ಇಂದಿನ ದಿನಗಳಲ್ಲಿ ಐ ಲೈನರ್‌ಯಾವ ಸ್ಟೈಲ್ ಟ್ರೆಂಡ್‌ನಲ್ಲಿದೆ ಎಂಬುದನ್ನು ಮೇಕಪ್ ತಜ್ಞರಿಂದ ತಿಳಿದುಕೊಳ್ಳೋಣ :
ಫ್ಲೇರ್ ಐ ಲೈನರ್
ನಿಮಗೆ ಸೂಪರ್ ಕೂಲ್ ಲುಕ್ ಬೇಕೆಂದರೆ ಫ್ಲೇರ್ ಐ ಲೈನರ್ ಒಂದು ಒಳ್ಳೆಯ ಆಪ್ಶನ್ ಆಗಿರುತ್ತದೆ. ಸಾಮಾನ್ಯವಾಗಿ ಐ ಮೇಕಪ್‌ನಲ್ಲಿ ಬ್ಲ್ಯಾಕ್ ಅಥವಾ ಬ್ರೌನ್ ಐ ಲೈನರ್‌ನ್ನು ಬಳಸಲಾಗುತ್ತದೆ. ಆದರೆ ಈ ಫ್ಲೇರ್ ಐ ಲೈನರ್ ಸ್ಟೈಲ್‌ನಲ್ಲಿ ವೈಟ್, ಯೆಲ್ಲೋ, ಪಿಂಕ್, ರೆಡ್, ಪರ್ಪಲ್ ಮುಂತಾದ ಬೋಲ್ಡ್ ಕಲರ್ಸ್ ಉಪಯೋಗಿಸಲ್ಪಡುತ್ತವೆ. ಇದರಲ್ಲಿ ಕಣ್ಣೆವೆಯ ಮೇಲೆ ಬೇರೆ ಬೇರೆ ಹೂಗಳ ಡಿಸೈನ್‌ನ್ನು ಬಿಡಿಸಲಾಗುತ್ತದೆ. ಆದ್ದರಿಂದ ಇದನ್ನು ಫ್ಲೇರ್ ಸ್ಟೈಲ್ ಎಂದು ಕರೆಯುತ್ತಾರೆ. ಈ ಡಿಸೈನ್‌ನ್ನು ಪೂರ್ತಿ ಕಣ್ಣೆವೆಯ ಮೇಲೆ ಅಥವಾ ಕಣ್ಣೆವೆಯ ಎರಡೂ ತುದಿಗಳಿಗೆ ಬಿಡಿಸಬಹುದು. ಹೊಸ ಬಗೆಯ ಈ ಸ್ಟೈಲ್ ಡೇ ಪಾರ್ಟಿಗೆ ಅತ್ಯಂತ ಸೂಕ್ತವಾಗಿರುತ್ತದೆ. ಫ್ಲೇರ್ ಡಿಸೈನ್‌ಗೆ ಸರಿಯಾದ ಶೇಪ್ ನೀಡಲು ಪೆನ್ಸಿಲ್ ಮತ್ತು ಲಿಕ್ವಿಡ್ ಐ ಲೈನರ್ ಬಳಸಿ.
ಕ್ರಿಸ್ಟಲ್ ಐ ಲೈನರ್
ನಿಮ್ಮ ಡಿಸೈನರ್ ಔಟ್‌ಫಿಟ್‌ಗೆ ಹೊಂದಿಕೆಯಾಗುವಂತೆ ಈಗ ಕ್ರಿಸ್ಟಲ್ ಐ ಲೈನರ್ ಟ್ರೆಂಡ್‌ನಲ್ಲಿದೆ. ಇದಕ್ಕಾಗಿ ಮೊದಲು ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಹ ಬ್ಲ್ಯಾಕ್, ಬ್ರೌನ್, ಬ್ಲೂ ಅಥವಾ ಇನ್ನಾವುದೇ ಶೇಡ್‌ನ ಐ ಲೈನರ್‌ನ್ನು ಕಣ್ಣೆವೆಯ ಮೇಲೆ ಮತ್ತು ಕೆಳಗೆ ಹಚ್ಚಿರಿ. ಒಳ್ಳೆಯ ರಿಸಲ್ಟ್ ಗಾಗಿ ಲಿಕ್ವಿಡ್ ಐ ಲೈನರ್ ಬಳಸಿ. ಇದು ಚೆನ್ನಾಗಿ ಒಣಗಿ ಸೆಟ್ ಆದ ನಂತರ ಐ ಲೈನರ್‌ನ ಸುತ್ತಮುತ್ತ ಅಥವಾ ಕಣ್ಣೆವೆಯ ಮೇಲ್ಭಾಗಕ್ಕೆ ಗೋಲ್ಡನ್ ಅಥವಾ ಸಿಲ್ವರ್ ಶೇಡ್‌ನ ಪುಟ್ಟ ಪುಟ್ಟ ಬಿಂದಿಗಳನ್ನು ಕ್ರಮವಾಗಿ ಅಂಟಿಸಿ. ಇದರಿಂದ ನಿಮ್ಮ ಐ ಲೈನರ್‌ಗೆ ಕ್ರಿಸ್ಟಲ್ ಎಫೆಕ್ಟ್ ದೊರೆಯುವುದು ಮತ್ತು ಬೆಳಕು ಬಿದ್ದ ಕೂಡಲೇ ನಿಮ್ಮ ಐ ಮೇಕಪ್
ಹೊಳೆಯತೊಡಗುವುದು. ವಿವಾಹ ಸಂದರ್ಭಗಳಿಗೆ ಮತ್ತು ನೈಟ್ ಪಾರ್ಟಿಗಳಿಗೆ ಕ್ರಿಸ್ಟಲ್ ಐ ಲೈನರ್ ಸ್ಟೈಲ್ ಬಹಳ ಚೆನ್ನಾಗಿರುತ್ತದೆ.
ಸ್ಟಿಕ್ ಆನ್ ಐ ಲೈನರ್
ಐ ಮೇಕಪ್ ಮಾಡಿಕೊಳ್ಳಬೇಕೆಂಬ ಬಯಕೆ ಇದ್ದೂ ಸಹ ನೀವು ಪ್ರೊಫೆಶನಲ್‌ನ ಸಹಾಯವಿಲ್ಲದೆ ಸ್ವತಃ ಮಾಡಿಕೊಳ್ಳುವ ಧೈರ್ಯವಿಲ್ಲದಿದ್ದರೆ ಅಥವಾ ಐ ಲೈನರ್‌ನ ಸರಿಯಾದ ಶೇಪ್ ಮೂಡಿಸಲು ನಿಮಗೆ ಸಾಧ್ಯವಿಲ್ಲದಿದ್ದರೆ, ಸ್ಟಿಕ್ ಆನ್ ಐ ಲೈನರ್ ನಿಮಗೆ ಬಹಳ ಉಪಯೋಗವಾಗುತ್ತದೆ.
ಸ್ಟಿಕ್ ಆನ್ ಐ ಲೈನರ್‌ನ ವಿವಿಧ ಶೇಡ್ಸ್, ಶೇಪ್ಸ್ ಮತ್ತು ಡಿಸೈನ್‌ಗಳು ಅಂಗಡಿಯಲ್ಲಿ ದೊರೆಯುತ್ತವೆ. ಅವುಗಳನ್ನು ಬಳಸಿ ನಿಮ್ಮ ಐ ಮೇಕಪ್‌ನ್ನು ಆಕರ್ಷಕಗೊಳಿಸಬಹುದು. ಇಂತಹ ಸ್ಟಿಕರ್‌ನ್ನು ಕಣ್ಣೆವೆಯ ಮೇಲೆ ಸೂಕ್ತ ಸ್ಥಳದಲ್ಲಿ ಚೆನ್ನಾಗಿ ಅಂಟಿಸಬೇಕು. ಸ್ಟಿಕ್‌ಆನ್ ಐ ಲೈನರ್ ಮೇಕಪ್ ನೈಟ್ ಪಾರ್ಟಿಗಳಲ್ಲಿ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.
ಕ್ಯಾಂಡೀಕೇನ್ ಐ ಲೈನರ್
ನೀವು ಹಾಲಿಡೇ ಮೂಡ್‌ನಲ್ಲಿದ್ದು, ನಿಮ್ಮ ಐ ಮೇಕಪ್‌ಗೆ ಡಿಫರೆಂಟ್ ಲುಕ್ ನೀಡಲು ಬಯಸುವಿರಾದರೆ, ಕ್ಯಾಂಡೀಕೇನ್ ಐ ಲೈನರ್
ಮೇಕಪ್ ಮಾಡಿಕೊಳ್ಳಬಹುದು. ಇದಕ್ಕಾಗಿ ವೈಟ್ ಮತ್ತು ರೆಡ್ ಶೇಡ್‌ನ ಪೆನ್ಸಿಲ್ ಅಥವಾ ಲಿಕ್ವಿಡ್ ಐ ಲೈನರ್ ತೆಗೆದುಕೊಳ್ಳಿ. ಮೇಲಿನ ಕಣ್ಣೆವೆಯ ಮೇಲೆ ಲೈಟ್ ಶೇಡ್‌ನ ಐ ಲೈನರ್ ಹಚ್ಚಿ. ಅದರ ಮೇಲೆ ರೆಡ್ ಶೇಪ್‌ನ ಐ ಲೈನರ್‌ನಿಂದ ಕೊಂಚ ಕೊಂಚ ದೂರಕ್ಕೆ ಕ್ರಾಸ್ ಲೈನ್ ತುಂಬಿಸುತ್ತಾ ಹೋಗಿ.
ಡೇ ಪಾರ್ಟಿ ಅಥವಾ ಗೆಟ್ ಟು ಗೆದರ್‌ನಲ್ಲಿ ಬೋಲ್ಡ್ ಲುಕ್‌ಗಾಗಿ ಕ್ಯಾಂಡೀಕೇನ್ ಐ ಲೈನರ್ ಮೇಕಪ್ ಮಾಡಿಕೊಳ್ಳಬಹುದು. ನಿಮ್ಮ ಔಟ್‌ಫಿಟ್‌ನ ಬಣ್ಣ ರೆಡ್ ಅಂಡ್ ವೈಟ್ ಆಗಿದ್ದಾಗ ಕ್ಯಾಂಡಿಕೇನ್ ಐ ಲೈನರ್ ಹಚ್ಚಿಕೊಂಡರೆ ಅದು ನಿಮಗೆ ಬ್ಯೂಟಿಫುಲ್ ಲುಕ್ ನೀಡುತ್ತದೆ.
ಬಬಲ್ ಐ ಲೈನರ್
ಸಾಧಾರಣವಾದ ಒಂದೇ ಬಗೆಯ ಐ ಲೈನರ್‌ನ್ನು ದಿನ ದಿನ ಹಚ್ಚಿ ಬೇಸರವಾಗಿದ್ದರೆ, ಬಬಲ್ ಐ ಲೈನರ್ ಟ್ರೈ ಮಾಡಿ. ಇದಕ್ಕಾಗಿ ನೀವು ವಿಶೇಷವಾಗಿ ಮಾಡಬೇಕಾದುದು ಏನೂ ಇಲ್ಲ. ನೀವು ನಿತ್ಯ ಬಳಸುವ ಬ್ಯ್ಲಾಕ್ ಜೆಲ್ ಅಥವಾ ಲಿಕ್ವಿಡ್ ಐ ಲೈನರ್‌ನ್ನೇ ನೇರವಾಗಿ ಹಚ್ಚುವ ಬದಲು ಡಾಟ್ ಡಾಟ್ ಮಾದರಿಯಲ್ಲಿ ಹಚ್ಚುತ್ತಾ ಬಬಲ್‌ನಂತೆ ಮಾಡಿ. ಆಗ ಅದು ನೇರವಾದ ಗೆರೆಯಂತಿರದೆ ಬಬಲ್‌ನಂತೆ ಮೇಲೆ ಕೆಳಗೆ ಕಂಡು ಬರುತ್ತದೆ. ಬೇಕಾದರೆ ನೀವು ಬಬಲ್‌ನ ಮಧ್ಯಭಾಗದಲ್ಲಿ ವೈಟ್ ಪೆನ್ ಐ ಲೈನರ್‌ನಿಂದ ಡಾಟ್ ಇಟ್ಟು ಮತ್ತಷ್ಟು ಆಕರ್ಷಕಗೊಳಿಸಬಹುದು. ಬಬಲ್ ಐ ಲೈನರ್ ಸ್ಟೈಲ್‌ನ್ನು ನೀವು ದಿನ ಮಾಡಿಕೊಳ್ಳಬಹುದು. ಇದು ರೆಗ್ಯುಲರ್ ಔಟ್‌ಫಿಟ್‌ಗೂ ಮ್ಯಾಚ್ ಆಗುತ್ತದೆ.
ರಿಬ್ಬನ್ ಐ ಲೈನರ್
ಸ್ಟ್ರೇಟ್, ರೌಂಡ್ ಮತ್ತು ಫಿಶ್ ಕಟ್ ಐ ಲೈನರ್ ಸ್ಟೈಲ್ ಅಲ್ಲದೆ ಬೇರೆ ಐ ಲೈನರ್ ಸ್ಟೈಲ್‌ನ್ನು ಟ್ರೈ ಮಾಡಬೇಕೆಂದಿದ್ದರೆ, ರಿಬ್ಬನ್ ಐ ಲೈನರ್ ಸ್ಟೈಲ್ ಮಾಡಿ ನೋಡಿ. ಇದಕ್ಕಾಗಿ ಮೇಲಿನ ಕಣ್ಣೆವೆಗೆ ಬ್ಲ್ಯಾಕ್ ಲಿಕ್ವಿಡ್ ಅಥವಾ ಜೆಲ್ ಐ ಲೈನರ್ ಹಚ್ಚಿ. ಆಕರ್ಷಕವಾಗಿಸಲು ಅದನ್ನು ಸ್ವಲ್ಪ ಅಗಲವಾಗಿ ಹಚ್ಚಿ. ಈಗ ಕೆಳಗಿನ ಕಣ್ಣೆವೆಗೆ ಬೇರೆ ಶೇಪ್‌ನ ಪೆನ್ ಐ ಲೈನರ್ ಹಚ್ಚಿ. ಕಣ್ಣಿನ ತುದಿಗೆ ಬಂದಾಗ, ಅದನ್ನು ರಿಬ್ಬನ್ ರೀತಿಯಲ್ಲಿ ಮೇಲ್ಭಾಗದಲ್ಲಿ ಹಚ್ಚಿರುವ ಬ್ಲ್ಯಾಕ್ ಐ ಲೈನರ್‌ನ್ನು ಸುತ್ತುವಂತೆ ಮಾಡಿ. ರಿಬ್ಬನ್ ಐ ಲೈನರ್ ಸ್ಟೈಲ್‌ನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರವಲ್ಲದೆ ರೆಗ್ಯುಲರ್ ಡೇಸ್‌ನಲ್ಲಿ ಸಹ ಮಾಡಿಕೊಳ್ಳಬಹುದು. ಇದು ವೆಸ್ಟರ್ನ್‌ವೇರ್‌ನೊಂದಿಗೆ ಹೆಚ್ಚು ಸ್ಟೈಲಿಶ್ ಆಗಿ ತೋರುತ್ತದೆ.
ಗ್ಲಿಟರ್ ಐ ಲೈನರ್
ಗ್ಲಿಟರ್ ಲಿಪ್‌ಸ್ಟಿಕ್, ಗ್ಲಿಟರ್ ಐ ಶ್ಯಾಡೊ ಮತ್ತು ಗ್ಲಿಟರ್ ಹೇರ್ ಹೈ ಲೈಟರ್‌ನಂತೆ ಇಂದಿನ ದಿನಗಳಲ್ಲಿ ಗ್ಲಿಟರ್ ಐ ಲೈನರ್ ಕೂಡ ಡಿಮ್ಯಾಂಡ್‌ನಲ್ಲಿದೆ. ಇದು ಇಂಡಿಯನ್ ಮತ್ತು ವೆಸ್ಟರ್ನ್, ಎರಡೂ ಔಟ್‌ಫಿಟ್‌ಗಳಿಗೆ ಹೊಂದಿಕೆಯಾಗುತ್ತದೆ. ಇದನ್ನು ಕೇವಲ ಮೇಲೆ ಅಥವಾ ಎರಡೂ ಕಣ್ಣೆವೆಗಳ ಮೇಲೆ ಹಚ್ಚಬಹುದಾಗಿದೆ. ನೀವು ನೇರವಾಗಿ ಗ್ಲಿಟರ್ ಐ ಲೈನರ್‌ನ್ನು ಹಚ್ಚಿಕೊಳ್ಳಬಹುದು ಅಥವಾ ಬ್ಲ್ಯಾಕ್, ಬ್ರೌನ್, ಬ್ಲೂ ಶೇಡ್‌ನ ಐ ಲೈನರ್ ಹಚ್ಚಿ ಅದರ ಮೇಲೆ ಗ್ಲಿಟರ್ ಐ ಲೈನರ್ ಹಚ್ಚಬಹುದು.
ಸಿಲ್ವರ್, ಗೋಲ್ಡನ್ ಅಲ್ಲದೆ ಇತರೆ ಅನೇಕ ಶೇಡ್‌ಗಳಲ್ಲಿ ಗ್ಲಿಟರ್ ಐ ಲೈನರ್ ದೊರೆಯುತ್ತದೆ. ಅಟ್ರಾಕ್ಟಿವ್ ಎಫೆಕ್ಟ್ ಗಾಗಿ ಜೆಲ್ ಐ ಲೈನರ್ ಬಳಸಿ. ನೈಟ್ ಪಾರ್ಟಿಗಳಲ್ಲಿ ಐ ಮೇಕಪ್‌ನ್ನು ಹೈಲೈಟ್ ಮಾಡಲು ಗ್ಲಿಟರ್ ಐ ಲೈನರ್ ಸ್ಟೈಲ್‌ಗಿಂತ ಉತ್ತಮ ಆಪ್ಶನ್
ಬೇರೊಂದಿಲ್ಲ.
– ಪ್ರತಿನಿಧಿ