ವೆಡ್ಡಿಂಗ್‌ ಸೀಸನ್‌ ನಲ್ಲಿ ನಿಮಗೆ ಗ್ಲಾಮರಸ್‌ ಲುಕ್‌ ಕೊಡಲು ಎಗ್ಸಾಟಿಕ್‌ ಮೇಕಪ್‌ ಒಂದು ಪರ್ಫೆಕ್ಟ್ ಸಲ್ಯೂಶನ್‌ ಆಗಿದೆ. ಇದರಿಂದ ನಿಮಗೆ ಒಂದು ಹೊಸ ಲುಕ್‌ ಸಿಗುತ್ತದೆ. ನೀವು ಪಾರ್ಟಿಯಲ್ಲೂ ಮಿಂಚುವಿರಿ.

ಮದುವೆ, ಪಾರ್ಟಿ ಇತ್ಯಾದಿ ಸಂದರ್ಭಗಳಲ್ಲಿ ಗ್ಲಾಮರಸ್‌ ಲುಕ್‌ ಹೊಂದಲು ಮಹಿಳೆಯರು ಹೊಸ ಹೊಸ ಮೇಕಪ್‌ ಟ್ರೆಂಡ್‌ ಗಳನ್ನು ಪ್ರಯೋಗಿಸುತ್ತಾರೆ.

ಇಂದು ಗ್ಲಾಮರಸ್‌ ಲುಕ್‌ ಗಾಗಿ ಎಗ್ಸಾಟಿಕ್‌ ಮೇಕಪ್‌ ಹೆಚ್ಚು ಚಾಲ್ತಿಯಲ್ಲಿದೆ. ಇದರ ಬಗ್ಗೆ ಬ್ಯೂಟಿ ಎಕ್ಸ್ ಪರ್ಟ್‌ ಭಾರತಿ ತನೇಜಾ, ``ಎಗ್ಸಾಟಿಕ್‌ ಮೇಕಪ್‌ ಸಾಮಾನ್ಯ ಮೇಕಪ್‌ ಗಿಂತ ಬೇರೆಯಾಗಿರುತ್ತದೆ.

``ಇದರಲ್ಲಿ  ಗ್ಲಾಮರಸ್‌ ಲುಕ್‌ ಕೊಡಲು ಡಾರ್ಕ್‌ ಶೇಡ್ಸ್ ನ್ನು ಹೆಚ್ಚು ಉಪಯೋಗಿಸಲಾಗುತ್ತದೆ,'' ಎನ್ನುತ್ತಾರೆ.

ಹೆವಿ ಬೇಸ್

ಯಾವುದೇ ಮೇಕಪ್‌ ನ ಆರಂಭ ಬೇಸ್‌ ನಿಂದಲೇ ಶುರುವಾಗುತ್ತದೆ. ಆಗಲೇ ಮೇಕಪ್‌ ನಲ್ಲಿ ಫಿನಿಶಿಂಗ್‌ ಬರುತ್ತದೆ. ಬೇಸ್ ತಯಾರಿಸಿಕೊಳ್ಳುವ ಮೊದಲು ಮುಖವನ್ನು ಕ್ಲೆನ್ಸಿಂಗ್‌ ಮಿಲ್ಕ್ ನಲ್ಲಿ ಸ್ವಚ್ಛ ಮಾಡಿಕೊಳ್ಳಿ. ಮುಖ ಮತ್ತು ಕತ್ತಿನ ಮೇಲಿರುವ ಕಲೆಗಳನ್ನು ಕನ್ಸೀಲರ್‌ ನಿಂದ ಅಡಗಿಸಬಹುದು. ನಂತರ ಸ್ಕಿನ್‌ ಟೋನ್‌ ನೊಂದಿಗೆ ಮ್ಯಾಚ್‌ ಆಗುವ ಫೌಂಡೇಶನ್‌ ನ್ನು ಮುಖ ಹಾಗೂ ಕುತ್ತಿಗೆಯ ಮೇಲೆ ಹಚ್ಚಿ. ಎಗ್ಸಾಟಿಕ್‌ ಥೀಮ್ ಗಾಗಿ ಸಿಮರ್‌ ಫೌಂಡೇಶನ್‌ ಉಪಯೋಗಿಸಿ. ನಂತರ ಸ್ಕಿನ್‌ ಟೋನ್ ನೊಂದಿಗೆ ಮ್ಯಾಚ್‌ ಆಗುವ ಕಾಂಪ್ಯಾಕ್ಟ್ ಹಚ್ಚಿ. ಥೀಮ್ ನಂತೆ ನೀವು ಹೆವಿ ಫೌಂಡೇಶನ್‌ ಕೂಡ ಉಪಯೋಗಿಸಬಹುದು.

ಕಣ್ಣುಗಳಿಗೆ ಕ್ಯಾಚಿ ಲುಕ್ಕೊಡಿ

ಎಗ್ಸಾಟಿಕ್‌ ಮೇಕಪ್‌ ನಲ್ಲಿ ಐ ಮೇಕಪ್‌ ಹೆವಿಯಾಗಿ ಮಾಡಲಾಗುತ್ತದೆ. ಹೆವಿ ಐ ಮೇಕಪ್‌ ಮಾಡಲು ಕಣ್ಣುಗಳ ಮೇಲೆ ಮೊದಲು ಬೇಸ್‌ ತಯಾರಿಸಿಕೊಳ್ಳಿ. ಮಾರುಕಟ್ಟೆಯಲ್ಲಿ ಅನೇಕ ರೀತಿಯ ಐ ಬೇಸ್‌ ಗಳು ಲಭ್ಯವಿವೆ. ಕಣ್ಣುಗಳಿಗೆ ಕ್ಯಾಚಿ ಲುಕ್‌ ಕೊಡಲು ಡಾರ್ಕ್‌ ಶೇಡ್ಸ್ ನ ಐ ಶ್ಯಾಡೋ ಉಪಯೋಗಿಸಿ. ಡೀಪ್‌ ಬ್ಲೂ, ಡೀಪ್‌ ಯೆಲ್ಲೋ, ಡೀಪ್‌ ಮೆಜೆಂತಾ, ಡೀಪ್‌ ಬ್ರೌನ್‌ ಅಥವಾ ಬ್ಲ್ಯಾಕ್‌ ಉಪಯೋಗಿಸಿ. ನೀವು ಐ ಶ್ಯಾಡೋನಿಂದ ಐ ಲಿಡ್‌ ಮೇಲೆ ಡಾಟ್ಸ್, ಟೈಗರ್‌ ಪ್ರಿಂಟ್‌ ನಂತಹ ಯಾವುದೇ ಡಿಸೈನ್ ಮಾಡಬಹುದು. ಬ್ಲ್ಯಾಕ್‌ ಮತ್ತು ಗ್ರೇ ಕಲರ್‌ ಗಳ ಕಾಂಬಿನೇಶನ್‌ ನಿಂದ ಕಣ್ಣುಗಳಿಗೆ ಸ್ಮೋಕಿ ಲುಕ್‌ ಕೂಡ ಕೊಡಬಹುದು.

ಐಲಿಡ್‌ ನ ಮೇಲ್ಭಾಗವನ್ನು ಹೈಲೈಟ್‌ ಮಾಡಲು ವೈಟ್‌, ಕಾಪರ್‌, ಸಿಲ್ವರ್‌ ಮತ್ತು ಮೆಟಾಲಿಕ್‌ ಬಣ್ಣಗಳನ್ನು ಆರಿಸಿ. ನಂತರ ಐ ಲೈನರ್‌ ಹಚ್ಚಿ. ಲೈನರ್‌ ನಲ್ಲಿ ನೀವು ಸಿಮರ್‌ ಇರುವ ಬ್ಲೂ, ಗ್ರೀನ್‌, ಗ್ರೇ ಬಣ್ಣಗಳನ್ನು ಉಪಯೋಗಿಸಿ.

ಆಕರ್ಷಕ ಲಿಪ್ಮೇಕಪ್

ಕಣ್ಣುಗಳ ಮೇಕಪ್‌ ಹಾಗೂ ತುಟಿಗಳ ಮೇಕಪ್‌ ನಲ್ಲಿ ಸಮತೋಲನ ಇರುವುದು ಅಗತ್ಯ. ಕಣ್ಣುಗಳ ಮೇಕಪ್‌ಗಮನದಲ್ಲಿಟ್ಟುಕೊಂಡು ತುಟಿಗಳ ಮೇಕಪ್‌ ಮಾಡಿಕೊಳ್ಳಿ. ತುಟಿಗಳಿಗೆ ಬ್ರೌನ್‌, ಪರ್ಪಲ್, ಆರೆಂಜ್‌, ಪಿಂಕ್‌ ಮತ್ತು ಮೆಜೆಂತಾ ಆಯ್ಕೆ ಮಾಡಿಕೊಳ್ಳಿ. ಎಗ್ಸಾಟಿಕ್‌ ಮೇಕಪ್‌ ನಲ್ಲಿ ತುಟಿಗಳ ಮೇಲೂ ಡಿಸೈನಿಂಗ್‌ ಮಾಡಬಹುದು. ಕಣ್ಣುಗಳ ಮೇಲೆ ಹೆವಿ ಡಿಸೈನಿಂಗ್‌ ಇದ್ದರೆ ತುಟಿಗಳ ಮೇಕಪ್‌ ತೆಳುವಾಗಿ ಮಾಡಬೇಕು. ತುಟಿಗಳ ಮೇಲೆ ಡಿಸೈನ್‌ ಮಾಡುವ ಕಡೆ 2 ಶೇಡ್ಸ್ ನ ಲಿಪ್ ಸ್ಟಿಕ್‌ ಹಾಕಬಹುದು. ಸ್ಮೋಕಿ ಐ ಮೇಕಪ್‌ ನೊಂದಿಗೆ ನ್ಯೂಡ್‌ ಲಿಪ್‌ ಸ್ಟಿಕ್‌ ನ್ನೇ ಹಚ್ಚಿ. ತುಟಿಗಳಿಗೆ ಆಕಾರ ಕೊಡಲು ಲಿಪ್‌ ಲೈನರ್ ನಿಂದ ಔಟ್‌ ಲೈನಿಂಗ್‌ ಕೂಡ ಮಾಡಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ