ಮಳೆಗಾಲದಲ್ಲಿ ಸುಡು ಬಿಸಿಲಿನಿಂದಂತೂ ನಮಗೆ ನೆಮ್ಮದಿ ಸಿಗುತ್ತದೆ. ಆದರೆ ಈ ಹವಾಮಾನ ಯಾವಾಗ ಬೇಕಾದರೂ ನಮ್ಮ ಮೇಕಪ್‌ನ್ನು ಹಾಳುಮಾಡಬಹುದು. ಮಾನ್‌ಸೂನ್‌ ಶುರು ಆಗುವುದರಿಂದ ಹಿಡಿದು ಅದು ಮುಗಿಯುವವರೆಗೆ ಪಾರ್ಟಿ ಮತ್ತು ಆಫೀಸಿಗೆ ಯಾವ ರೀತಿಯ ಮೇಕಪ್‌ ಬೇಕೆಂದು ತಿಳಿಯೋಣ ಬನ್ನಿ.

ಡೇಲಿ ಮೇಕಪ್

ಮಳೆಗಾಲದಲ್ಲಿ ಫೌಂಡೇಶನ್‌ ಉಪಯೋಗಿಸುವುದು ಸುರಕ್ಷಿತಲ್ಲ.

ಕಾಂಪ್ಯಾಕ್ಟ್ ಪೌಡರ್‌ನಿಂದ ಮಾಡುವ ಮ್ಯಾಟ್‌ ಲುಕ್‌ ಅತ್ಯಂತ ಉತ್ತಮ ಆಯ್ಕೆ. ಫೇಸ್‌ ಪೌಡರ್‌ ಉಪಯೋಗಿಸಿ.

ಕಾಂಪ್ಯಾಕ್ಟ್ ನೊಂದಿಗೆ ಹಗುರವಾಗಿ ಮೇಕಪ್‌ಮಾಡಿ ಅದರಿಂದ ಇಡೀ ಮುಖ ಕವರ್‌ ಆಗುತ್ತದೆ. ಅದು ಆಯ್ಲಿ ಆಗಿ ಕಾಣಿಸುವುದಿಲ್ಲ.

ಲೈಲಾಕ್‌ ಬ್ಲಾಸಮ್ ಮತ್ತು ಪ್ರೆಸ್‌ ಪಿಂಕ್‌ ಕಲರ್‌ನೊಂದಿಗೆ ಸಾಫ್ಟ್ ಪಿಂಕ್‌ ಹಾಗೂ ಡೀಪ್‌ ರಾಸ್ ಬೆರಿ ಲಿಪ್‌ಸ್ಟಿಕ್‌ ಉತ್ತಮ.

ಕಾಜಲ್ ಉಪಯೋಗಿಸಿ ಕಣ್ಣುಗಳನ್ನು ಸುಂದರವಾಗಿ ಮಾಡಿ.

ಆಫೀಸ್ಮೇಕಪ್

ಕಾಂಪ್ಯಾಕ್ಟ್ ಪೌಡರ್‌, ಐ ಲೈನರ್‌ ಕಾಜಲ್ ಮತ್ತು ಮಸ್ಕರಾ ಉಪಯೋಗಿಸಿ ತೆಳುವಾಗಿ ಮೇಕಪ್‌ ಮಾಡಿ. ನಂತರ ಗ್ರೇಸ್‌ಫುಲ್ ಫ್ಲೆಮಿಂಗ್‌ ಪೀಚ್‌ ಲಿಪ್‌ಸ್ಟಿಕ್‌ ಹಚ್ಚಿ.

ಪಾರ್ಟಿ ಮೇಕಪ್

ಮಾನ್‌ಸೂನ್‌ ಸೀಸನ್‌ನಲ್ಲಿ ಮುಖಕ್ಕೆ ಬ್ಲಶರ್‌ನಿಂದ ಹಗುರವಾಗಿ ಮೇಕಪ್‌ ಮಾಡಿ. ನೀವು ಮಳೆಯಲ್ಲಿ ನೆಂದು ಹೋಗಿದ್ದರೆ ಮುಖವನ್ನು ಟಿಶ್ಯು ಪೇಪರ್‌ನಿಂದ ಒರೆಸಿ. ಟಿಶ್ಯು ಪೇಪರ್‌ನ್ನು ಇಡೀ ಮುಖದ ಮೇಲೆ ಉಜ್ಜಬೇಡಿ. ಕೆನ್ನೆಗಳ ಮೇಲೆ ಬ್ಲಶರ್‌ನ್ನು ಹೊರಗಿನ ಕಡೆಗೆ ಬ್ಲೆಂಡ್‌ ಮಾಡಿ.

ತೆಳುವಾದ ಬಣ್ಣಗಳನ್ನು ಹೆಚ್ಚು ಉಪಯೋಗಿಸಿ. ಕ್ರೀಂ ಬದಲು ಪೌಡರ್ ಐ ಶ್ಯಾಡೋ ಉಪಯೋಗಿಸಿ. ಇದು ಮುಖದ ಮೇಲೆ ಐ ಶ್ಯಾಡೋ ಹರಡುವುದನ್ನು  ತಡೆಯುತ್ತದೆ.

ಒಂದು ವೇಳೆ ನೀವು ಮಸ್ಕರಾ ಉಪಯೋಗಿಸಿದರೆ ವಾಟರ್‌ ರೆಸಿಸ್ಟೆಂಟ್‌ ಮಸ್ಕರಾ ಉಪಯೋಗಿಸಿ. ಆಗ ಜೋರು ಮಳೆಯಲ್ಲೂ ಅದು ಸುರಕ್ಷಿತವಾಗಿರುತ್ತದೆ.

ಮಾನ್‌ಸೂನ್‌ನಲ್ಲಿ ಲಿಕ್ವಿಡ್‌ ಐ ಲೈನರ್‌ ಬದಲು ಪೆನ್ಸಿಲ್ ‌ಐ ಲೈನರ್‌ ಬಳಸಿ. ತುಟಿಗಳು ಮತ್ತು ಉಗುರುಗಳ ಬಣ್ಣದ ಬಗ್ಗೆ ತಿಳಿಯೋಣ.

ಪಾರ್ಟಿ ಪಿಂಕ್‌ ಸ್ಟೇಟ್‌ಮೆಂಟ್‌ ನೇಲ್ ‌ಪೇಂಟ್‌ ಮತ್ತು ಮ್ಯಾಡ್‌ ಅಬೌಟ್‌ ಪಿಂಕ್‌ ಲಿಪ್‌ಸ್ಟಿಕ್‌ ಮೂಲಕ  ಬೋಲ್ಡ್ ಪಿಂಕ್‌ ಲುಕ್ ಕೊಡಿ.

ಆಫೀಸ್‌ ಕಾಂಪ್ಯಾಪ್ಟ್ ಪೌಡರ್‌, ಐ ಲೈನರ್‌, ಕಾಜಲ್ ಮತ್ತು ಆ್ಯಟಿಟ್ಯೂಡ್‌ ಮಸ್ಕರಾ ಉಪಯೋಗಿಸಿ ತೆಳುವಾಗಿ ಮೇಕಪ್‌ ಮಾಡಿ. ನಂತರ ಗ್ರೇಸ್‌ಫುಲ್ ಲುಕ್‌ಗಾಗಿ ಫ್ಲೆಮಿಂಗ್‌ ಪೀಚ್‌ ಲಿಪ್‌ಸ್ಟಿಕ್‌ ಹಚ್ಚಿ.

ಡೇಲಿ ಲೈಲಾಕ್ ಬ್ಲಾಸಂ ಮತ್ತು ಪ್ರೆಶಸ್‌ ಪಿಂಕ್‌ ಕಲರ್‌ನ ಉಡುಪಿನೊಂದಿಗೆ ಸಾಫ್ಟ್ ಪಿಂಕ್‌ ಮತ್ತು ಡೀಪ್‌ ರಾಸ್‌ ಬೆರಿ ಲಿಪ್‌ಸ್ಟಿಕ್‌ಉತ್ತಮ. ನಿಮ್ಮ ಕಣ್ಣುಗಳನ್ನು ಆ್ಯಟಿಟ್ಯೂಡ್‌ ಕಾಜಲ್‌ನಿಂದ ಹೈಲೈಟ್‌ ಮಾಡಿ.

- ಎಂ. ಮಮತಾ 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ