ತಾರೆಯರ ಮುಖದಲ್ಲಿನ ಲೋಪದೋಷಗಳನ್ನು ಮರೆಮಾಚಿ ಇವರಿಗೆ ಅಪೂರ್ವ ಸೌಂದರ್ಯ ಒದಗಿಸುವ ಈ ಮೇಕಪ್‌ನ ಹಿರಿಮೆ ಬಗ್ಗೆ ನಿಮಗೆ ಗೊತ್ತೇ? ಅದು ಅವರ ಚೆಲುವಿನಲ್ಲಿ ಒಂದಿಷ್ಟೂ ಕಲೆಗುರುತುಗಳ ಕುಂದಿಲ್ಲದಂತೆ ಎತ್ತಿ ತೋರಿಸುತ್ತದೆ. ಇಂಥ ಮೇಕಪ್‌ ಹೇಗೆ ಸಿದ್ಧಗೊಳ್ಳುತ್ತದೆ? ಬನ್ನಿ, ವಿವರವಾಗಿ ತಿಳಿಯೋಣ.

ಮೀಡಿಯಾ ಮೇಕಪ್‌ನಿಂದ ಮುಖದಲ್ಲಿನ ಪ್ರತಿಯೊಂದು ಸಣ್ಣಪುಟ್ಟ ಲೋಪದೋಷಗಳನ್ನೂ ಮರೆಮಾಚಬಹುದು ಎಂಬುದು ನಿಜಕ್ಕೂ ಸೋಜಿಗದ ಸಂಗತಿ. ಅದೇ ತರಹ ಆಳಕ್ಕಿಳಿದ ಭಾಗಗಳನ್ನು ತುಂಬಿಕೊಂಡಂತೆ ತೋರಿಸಬಹುದಾಗಿದೆ. ಏಕೆಂದರೆ ಇಂದಿನ ಆಧುನಿಕ ಕ್ಯಾಮೆರಾಗಳು ಮುಖದ ಸಣ್ಣಪುಟ್ಟ ಕುಂದುಕೊರತೆಗಳನ್ನೂ ತೋರಿಸಲು ಸಮರ್ಥವಾಗಿವೆ. ಇದರ ಜೊತೆಗೆ ಪ್ರಖರ ಬೆಳಕಿನಿಂದಲೂ ಚರ್ಮವನ್ನು ರಕ್ಷಿಸಬೇಕಾಗಿದೆ. ಹೀಗಾಗಿ ಬೇಸ್‌ ಸದಾ ಉತ್ತಮ ಗುಣಮಟ್ಟದ್ದೇ ಆಗಿರಬೇಕು. ಆಗ ಮಾತ್ರ ಚರ್ಮ ಸುಲಭವಾಗಿ ಕವರ್‌ ಆಗುತ್ತದೆ.

ಕಂಗಳ ಮೇಕಪ್

ಎಲ್ಲಕ್ಕೂ ಮೊದಲು ಕಂಗಳ ಮೇಕಪ್‌ ಮಾಡಿ. ಕಂಗಳಿಗೆ ಬ್ರಶ್‌ ನೆರವಿನಿಂದ ಮ್ಯಾಟ್‌ ಗೋಲ್ಡನ್‌, ಬ್ಲ್ಯಾಕ್‌ ಐಶ್ಯಾಡೋಗಳನ್ನು ಹಚ್ಚಿರಿ. ಕಂಗಳ ಒಳಭಾಗಕ್ಕೆ ಗೋಲ್ಡನ್‌ ಮತ್ತು ಹೊರಭಾಗಕ್ಕೆ ಬ್ಲ್ಯಾಕ್‌ ಐಶ್ಯಾಡೋ ಹಚ್ಚಿರಿ. ಇನ್ನು ಬ್ರಶ್‌ ನೆರವಿನಿಂದ ಇವು ಬೇರೆ ಬೇರೆ ಅಲ್ಲ ಎಂಬಂತೆ ಮರ್ಜ್‌ ಮಾಡಿ ತೋರಿಸಿ. ಹೊರಗಿನ ಮೂಲೆಗಳು ಡಾರ್ಕ್‌ ಆಗಿರಬೇಕು. ನಂತರ ಜೆಲ್ ಐಲೈನರ್‌ ಅಥವಾ ಕಾಜಲ್ಲನ್ನು ಒಳಭಾಗಕ್ಕೆ ಹಚ್ಚುತ್ತಾ ಹೊರಗಡೆಗೆ ಒಂದು ಸ್ಟ್ರೋಕ್‌ ಕೊಡಿ. ಕಂಗಳು ಚಿಕ್ಕದೆನಿಸಿದರೆ, ಐ ಲೈನರ್‌ ದಪ್ಪಗಿರಲಿ, ಕಂಗಳು ದೊಡ್ಡದೆನಿಸಿದರೆ ತೆಳು ಲೈನರ್‌ ಎಳೆಯಿರಿ. ಐಶ್ಯಾಡೋ ಹಚ್ಚುವ ಮೊದಲು ಕಂಗಳಿಗೆ ಅಗತ್ಯ ಒಂದು ಬೇಸ್‌ಕೋಟ್‌ ಎಳೆಯಿರಿ, ಆಗ ಐಶ್ಯಾಡೋ ದೀರ್ಘ ಕಾಲ ಉಳಿಯುತ್ತದೆ. ನಂತರ ಕಂಗಳ ವಾಟರ್‌ಲೈನ್‌ ಏರಿಯಾದಲ್ಲಿ ಬ್ರಶ್‌ನಿಂದ ಕಾಜಲ್ ತೀಡಿರಿ. ಕಂಗಳನ್ನು ದೊಡ್ಡದಾಗಿ ತೋರಿಸಲು ಬಯಸಿದರೆ, ಕಂಗಳ ಕೆಳಭಾಗದಲ್ಲಿ ಹೊರಭಾಗದ ಕಡೆಗೆ ಲೈನರ್‌ ಎಳೆದು, ವಾಟರ್‌ಲೈನ್‌ ಏರಿಯಾದಲ್ಲಿ ಬ್ರಶ್‌ನಿಂದ ವೈಟ್‌ನರ್‌ ಹಚ್ಚಿರಿ. ಇದರಿಂದ ಕಂಗಳು ದೊಡ್ಡದಾಗಿ ಕಾಣಿಸುತ್ತವೆ. ಇದಾದ ನಂತರ, ಕಂಗಳ ಮೇಲೆ ಕೆಳಭಾಗಗಳಲ್ಲಿ ಐ ಲ್ಯಾಶೆಸ್‌ ಮೇಲೆ ಮಸ್ಕರಾ ತೀಡಿರಿ. ಐಬ್ರೋಸ್‌ಗೆ ಕ್ಲೀನ್‌ ಲುಕ್ಸ್ ನೀಡಲು ಬ್ರೌನ್‌ ಪೆನ್ಸಿಲ್ ಅಥವಾ ಶ್ಯಾಡೋ ಬಳಸಿರಿ.

ಫೇಸ್‌ ಬೇಸ್‌ ಮೇಕಪ್‌

ಕಂಗಳ ಮೇಕಪ್‌ ನಂತರ, ಆ ಮುಖದಲ್ಲಿನ ಭಾಗ ಬಿಟ್ಟು ಉಳಿದ ಭಾಗಗಳನ್ನು ಚೆನ್ನಾಗಿ ಕ್ಲೀನ್‌ ಮಾಡಿ. ಐಶ್ಯಾಡೋ ಕೆಳಗೆ ಜಾರಿದ್ದರೆ, ಅದು ಕ್ಲೀನ್‌ ಆಗಬೇಕು. ಇದಾದ ನಂತರ ಇಡೀ ಮುಖಕ್ಕೆ ಜೆಲ್ ಯುಕ್ತ ಪ್ರೈಮರ್‌ ಹಚ್ಚಿರಿ. ಮುಖದ ಮೇಲೆ ಕಲೆ ಗುರುತುಗಳಿದ್ದರೆ, ಪ್ರೈಮರ್‌ ನಂತರ ಕನ್ಸೀಲರ್‌ ಹಚ್ಚಬೇಕು. ಕನ್ಸೀಲರ್‌ನ್ನು ಥಪಥಪ ಎಂದು ಬೆರಳುಗಳಿಂದ ಬಡಿಯುತ್ತಾ ಹಚ್ಚಬೇಕು. ಆಗ ಕಲೆ ಗುರುತು ಚೆನ್ನಾಗಿ ಕವರ್‌ ಆಗುತ್ತದೆ. ನಂತರ ಇಡೀ ಮುಖದ ಮೇಲೆ ಡರ್ಮಾದ ಒಂದು ಟೋನ್‌  ಡಾರ್ಕ್‌ ಬೇಸ್‌ ಹಚ್ಚಿರಿ. ಬೇಸ್‌ನ್ನು ಚೆನ್ನಾಗಿ ಮರ್ಜ್‌ ಮಾಡಿ.

ಫೇಸ್‌ ಕರೆಕ್ಷನ್‌

ಮೀಡಿಯಾ ಮೇಕಪ್‌ನಲ್ಲಿ ಫೇಸ್‌ ಕರೆಕ್ಷನ್‌ ಮಾಡುವುದು ಅತಿ ಅಗತ್ಯ. ಆಗ ಮಾತ್ರ ಕ್ಯಾಮೆರಾದಲ್ಲಿ ಫೇಸ್‌ನ ಲುಕ್ಸ್ ಶಾರ್ಪ್‌ ಆಗಿರುತ್ತದೆ. ಇದಕ್ಕಾಗಿ ಮುಖದಲ್ಲಿ ಆಳಹೊಕ್ಕ ಭಾಗಗಳನ್ನು ಉಬ್ಬಿ ಬಂದಂತೆ ತೋರಿಸಬೇಕು. ಮೂಗು ಸಣ್ಣಗೆ, ಚಪ್ಪಟೆ ಆಗಿದ್ದರೆ, ಎರಡೂ ಬದಿಯ ಹೊರಭಾಗಕ್ಕೆ ಡಾರ್ಕ್‌ ಬ್ರೌನ್‌ ಬೇಸ್‌ ಸ್ಪಾಂಜ್‌ ಬ್ರಶ್‌ ಸಹಾಯದಿಂದ ಹಚ್ಚಿರಿ ಹಾಗೂ ಅದನ್ನು ಬೆರಳುಗಳ ನೆರವಿನಿಂದ ಮರ್ಜ್‌ ಮಾಡಿ. ಹೀಗೆಯೇ ಹಣೆ ಮತ್ತು ಚೀಕ್‌ಬೋನ್ಸ್ ಗೂ ಸಹ ಮಾಡಬೇಕು. ಇದರಿಂದ ಅಗಲವಾದ ದೊಡ್ಡ ಮುಖ ಸರಿಯಾಗಿ ಕಾಣುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ