ಕೆಲವು ಮುಖಗಳಿಗೆ ದಪ್ಪಗಿನ ಐಬ್ರೋಸ್‌ ಚೆನ್ನಾಗಿ ಒಪ್ಪುತ್ತದೆ, ಮತ್ತೆ ಕೆಲವು ಮುಖಗಳಿಗೆ ತೆಳುವಾದ 2 ಗೆರೆಗಳೇ ಸಾಕು. ಐಬ್ರೋಸ್‌ ಮುಖದ ಆಕಾರಕ್ಕೆ ತಕ್ಕಂತೆ ಇಲ್ಲದಿದ್ದರೆ, ಜನ ಅಂಥವರನ್ನು ನೋಡಿ ಆಡಿಕೊಳ್ಳಬಹುದು. ಇವಕ್ಕೆ ಸರಿಯಾದ ಆಕಾರ ನೀಡಲು ಪ್ಲಕರ್‌ ಅಥವಾ ಥ್ರೆಡ್‌ ಬಳಸುವುದು ಅತ್ಯಗತ್ಯ. ಐಬ್ರೋಸ್‌ ಶೇಪ್‌ ಬಹುತೇಕ ಮುಖದ ರಚನೆಯನ್ನೇ ಆಧರಿಸಿದೆ. ಆದ್ದರಿಂದ ಮುಂದಿನ ಸಲ ಯಾವಾಗ ಬ್ಯೂಟಿಪಾರ್ಲರ್‌ಗೆ ಥ್ರೆಡಿಂಗ್‌ಗೆಂದು ಹೋದರೂ ಈ ಅಂಶಗಳನ್ನು ನೆನಪಿಡಿ :

ಉದ್ದದ ಮುಖ :  ಉದ್ದನೆಯ ಮುಖವುಳ್ಳ ಹೆಂಗಸರು ಐಬ್ರೋಸ್‌ನ ಉದ್ದಳತೆಯನ್ನು ಕಡಿಮೆ ಮಾಡಿಸಬಾರದು. ಜೊತೆಗೆ ಅವುಗಳ ಬಳುಕುವಿಕೆ ಐಬ್ರೋಸ್‌ಗೆ ಹತ್ತಿರವಿರುವಂತೆ ನೋಡಿಕೊಳ್ಳಿ. ಹೀಗೆ ಮಾಡುವುದರಿಂದ ಮುಖ ಬಹಳ ಉದ್ದ ಅಲ್ಲ ಎನಿಸುತ್ತದೆ. ಇಂಥ ಮುಖಕ್ಕೆ ಸೀದಾ, ಬಾದಾಮಿ ಆಕಾರ ಅಥವಾ ಅಂಡಾಕಾರ ಚೆನ್ನಾಗಿ ಒಪ್ಪುತ್ತದೆ.

ಗುಂಡಗಿನ ಮುಖ : ಗುಂಡು ಮುಖಕ್ಕೆ ಐಬ್ರೋಸ್‌ನ ಬಳುಕುವಿಕೆ ಐಬ್ರೋಸ್‌ಗಿಂತ ಇನ್ನೂ ತುಸು ಮೇಲೆ ಇರಬೇಕು. ಹೀಗೆ ಮಾಡುವುದರಿಂದ ಮುಖ ಬಹಳ ತುಂಬಿಕೊಂಡಂತೆ ಅನಿಸುವುದಿಲ್ಲ. ಇಂಥ ಮುಖ ಚಹರೆಯುಳ್ಳವರಿಗೆ ಧನುಸ್ಸಿನ ಆಕಾರದ ಐಬ್ರೋಸ್‌ ಹೆಚ್ಚು ಒಪ್ಪುತ್ತದೆ.

ಅಂಡಾಕಾರದ ಮುಖ : ಮುಖ ಚಹರೆ ಹೀಗಿದ್ದರೆ ಎಲ್ಲ ವಿಧದಲ್ಲೂ ಇದು ಉತ್ತಮ ಎನಿಸುತ್ತದೆ. ಆದರೆ ಇಂಥ ಮುಖಕ್ಕೆ ಎಲ್ಲಾ ತರಹದ ಐಬ್ರೋಸ್‌ ಶೇಪ್‌ ಹೇರ್‌ಕಟ್‌, ಮೇಕಪ್‌ ಇತ್ಯಾದಿ ಸೂಟ್‌ ಆಗುತ್ತದೆ. ಅಂಡಾಕಾರದ ಶೇಪ್‌ ಐಬ್ರೋಸ್‌ ಇಂಥ ಮುಖಕ್ಕೆ ಚೆನ್ನಾಗಿ ಒಪ್ಪುತ್ತದೆ.

ಚೌಕಾಕಾರದ ಮುಖ : ಇಂಥ ಮುಖಚಹರೆಯುಳ್ಳ ಮಹಿಳೆ ತಮ್ಮ ಐಬ್ರೋಸ್‌ನ್ನು ರೌಂಡ್‌ ಅಥವಾ ಬಿಲ್ಲಿನ ಆಕಾರದಲ್ಲಿ  ಮಾಡಿಸಿಕೊಂಡರೆ, ಆ ಶೇಪ್‌ ಅವರಿಗೆ ಚೆನ್ನಾಗಿ ಒಪ್ಪುತ್ತದೆ, ಸಾಫ್ಟ್ ಲುಕ್ಸ್ ನೀಡುತ್ತದೆ.

ಸಣ್ಣ ಮುಖ : ಇಂಥ ಮುಖ ಚಹರೆಯುಳ್ಳ ಮಹಿಳೆಯರಿಗೆ ಎರಡೂ ಐಬ್ರೋಸ್‌ಗಳ ನಡುವೆ ಸಾಮಾನ್ಯಕ್ಕಿಂತ ಹೆಚ್ಚಿನ ಅಂತರ ಇರುವಂತೆ ನೋಡಿಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ, ಮೂಗು ತುಸು ಉದ್ದಕ್ಕಿದ್ದರೆ, ಐಬ್ರೋಸ್‌ ಬೋನ್‌ಗಿಂತಲೂ ಹೆಚ್ಚು ಎತ್ತರದಲ್ಲಿ ಮಾಡಿಸಬಾರದು, ಇಲ್ಲದಿದ್ದರೆ ದೊಡ್ಡ ಕಂಗಳು ಸಹ ಸಣ್ಣಗೆ ತೋರುತ್ತವೆ. ಕಂಗಳು ನಿಜಕ್ಕೂ ಬಹಳ ದೊಡ್ಡದಾಗಿದ್ದರೆ, ಐಬ್ರೋಸ್‌ನ್ನು ತೆಳ್ಳಗೆ ಮಾಡಿಸಿ. ಕಂಗಳು ಸಣ್ಣದಾಗಿದ್ದರೆ ಐಬ್ರೋಸ್‌ ದಪ್ಪಗೆ, ಉದ್ದಕ್ಕಿರಲಿ.

ನಿಮ್ಮನ್ನು ನೀವು ಅಲಂಕರಿಸಿ

ನಿಯಮಿತವಾಗಿ ಥ್ರೆಡಿಂಗ್‌ ಮಾಡಿಸುವುದು ಸಾಧ್ಯವಿಲ್ಲದಿದ್ದರೆ, ಆಗ ನೀವು ಮನೆಯಲ್ಲೇ ವಾರಕ್ಕೊಂದು ಸಲ ಪ್ಲಕರ್‌ನಿಂದ ಶೇಪ್‌ ಕೊಡಬಹುದು. ಆದರೆ ಇದಕ್ಕಾಗಿ ಬ್ಯೂಟಿಪಾರ್ಲರ್‌ಗಳಲ್ಲಿ ಮಾಡುವಂತೆಯೇ ಐಬ್ರೋಸ್‌ಗೆ ಪರ್ಫೆಕ್ಟ್ ಶೇಪ್‌ ಕೊಡಬೇಕು. ಇಲ್ಲದಿದ್ದರೆ ಒಂದು ದೊಡ್ಡದು, ಮತ್ತೊಂದು ಚಿಕ್ಕದು ಆಗಿಹೋದೀತು!

ಪ್ಲಕಿಂಗ್‌ ಮಾಡಿಕೊಳ್ಳಲು ಬೇಕಾದುದು :

- ಸದಾ ಹಗಲು ಹೊತ್ತಿನಲ್ಲಿ ಮಾತ್ರ ಐಬ್ರೋಸ್‌ಗೆ ಶೇಪ್‌ ನೀಡಬೇಕು.

- ಎಲ್ಲಿಂದ ಕೂದಲು ಮೊಳೆತಿದೆಯೋ, ಕೇವಲ ಅಲ್ಲಿಂದ ಮಾತ್ರ ಎಕ್ಸ್ಟ್ರಾ ಕೂದಲನ್ನು ತೆಗೆದುಹಾಕಬೇಕು.

- ಎರಡೂ ಹುಬ್ಬುಗಳ ನಡುವೆ ಸೂಕ್ತ ಅಂತರವಿರಲಿ.

- ಶಾಂತ ಮನಸ್ಸಿನಿಂದ ಪ್ಲಕಿಂಗ್‌ ಮಾಡಿ, ಆಗ ನಾನಾ ಯೋಚನೆಗಳು ಖಂಡಿತಾ ಬೇಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ