಿಗದು.
ಮುಖಕ್ಕೆ ಮಾಯಿಶ್ಚರೈಸರ್ ಬಳಸಿರಿ
ಮುಖ ತೊಳೆದ ನಂತರ ಬ್ರೇಕ್ ಔಟ್ ಮತ್ತು ಉರಿ ತಡೆಯಲು ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ. ಮುಖ ತೊಳೆದು, ಒರೆಸಿದ ನಂತರ ತುಸು ಶುಷ್ಕ ನಿರ್ಜೀವ ಎನಿಸುತ್ತದೆ, ಒಮ್ಮೊಮ್ಮೆ ಲೈಟಾಗಿ ಉರಿಯುತ್ತದೆ ಕೂಡ. ಮುಖ್ಯವಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಮಾರುಕಟ್ಟೆಯಲ್ಲಿ ವಿಭಿನ್ನ ಬಗೆಯ ಮಾಯಿಶ್ಚರೈರ್ಸ್ ಲಭ್ಯ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವನ್ನು ಬಳಸಿಕೊಳ್ಳಿ.
ಮುಖಕ್ಕೆ ಟೂಥ್ ಪೇಸ್ಟ್ ನಿಂಬೆ ಬೇಡ
ನಾವು ಆ್ಯಕ್ನೆ, ಮೊಡವೆಗಳಿಂದ ಮುಕ್ತಿ ಹೊಂದಲು ಏನೇನೋ ಪ್ರಯೋಗ ಮಾಡುತ್ತಿರುತ್ತೇವೆ. ಇಂಥ ಮನೆಮದ್ದಿನಲ್ಲಿ ಎಲ್ಲಾದರೂ ಮುಖಕ್ಕೆ ನಿಂಬೆ ರಸ ಅಥವಾ ಟೂಥ್ ಪೇಸ್ಟ್ ಹಚ್ಚಬೇಕು ಎಂದಿದ್ದರೆ, ಅಂಥ ಪ್ರಯೋಗ ಖಂಡಿತಾ ಬೇಡ! ನಿಂಬೆಯಲ್ಲಿನ ಅಸಿಟಿಕ್ ಆ್ಯಸಿಡ್ ಮುಖಕ್ಕೆ ರೆಡ್ ನೆಸ್ ಮತ್ತು ಉರಿ ಹೆಚ್ಚಿಸಬಲ್ಲದು.
ಟೂಥ್ ಪೇಸ್ಟ್ ನ್ನು ಅಷ್ಟು ಬೆಳ್ಳಗಿಡುವ ಕೆಮಿಕಲ್ಸ್ ನಮ್ಮ ಚರ್ಮಕ್ಕೆ ಖಂಡಿತಾ ಹಾನಿ ಮಾಡುತ್ತದೆ. ಇದರ ಬದಲಾಗಿ ಮೊಡವೆಯಿಂದ ಮುಕ್ತಿ ಪಡೆಯಲು ಆ್ಯಂಟಿ ಸ್ಪಾಟ್ ಟ್ರೀಟ್ ಮೆಂಟ್ ಯಾ ಎಸೆನ್ಶಿಯ್ ಆಯಿಲ್ ನ್ನು ಪರ್ಯಾಯವಾಗಿ ಬಳಸಿರಿ.