ಹ್ಯುಮಿಡಿಟಿ ತುಂಬಿರುವ ಸೀಸನ್ನಲ್ಲಿ ಬಹಳ ಹೊತ್ತು ಮೇಕಪ್ಉಳಿಯಲು ಸಲಹೆಗಳು ಇಲ್ಲಿವೆ......!

ಬೇಸಿಗೆ ಮಧ್ಯೆ ಒಮ್ಮೊಮ್ಮೆ ಮಳೆ ಬಂದುಬಿಡುತ್ತದೆ. ಆಗ ಹ್ಯುಮಿಡಿಟಿ ಹೆಚ್ಚುತ್ತದೆ. ಅಂಥ ಸಂದರ್ಭದಲ್ಲಿ ತಲೆಗೂದಲಲ್ಲಿ ಅಂಟಂಟು, ಸೆಟ್‌ ಆದ ಮೇಕಪ್‌ ಸಹ ಹಾಳಾಗುತ್ತದೆ. ಇಂಥ ಸಂದರ್ಭದಲ್ಲಿ ನೀವು ಪಾರ್ಟಿಗೆ ಹೋಗಬೇಕಿದ್ದರೆ ಹೇಗೆ ನಿಭಾಯಿಸುವಿರಿ?

ಆಗ ಬಹಳ ಹೊತ್ತು ಮೇಕಪ್‌ ನೀಟಾಗಿ ಹಾಗೆ ಉಳಿಯುವಂತೆ ಮಾಡುವುದು ಹೇಗೆ? ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ಇಲ್ಲಿ, ತಿಳಿಸಲಾಗಿರುವ ಕೆಲವು ಸಲಹೆಗಳನ್ನು ಅಗತ್ಯ ಅನುಸರಿಸಿ :

makeup

ಕ್ಲೀನಿಂಗ್

ಬೇಸಿಗೆಯಲ್ಲಿ ಚರ್ಮದ ಸಮರ್ಪಕ ಆರೈಕೆಗಾಗಿ ಮುಖವನ್ನು ನಿಯಮಿತವಾಗಿ ಫೇಸ್‌ ವಾಶ್‌ ನಿಂದ ತೊಳೆಯಿರಿ. 10 ನಿಮಿಷಗಳ ನಂತರ ಮುಖಕ್ಕೆ ಐಸ್‌ ತುಂಡಿನಿಂದ ಸ್ಕ್ರಬ್‌ ಮಾಡಿ. ಇದರಿಂದ ಮೇಕಪ್‌ ಬಹಳ ಹೊತ್ತು ಉಳಿಯುತ್ತದೆ. ಜೊತೆಗೆ ಡಲ್ ಸ್ಕಿನ್‌ ಗೆ ಫ್ರೆಶ್‌ ಲುಕ್ಸ್ ದೊರಕುತ್ತದೆ.

ನಿಮ್ಮ ಸ್ಕಿನ್‌ ಆಯ್ಲಿ ಆಗಿದ್ದರೆ ಆ್ಯಸ್ಟ್ರಿಂಜೆಂಟ್‌ ಬಳಸಿರಿ. ನಾರ್ಮಲ್ ಯಾ ಡ್ರೈ ಸ್ಕಿನ್ನಿನವರು ಫೇಸ್‌ ವಾಶ್‌ ನಂತರ ಟೋನರ್ ಬಳಸಬೇಕು.

primer-lede

ಪ್ರೈಮರ್

ನಿಮ್ಮ ಮುಖ ಹೆಚ್ಚು ಕಲೆಗುರುತು, ಸಣ್ಣ ರಂಧ್ರ, ಗಂದೆ, ಗುಳ್ಳೆಗಳಿದ್ದರೆ ಮಾತ್ರ ಪ್ರೈಮರ್‌ ಹಚ್ಚಬೇಕು. ಈ ಸೀಸನ್‌ ಗೆ ಇದು ಹೆಚ್ಚು ಉಪಯುಕ್ತ. ಪ್ರೈಮರ್‌ ನಮ್ಮ ದೋಷಯುಕ್ತ ಚರ್ಮವನ್ನು ಸಪಾಟು ಮಾಡುತ್ತದೆ, ಹೀಗಾಗಿ ಆ ಪದರದ ಮೇಲೆ ಮೇಕಪ್‌ ಹೆಚ್ಚು ಕಾಲ ಉಳಿಯಲು ಸಾಧ್ಯವಾಗುತ್ತದೆ. ಯಾರಿಗೆ ಈ ಸಮಸ್ಯೆ ಇಲ್ಲವೋ ಅವರು ಪ್ರೈಮರ್‌ ಹಚ್ಚುವುದು ಬೇಡ.

ಬೇಸಿಗೆಯಲ್ಲಿ ಮೇಕಪ್‌ ಮಾಡುವ ಮೊದಲು ಮುಖಕ್ಕೆ ಜೆಲ್ಲಿ ಪ್ರೈಮ್ ಅಗತ್ಯ ಬಳಸಿರಿ. ಈ ಪ್ರೈಮರ್‌ ಹಚ್ಚಿದ ನಂತರ 2-3 ನಿಮಿಷ ಹಾಗೇ ಬಿಡಿ. ಅದರ ನಂತರ ಮುಂದಿನ ಹಂತಕ್ಕೆ ಹೊರಡಿ. ಇದರಿಂದ ಪ್ರೈಮರ್‌ ಹೆಚ್ಚು ಹೊತ್ತು ಉಳಿಯುತ್ತದೆ. ಅಗತ್ಯ ಎನಿಸಿದರೆ ಮಾತ್ರ ಕನ್ಸೀಲರ್‌ ಬಳಸಿರಿ, ಏಕೆಂದರೆ ಹೆಚ್ಚು ಬೆವರು ಕನ್ಸೀಲರ್‌ ಉಳಿಯಲು ಬಿಡುವುದಿಲ್ಲ. ಹಾಗಾದಾಗ ಕನ್ಸೀಲರ್‌ ಮಾತ್ರ ಆರಿಸಿ.

04-make-eyes-pop-760x506

ಐಶ್ಯಾಡೋ

ಬೇಸಿಗೆ ಕಾರಣ ನಿಮ್ಮ ಐ ಬ್ರೋಸ್‌ ನ್ನು ಸದಾ ಸೆಟ್‌ ಮಾಡಿಡಿ. ಆದರೆ ಐ ಬ್ರೋ ಪೆನ್ಸಿಲ್ ‌ಖಂಡಿತಾ ಬಳಸಬೇಡಿ. ಪೆನ್ಸಿಲ್ ‌ಅಂಶ ಬೆವರಿನ ಕಾರಣ ಹರಿದು ಹೋಗಬಹುದು. ಸಾಧ್ಯವಾದಷ್ಟೂ ಐ ಶ್ಯಾಡೋ ಬಳಸಲೇಬೇಡಿ. ಅನಿವಾರ್ಯ ಎನಿಸಿದರೆ, ಕ್ರೀಂ ಬದಲಾಗಿ ಪೌಡರ್‌ ಬಳಸಿರಿ. ಆಗ ಇದು ಮೆಲ್ಟ್ ಆಗಿ ನಿಮ್ಮ ಸುಂದರ ಮುಖವನ್ನು ಹಾಳು ಮಾಡಬಾರದು. ಈ ಕ್ರೀಂ ಐ ಶ್ಯಾಡೋಗೆ ಬದಲಾಗಿ ಹೆಚ್ಚು ಹೊತ್ತು ಉಳಿಯುತ್ತದೆ. ಇದರಲ್ಲೂ ಸಹ ಕೆಲವು ನ್ಯಾಚುರಲ್ ಶೇಡ್ಸ್ ಅಂದ್ರೆ ಪಿಂಕ್‌ ಯಾ ಬ್ರೌನ್ ಬಳಸಿರಿ. ಸ್ಮಜ್‌ ಫ್ರೀ ಕಾಜಲ್ ಬಳಸಿರಿ. ಕಣ್ಣೆವೆಗಳ ಮೇಲೆ ವಾಟರ್‌ ಪ್ರೂಫ್‌ ಮಸ್ಕರಾ ಹಚ್ಚಿರಿ. ಇದು ಹೆಚ್ಚು ಹೊತ್ತು ಉಳಿಯುತ್ತದೆ. ಬೇಸಿಗೆಯಲ್ಲಿ ಬ್ಲ್ಯಾಕ್‌ ಬದಲಾಗಿ ಕಲರ್‌ ಫುಲ್ ಲೈನ್ಸ್ ಜೊತೆ ಟ್ರಾನ್ಸ್ ಪರೆಂಟ್‌ ಮಸ್ಕರಾ ಬಳಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ