ಕಾಲಕಾಲಕ್ಕೆ ಸೌಂದರ್ಯ ಸಾಧನಗಳನ್ನು ಬದಲಾಯಿಸಬೇಕು. ಇತರ ಉತ್ಪನ್ನಗಳಿಗೆ ಎಕ್ಸ್ ಪೈರಿ ಡೇಟ್ ಇರುವಂತೆ ಕಾಸ್ಮೆಟಿಕ್ ಪ್ರಾಡಕ್ಟ್ಸ್ ಗೂ ಸಹ ಇದ್ದೇ ಇರುತ್ತದೆ. ಆ ಗಡುವು ಮೀರಿದರೆ ಈ ಪ್ರಾಡಕ್ಟ್ಸ್ ಒಳಿತು ಮಾಡುವ ಬದಲು ಹಾನಿ ಉಂಟು ಮಾಡುತ್ತವೆ. ಆ ಕಾರಣದಿಂದ ನಿಮ್ಮ ಸ್ಕಿನ್ ಡ್ಯಾಮೇಜ್ ಆಗುವುದರ ಜೊತೆ ಅಲರ್ಜಿ ಆಗುವ ಸಾಧ್ಯತೆಗಳೂ ಇವೆ.
ಯಾವ ಬ್ಯೂಟಿ ಪ್ರಾಡಕ್ಟ್ಸ್ ಗೆ ಎಷ್ಟು ಆಯುಸ್ಸು?
ಬನ್ನಿ, ಈ ಕುರಿತಾಗಿ ತಜ್ಞರ ಸಲಹೆ ಗಮನಿಸೋಣ :
ಮಸ್ಕರಾ : ಐ ಮೇಕಪ್‌ನ್ನು ಕಂಪ್ಲೀಟ್‌ಗೊಳಿಸುವ ಮಸ್ಕರಾ 3 ತಿಂಗಳಿಗಿಂತ ಹೆಚ್ಚು ಕೆಲಸ ಮಾಡದು. ಹೀಗಾಗಿ ತಯಾರಿ ದಿನಾಂಕ ನೋಡಿಕೊಂಡು, ಅದರ ಸೀಲ್ ಒಡೆದ 3 ತಿಂಗಳ ಒಳಗೆ ಇದನ್ನು ಬಳಸಬೇಕು, ಅದರಾಚೆಗಲ್ಲ. ಇಲ್ಲದ್ದಿದರೆ ಕಂಗಳಲ್ಲಿ ಉರಿ, ನವೆ, ಸೋಂಕು ಉಂಟಾಗಬಹುದು.
ಫೌಂಡೇಶನ್ : ಪರ್ಫೆಕ್ಟ್ ಬೇಸ್ ಮೇಕಪ್‌ಗಾಗಿ ನಿಮ್ಮ ಸ್ಕಿನ್‌ಟೋನ್‌ಗೆ ಮ್ಯಾಚ್ ಆಗುವಂಥ ಫೌಂಡೇಶನ್ ಖರೀದಿಸಿದರಷ್ಟೇ ಸಾಲದು, ನೀವು ಇದರ ಎಕ್ಸ್ ಪೈರಿ ಡೇಟ್‌ನ್ನು ಗಮನಿಸಲೇಬೇಕು. ನೀವು ಯಾವಾಗಲೋ ಒಮ್ಮೆ ಫೌಂಡೇಶನ್ ಬಳಸುವಿರಾದರೆ, ಯಾವ ತಿಂಗಳು ನೀವು ಅದನ್ನು ಖರೀದಿಸುತ್ತೀರೋ, ಅದು ಆ ತಿಂಗಳೇ ತಯಾರಾದುದೇ ಅಥವಾ ಅದಕ್ಕೆ 1 ತಿಂಗಳು ವಾರವೋ ಎಂಬುದನ್ನು ನೋಡಿಕೊಳ್ಳಿ. ಇದಕ್ಕೆ 1 ವರ್ಷದ ಆಯುಸ್ಸು ಇರುತ್ತದೆ.
ಐ ಲೈನರ್ : ಲಿಕ್ವಿಡ್ ಜೆಲ್ ಐ ಲೈನರ್‌ನ ಆಯುಸ್ಸು 6 ತಿಂಗಳು ಮಾತ್ರ. ಆದರೆ ಪೆನ್ಸಿಲ್ ಐ ಲೈನರ್ 8 ತಿಂಗಳು ನಡೆಯುತ್ತದೆ. 6 ತಿಂಗಳಿಗೆ ಮೊದಲೇ ಲಿಕ್ವಿಡ್ ಐ ಲೈನರ್ ಒಣಗತೊಡಗಿದರೆ, ತಕ್ಷಣ ಅದನ್ನು ಬದಲಾಯಿಸಿ. ಕಾಸ್ಮೆಟಿಕ್ಸ್ ನಲ್ಲಿ ಡ್ರೈನೆಸ್ ಕಾಣಿಸಿದರೆ ಅದು ಬಳಸಲು ಯೋಗ್ಯವಲ್ಲ ಎಂದು ಅರ್ಥ.
ಕನ್ಸೀಲರ್ : ಬಹಳ ಕಡಿಮೆ ಪ್ರಮಾಣದ ಮಹಿಳೆಯರು ಇದರ ಬಳಕೆ ಮಾಡುತ್ತಾರೆ, ಜೊತೆಗೆ ಇದರ ಬಳಕೆ ಆಗುವುದೂ ಬಲು ಕಡಿಮೆ. ಹೀಗಾಗಿ ಇದನ್ನು ಕೊಳ್ಳುವಾಗ ಇದರ ಎಕ್ಸ್ ಪೈರಿ ಡೇಟ್‌ನ್ನು ಸರಿಯಾಗಿ ಗಮನಿಸಿ. ಆಗ ನೀವು ಮುಂದಿನ 18 ತಿಂಗಳವರೆಗೂ ಹಾಯಾಗಿ ಇದನ್ನು ಬಳಸುತ್ತಿರಬಹುದು.
ಬ್ಲಶರ್ : ಇದನ್ನು ಬೇಗ ಬೇಗ ಖಾಲಿ ಮಾಡಬೇಕು, ಇಲ್ಲದಿದ್ದರೆ ಎಕ್ಸ್ ಪೈರಿ ಡೇಟ್ ಬಂದೀತು ಎಂದು ನೀವು ಪ್ರತಿನಿತ್ಯ ಇದನ್ನು ಬಳಸುತ್ತಾ ಆತಂಕ ಪಡಬೇಕಿಲ್ಲ. ಏಕೆಂದರೆ ನಿಮ್ಮ ಈ ಬ್ಲಶರ್ ಮುಂದಿನ ಒಂದಲ್ಲ, ಎರಡು ವರ್ಷ ಬಾಳಿಕೆ ಬರುತ್ತದೆ.
ಲಿಪ್‌ಸ್ಟಿಕ್ : ಇದರ ಆಯುಸ್ಸು ಕೇವಲ 1 ವರ್ಷ ಮಾತ್ರ. ಅದು ನಿಮ್ಮ ಅತಿ ಅಚ್ಚುಮೆಚ್ಚಿನದಾಗಿರಲಿ ಅಥವಾ ನಿಮ್ಮ ಪ್ರೀತಿಪಾತ್ರರ ಉಡುಗೊರೆಯೇ ಇರಲಿ, 1 ವರ್ಷದ ನಂತರ ಅದನ್ನು ಬಳಸಬೇಕೆಂದು ಹಠ ಹೂಡಿದರೆ ತುಟಿಗಳಿಗೆ ಹಾನಿ ತಪ್ಪಿದ್ದಲ್ಲ.
ಐಶ್ಯಾಡೋ : ನೀವು ಕ್ರೀಂ ಬೇಸ್ಡ್ ಐ ಶ್ಯಾಡೋ ಬಳಸುತ್ತೀರಾದರೆ, ಇದನ್ನು ನೀವು ವರ್ಷವಿಡೀ ಬಳಸಬಹುದು. ನೀವು ಒಂದು ಸಲಕ್ಕೆ ಒಂದಕ್ಕಿಂತ ಹೆಚ್ಚು ಐ ಶ್ಯಾಡೋ ಬಳಸುವಿರಾದರೆ, ಎರಡನೇ ಮೂರನೆಯದಕ್ಕೆ ಬೇರೆ ಬೇರೆ ಬ್ರಶ್‌ಗಳನ್ನೇ ಬಳಸಬೇಕು. ಆಗ ನೀವು ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ನಿಂದ ಬಚಾವಾಗಬಹುದು.