ಮಾನ್‌ಸೂನ್‌ನಲ್ಲಿ ರೋಮರಂಧ್ರಗಳು ತೆರೆದಿರುತ್ತವೆ. ಆದ್ದರಿಂದ ಮೇಕಪ್‌ಗೆ ಮೊದಲು ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮಾಯಿಶ್ಚರೈಸ್ ಮಾಡಿ. ಮೇಕಪ್‌ಗೆ 1 ದಿನ ಮೊದಲು ಎಕ್ಸ್ ಪೋಲಿಯೇಶನ್ ಅಥವಾ ಸ್ಕ್ರಬಿಂಗ್ ಮಾಡಿಕೊಳ್ಳಬಹುದು. ಇದರಿಂದ ಚರ್ಮದ ಮೃತ ಪದರ ಹೋಗಿ ಮುಖ ಸುಂದರ ಮತ್ತು ಕಾಂತಿಯುತವಾಗಿ ಗೋಚರಿಸುತ್ತದೆ.
ಮಾನ್‌ಸೂನ್‌ಲ್ಲಿ ಮೇಕಪ್‌ಗಾಗಿ ಲಾಂಗ್ ಲಾಸ್ಟಿಂಗ್ ಮತ್ತು ವಾಟರ್‌ಪ್ರೂಫ್ ಪ್ರಾಡಕ್ಟ್ ಆರಿಸಿಕೊಳ್ಳಿ. ಅದು ಕನಿಷ್ಠ 7-8 ಗಂಟೆಗಳ ಕಾಲ ಉಳಿಯುವಂತಿರಬೇಕು. ಏಕೆಂದರೆ ಬೆವರಿನಿಂದಾಗಿ ಮೇಕಪ್‌ಅಳಿಸಿ ಹೋಗುವುದು ಅಥವಾ ಒಡೆದ ಗೆರೆಗಳು ಮೂಡಬಹುದು.
ನಿಮ್ಮ ಸ್ಕಿನ್ ಟೈಪ್ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅಂದರೆ ಅದು ಡ್ರೈ, ಸೆನ್ಸಿಟಿವ್, ಆಯ್ಲಿ, ಡೀಹೈಡ್ರೇಟೆಡ್, ಕಾಂಬಿನೇಶನ್‌ಮುಂತಾದ ಯಾವ ಗುಣವುಳ್ಳದ್ದು ಎಂಬುದು. ಮಾನ್‌ಸೂನ್‌ನಲ್ಲಿ ಚರ್ಮವನ್ನು ಹೈಡ್ರೇಟ್ ಮಾಡುವುದು ಎಂದರೆ ಚರ್ಮದ ಆರ್ದ್ರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊರಗಿನ ಹವಾಮಾನಕ್ಕೆ ಅನುಸಾರವಾಗಿ ಅದನ್ನು ಸಮತೋಲನವಾಗಿ ಇರಿಸಿಕೊಳ್ಳಬೇಕು. ಅದಕ್ಕಾಗಿ ಸಾಕಷ್ಟು ನೀರು, ಎಳನೀರು, ಮಜ್ಜಿಗೆ ಸೇವಿಸಿ. ಕಾಫಿ/ಟೀ ಸೇವನೆಯನ್ನು ಕಡಿಮೆ ಮಾಡಿ.
ಮೊದಲು ಮುಖ ಮತ್ತು ಕುತ್ತಿಗೆಗೆ ಬೇಸ್ ಹಾಗೂ ಪ್ರೈಮರ್ ಹಚ್ಚಿ. ಪ್ರೈಮರ್ ನಿಮ್ಮ ಚರ್ಮದಲ್ಲಿ ಪಿಎಚ್‌ನ್ನು ಸಮತೋಲನಗೊಳಿಸುತ್ತದೆ ಮತ್ತು ಆಯ್ಲಿ ಆಗಿ ತೋರದಂತೆ ಮಾಡುತ್ತದೆ. ಇದರಿಂದ ಮೇಕಪ್ ಹೆಚ್ಚು ಕಾಲ ಉಳಿದಿರುತ್ತದೆ. ಚರ್ಮ ಆಯ್ಲಿ ಆಗಿದ್ದು ಹೆಚ್ಚು ಬೆವರು ಬರುವಂತಿದ್ದರೆ ಮೇಕಪ್‌ಗೆ ಮೊದಲು ಮಂಜುಗಡ್ಡೆಯಿಂದ ಕೋಲ್ಡ್ ಕಂಪ್ರೆಶನ್‌ಮಾಡಬಹುದು. ಬೇಸ್ ಹಚ್ಚಿದ ನಂತರ ವಾಟರ್‌ಪ್ರೂಫ್ ಫೌಂಡೇಶನ್ ಅಥವಾ ಸಿಲಿಕಾನ್ ಬೇಸ್ ಫೌಂಡೇಶನ್ ಹಚ್ಚಿ. ಕಂಗಳ ಮೇಕಪ್‌ಗೆ ಮೆಟಾಲಿಕ್, ಶಿಮರ್ ಮತ್ತು ಮ್ಯಾಟ್ ಐ ಶ್ಯಾಡೊ ಬಳಸಿ. ಇದು ಮಾನ್‌ಸೂನ್ ಕಾಲಕ್ಕೆ ಒಳ್ಳೆಯ ಸಾಧನ.
ಮೇಕಪ್ ಮಾಡಿಸಿದ ಮೇಲೆ ಮೇಕಪ್ ಫಿಕ್ಸರ್ ಸ್ಪ್ರೇ ಮಾಡುವುದನ್ನು ಮರೆಯಬೇಡಿ. ಇದನ್ನು ಮುಖದಿಂದ 6 ಅಂಗುಲ ದೂರದಲ್ಲಿರಿಸಿಕೊಂಡು ಸ್ಪ್ರೇ ಮಾಡಿ. ಇದು ಮೇಕಪ್‌ನ್ನು ಲಾಕ್ ಮಾಡಿ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.
ವಿವಾಹ ಸಮಾರಂಭಕ್ಕೆ ಹೋಗುವುದಿದ್ದರೆ ಆರಾಮದಾಯಕ ಉಡುಪು ಧರಿಸಿ, ಬಟ್ಟೆ ಶರೀರಕ್ಕೆ ಅಂಟದಂತಿರಲಿ. ಏಕೆಂದರೆ ಬೆವರಿನಿಂದಾಗಿ ಬಟ್ಟೆಯು ಅಂಟುವಂತಾದರೆ ಅಸಹಜತೆಯ ಅನುಭವವಾಗುತ್ತದೆ.
ಈಗ ಹಗುರವಾದ ಆಭರಣಗಳು ಫ್ಯಾಷನ್‌ನಲ್ಲಿದೆ. ಮದುವೆಗೆ ಫ್ಲೇರ್ ಅಥವಾ ವುಡನ್ ನೆಕ್‌ಪೀಸ್ ಆರಿಸಿಕೊಳ್ಳಬಹುದು ಅಥವಾ ಮೆಟಲ್‌ನ ಹಗುರವಾದ ಆಭರಣವನ್ನು ಧರಿಸಬಹುದು.
ಉಡುಪು ಮತ್ತು ಆಭರಣಗಳ ನಂತರ ಬರುವುದು ಫುಟ್‌ವೇರ್‌ನ ಆಯ್ಕೆ. ಸರಾಗವಾಗಿ ಗಾಳಿ ಆಡುವಂತಹ ಮತ್ತು ಕಾಲುಗಳು ಬೆವರದಂತಹ ಫುಟ್‌ವೇರ್ ಆರಿಸಿಕೊಳ್ಳಿ.
ಮಾನ್‌ಸೂನ್‌ನ ವಿವಾಹ ಸಮಾರಂಭದಲ್ಲಿ ಕೂದಲನ್ನು ಕರ್ಲ್ ಮಾಡುವುದು ಬೇಡ. ತೇವದ ಕಾರಣ ಹೇರ್‌ಸ್ಟೈಲ್ ಸಡಿಲವಾಗಿ ಅಂದಗೆಡುತ್ತದೆ. ಈ ಕಾಲದಲ್ಲಿ ಬನ್, ಪಫ್, ಕ್ರಾಸ್ ಬ್ರೆಡ್ಸ್, ಸೈಡ್ ಫ್ರೆಂಚ್ ಬ್ರೆಡ್ಸ್ ಆರಿಸಿಕೊಳ್ಳುವುದು ಉತ್ತಮ.
- ಎನ್. ಮಂಜುಳಾ