ಬೇಸಿಗೆಯ ಉರಿಬಿಸಿಲಲ್ಲಿಯೂ ತುಟಿಗಳು ಒಣಗುವುದು ಅಥವಾ ಒಡೆಯುವುದು ಮಾಮೂಲಿ ವಿಷಯ. ಆದರೆ ಇವುಗಳನ್ನು ನಿಯಮಿತವಾಗಿ ನೋಡಿಕೊಂಡು, ಮನೆಮದ್ದು ನೀಡುತ್ತಿದ್ದರೆ ತುಟಿಗಳನ್ನು ಜೋಪಾನವಾಗಿ ಗಮನಿಸಿಕೊಳ್ಳಬಹುದು. ಆಗ ಅವು ತಾಜಾ ಆಗಿ ನಳನಳಿಸುತ್ತವೆ. ಎಲ್ಲಕ್ಕೂ ಮೊದಲು ನಾವು ತಿಳಿಯಬೇಕಾದುದು ಎಂದರೆ, ಈ ತುಟಿಗಳು ಒಡೆಯುವುದು ಏಕೆ? ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಹೆಚ್ಚಿದ ಉಷ್ಣತೆ, ಬಿಸಿ ಗಾಳಿ, ಸನ್‌ಸ್ಟ್ರೋಕ್‌.... ಇತ್ಯಾದಿಗಳ ಕಾರಣ ತುಟಿಗಳು ಒಡೆಯುತ್ತವೆ, ಬಿರಿಯುತ್ತವೆ.

ಮತ್ತಿತರ ಕಾರಣಗಳು :

- ತುಟಿಗಳು ಒಣಗತೊಡಗಿದಂತೆ ನಾವು ಅವನ್ನು ನಾಲಿಗೆಯಿಂದ ಸರಿಕೊಳ್ಳುತ್ತಿದ್ದರೆ, ಜೊಲ್ಲು ತುಟಿಗಳ ಆರ್ದ್ರತೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ತುಟಿಗಳು ಪದರ ಪದರವಾಗಿ ಬಿಟ್ಟುಕೊಳ್ಳುತ್ತವೆ. ಮೇಲಿನ ಪೊರೆ ಹೋದಂತೆ, ಕೆಳಪದರ ಮೇಲೆ ಬಂದು ಒಣಗುತ್ತದೆ. ಈ ರೀತಿ ತುಟಿಗಳು ಒಡೆಯುತ್ತಲೇ ಇರುತ್ತವೆ.

- ತುಟಿಗಳು ತಮ್ಮ ಆರ್ದ್ರತೆ ಕಳೆದುಕೊಳ್ಳದಿರಲು ಯಾವುದೇ ಗ್ರಂಥಿಗಳಿಲ್ಲ. ಬಿಸಿಗಾಳಿಯಲ್ಲಿ ಡ್ರೈನೆಸ್‌ ಅಂಶ ಹೆಚ್ಚಿರುತ್ತದೆ. ಅದರಿಂದಾಗಿ ತುಟಿ ಒಡೆಯುತ್ತದೆ. ಹೀಗೆ ತುಟಿಗಳು ಹೆಚ್ಚಾಗಿ ಒಡೆಯುತ್ತಿದ್ದರೆ ಅದು ದೇಹ ಡೀಹೈಡ್ರೇಶನ್‌ಗೆ ತಿರುಗುತ್ತಿದೆ ಎಂದರ್ಥ.

- ನೀವು ನಿಮ್ಮ ತುಟಿಗಳನ್ನು ಸರಿಯಾದ ಸನ್‌ಸ್ಕ್ರೀನ್‌ ಬಳಸಿ ರಕ್ಷಿಸಿಕೊಳ್ಳದಿದ್ದರೆ, ಆಗಲೂ ಅವು ಬಿರಿಯುತ್ತವೆ.

- ಬೇಸಿಗೆಯಲ್ಲಿ ಧೂಳು, ಮಣ್ಣು, ಪರಿಸರ ಮಾಲಿನ್ಯ ಇತ್ಯಾದಿ ಕಾರಣಗಳಿಂದಲೂ ತುಟಿ ಒಡೆಯುತ್ತದೆ.

- ನಾವು ಬಾಯಿಂದ ಉಸಿರಾಡುತ್ತಿದ್ದರೆ, ಆಗ ಬಿಸಿಗಾಳಿ ತುಟಿಗಳ ಮೇಲಿನಿಂದ ಹೊರಬರುತ್ತದೆ. ಆಗಲೂ ಅದು ತುಟಿ ಒಡೆಯಲು ಕಾರಣವಾಗುತ್ತದೆ.

- ಎಷ್ಟೋ ಸಲ ಕೆಲವು ಟೂಥ್‌ಪೇಸ್ಟ್ ಗಳು ತುಟಿಗಳ ತ್ವಚೆಗೆ ಹೊಂದುವುದೇ ಇಲ್ಲ. ಹಾಗಾದಾಗಲೂ ತುಟಿಗಳು ಒಡೆಯುವುದು ಸಾಮಾನ್ಯ.

- ಎಷ್ಟೋ ಸಲ ಹುಳಿ ಹಣ್ಣುಗಳು, ಜೂಸ್‌, ಸಾಸ್‌, ಕೆಚಪ್‌ಗಳು ತುಟಿಗಳಲ್ಲಿ ಅಲರ್ಜಿ ಹುಟ್ಟಿಸುತ್ತವೆ. ಆಗಲೂ ತುಟಿ ಒಡೆಯುವಿಕೆ ತಪ್ಪದು.

- ಕೆಲವು ಬಗೆಯ ಔಷಧಿಗಳ ಸೇವನೆಯಿಂದಲೂ ಹೀಗಾಗುತ್ತದೆ. ಆದ್ದರಿಂದ ಅಂಥ ಔಷಧಿಗಳ ಸೇವನೆ ಅನಿವಾರ್ಯವಾದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು, ನೀರಾದ ಜೂಸ್‌, ನೀರು ಮಜ್ಜಿಗೆ, ಎಳನೀರು, ಬಾರ್ಲಿ, ಕಾದ ನೀರು ಇತ್ಯಾದಿ ಕುಡಿಯುತ್ತಿರಬೇಕು.

ಕೇವಲ ಬಿಸಿಲಿನಲ್ಲಿ ಓಡಾಡುವ ಮಹಿಳೆಯರಿಗೆ ಮಾತ್ರವೇ ತುಟಿ ಒಡೆಯುತ್ತದೆ ಅಂತಲ್ಲ. ಮನೆಯಲ್ಲೇ ಇರುವ ಮಹಿಳೆಯರಿಗೂ ಸಹ ಬಿಸಿ ಹಾಗೂ ಶುಷ್ಕ ಹವೆ ತಗಲುತ್ತಿದ್ದರೆ, ಅವರಿಗೂ ತುಟಿ ಒಡೆಯುತ್ತದೆ. ತುಟಿಗಳ ತ್ವಚೆ ಬಹಳ ಸಂವೇದನಾಶೀಲ ಆಗಿರುತ್ತದೆ. ಇದನ್ನು ಸರಿಯಾಗಿ ಲ್ಯೂಬ್ರಿಕ್ರೆಂಟ್‌ ಮಾಡದಿದ್ದರೆ, ತುಟಿ ಒಡೆಯುವುದು ತಪ್ಪದು.

ಇದಕ್ಕಾಗಿ ಪಾಲಿಸಬೇಕಾದ ಮನೆಮದ್ದು ಹೀಗಿದೆ :

- ಬೇಸಿಗೆಯಲ್ಲಿ ಆದಷ್ಟೂ ಹೆಚ್ಚು ಹೆಚ್ಚು ದ್ರವ ಪದಾರ್ಥ ಸೇವಿಸಿ. ಇದರಿಂದ ದೇಹದ ಮತ್ತು ತುಟಿಗಳ ಆರ್ದ್ರತೆಗಳೆರಡೂ ಹೆಚ್ಚುತ್ತವೆ.

- ಬೆಳಗ್ಗೆ ಬ್ರಶ್‌ ಮಾಡುವಾಗ, ತುಟಿಗಳು ಡ್ರೈ ಆಗಿವೆ ಎನಿಸಿದರೆ, ಲಿಪ್‌ ಬ್ರಶ್‌ನ್ನು ಲಘುವಾಗಿ ತುಟಿಗಳ ಮೇಲಾಡಿಸಿ. ನಂತರ ಲಿಪ್‌ಬಾಮ್ ತೀಡಿರಿ.

- ರಾತ್ರಿ ಹೊತ್ತು ಮಲಗುವ ಮುನ್ನ ಪೆಟ್ರೋಲಿಯಂ ಜೆಲ್ಲಿ, ಕೊಬ್ಬರಿ ಎಣ್ಣೆ ಅಥವಾ ಹಾಲಿನ ಕೆನೆ ಹಚ್ಚಬೇಕು. ಇದರಿಂದ ತುಟಿಗಳ ಒಳಭಾಗದ ಆರ್ದ್ರತೆ ಅಲ್ಲೇ ಉಳಿಯುತ್ತದೆ, ಹೊರಭಾಗ ಮೃದುವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ