ಮಳೆಗಾಲದಲ್ಲಿ ಕೂದಲನ್ನು ಹೆಚ್ಚು ಗಮನಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಅವು ಉದುರಲು ಶುರುವಾಗುತ್ತದೆ. ಬನ್ನಿ, ಮಳೆಗಾಲದಲ್ಲಿ ಕೂದಲನ್ನು ರಕ್ಷಿಸುವುದು ಹೇಗೆಂದು ತಿಳಿಯೋಣ :

ಪೌಷ್ಟಿಕ ಆಹಾರ ತೆಗೆದುಕೊಳ್ಳಿ

ಸಾಧಾರಣವಾಗಿ ಕೂದಲು ಬೆಳೆಯುವುದು ನಿಮ್ಮ ಡಯೆಟ್‌ನ್ನು ಅವಲಂಬಿಸಿರುತ್ತದೆ. ಕೂದಲಿನ ಸರಿಯಾದ ಬೆಳವಣಿಗೆಗಾಗಿ ಯಾವಾಗಲೂ ಪ್ರೋಟೀನ್‌, ಕ್ಯಾಲ್ಶಿಯಂ ಮತ್ತು ಮಿನರಲ್‌ಯುಕ್ತ ಆಹಾರ ತೆಗೆದುಕೊಳ್ಳಿ. ಇಲ್ಲದೆ ನಿಮ್ಮ ಆಹಾರದಲ್ಲಿ ಹಲ್ಲು ಮತ್ತು ತರಕಾರಿಗಳ ಸಲಾಡ್‌ ಇರಲಿ. ವಿಶೇಷವಾಗಿ ಬೀಟ್‌ರೂಟ್‌ ಮತ್ತು ಇತರ ಗೆಡ್ಡೆಗಳನ್ನು ಹೆಚ್ಚಾಗಿ ಸೇವಿಸಿ.

ಕೂದಲನ್ನು ಮುಚ್ಚಿಕೊಳ್ಳಿ

ಮಳೆಗಾಲದಲ್ಲಿ ಕೂದಲನ್ನು ನೆನೆಸಬೇಡಿ. ಏಕೆಂದರೆ ಮಳೆಯಲ್ಲಿನ ಮಲಿನವಾದ ನೀರಿನಿಂದಾಗಿ ಬೇರು ದುರ್ಬಲವಾಗುತ್ತದೆ ಮತ್ತು ಕೂದಲು ಉದುರತೊಡಗುತ್ತದೆ. ಆದ್ದರಿಂದ ಮಳೆಯ ಮಲಿನವಾದ ನೀರು ಮತ್ತು ತೇವಭರಿತ ಗಾಳಿಯಿಂದ ಕೂದಲನ್ನು ರಕ್ಷಿಸಲು ಅವನ್ನು ಯಾವುದಾದರೂ ಬಟ್ಟೆ ಅಥವಾ ಸ್ಕಾರ್ಫ್‌ನಿಂದ ಮುಚ್ಚಿಕೊಳ್ಳಿ. ಕೂದಲು ಸುರಕ್ಷಿತವಾಗಿರಲು ಗುಂಡನೆಯ ಹ್ಯಾಟ್‌ ಕೂಡ ಬಳಸಬಹುದು.

ಶಾರ್ಟ್ಮತ್ತು ಟ್ರೆಂಡಿ ಹೇರ್ಕಟ್

ಮಳೆಗಾಲದಲ್ಲಿ ಶಾರ್ಟ್‌ ಹೇರ್‌ಕಟ್‌ ಮಾಡಿಸಿಕೊಳ್ಳಿ. ಮಳೆಗಾಲದಲ್ಲಿ ಫಂಕಿ ಹೇರ್‌ಕಟ್‌ ಚಾಲನೆಯಲ್ಲಿದೆ. ಅದನ್ನು ಸಂಭಾಳಿಸುವುದು ಸುಲಭ. ಅದಕ್ಕೆ ಬೀಳುವ ಖರ್ಚು ಬಜೆಟ್‌ನೊಳಗೇ ಇರುತ್ತದೆ. ಆದ್ದರಿಂದ ಶಾರ್ಟ್‌ ಮತ್ತು ಟ್ರೆಂಡಿ ಹೇರ್‌ಕಟ್‌ನ್ನೇ ಹೆಚ್ಚು ಮಾಡಿಸಿಕೊಳ್ಳಿ. ಗುಂಗುರು ಹಾಗೂ ನೇರವಾದ ಕೂದಲಿನಲ್ಲಿಯೂ ಇವೆರಡೂ ಸ್ಟೈಲ್ ಚೆನ್ನಾಗಿ ಒಪ್ಪುತ್ತವೆ.

ಕೂದಲನ್ನು ಸ್ವಚ್ಛಗೊಳಿಸುವುದು

ಮಳೆಗಾಲದಲ್ಲಿ ಕೂದಲನ್ನು ಹೆಚ್ಚು ಬಾರಿ ತೊಳೆಯಿರಿ. ದಿನ ಬಿಟ್ಟು ದಿನ ಕೂದಲನ್ನು ತೊಳೆಯುವುದರಿಂದ ಬೆವರು ಮತ್ತು ಅಂಟಿನಿಂದ ಕೂದಲಿನ ರಕ್ಷಣೆಯಾಗುತ್ತದೆ  ಕೂದಲನ್ನು ಸ್ವಚ್ಛಗೊಳಿಸುವ ಮೊದಲು ಅದಕ್ಕೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆ ಹಚ್ಚಿ. ನಂತರ ಶ್ಯಾಂಪೂನಿಂದ ತೊಳೆಯುವ ಮೊದಲು ಚೆನ್ನಾಗಿ ಕಂಡೀಶನರ್‌ ಹಚ್ಚಿ. ಹೀಗೆ ಮಾಡುವುದರಿಂದ ಕೂದಲಿನ ಬೇರು ಸದೃಢವಾಗುತ್ತದೆ ಮತ್ತು ಕೂದಲು ಕೋಮಲವಾಗಿರುತ್ತದೆ.

ಹೇರ್ಪ್ರಾಡಕ್ಟ್ ಸರಿಯಾದ ಬಳಕೆ

ಕೂದಲನ್ನು ಸ್ವಚ್ಛಗೊಳಿಸಲು ಕೂದಲಿಗೆ ಸೂಟ್‌ ಆಗುವ ಶ್ಯಾಂಪೂವನ್ನೇ ಆರಿಸಿಕೊಳ್ಳಿ. ಸುಳ್ಳು ಜಾಹೀರಾತುಗಳ ಹಿಡಿತಕ್ಕೆ ಸಿಕ್ಕಿ ಯಾವುದೇ ಶ್ಯಾಂಪೂ ಆರಿಸಬೇಡಿ. ಕೂದಲನ್ನು ಬಾಚಣಿಗೆಯಿಂದ ಚೆನ್ನಾಗಿ ಸೆಟ್‌ ಮಾಡಿ. ಒದ್ದೆ ಕೂದಲನ್ನು ಬಾಚಬೇಡಿ. ಇಲ್ಲದಿದ್ದರೆ ಅದು ಮುರಿಯುವ ಸಂಭವಿರುತ್ತದೆ. ಒದ್ದೆ ಕೂದಲನ್ನು ಕಟ್ಟಬೇಡಿ. ಅದು ಒಣಗಿದ ಮೇಲೆಯೇ ಕಟ್ಟಿ.

ಹೇರ್ಸ್ಪಾ

ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯಿಂದ ಕೂದಲಿಗೆ ಮಸಾಜ್‌ ಮಾಡಿ. ಅದರಿಂದ ರಕ್ತ ಸಂಚಾರ ಹೆಚ್ಚುತ್ತದೆ ಮತ್ತು ಕೂದಲಿಗೆ ಹೊಳಪು ಬರುತ್ತದೆ.ಸ್ಟೈಲಿಂಗ್‌ ಪ್ರಾಡಕ್ಟ್ಸ್ ನಿಂದ ದೂರವಿರಿ. ಕೂದಲಿಗೆ ಜೆಲ್ ‌ಅಥವಾ ಸೀರಮ್ ನಂತಹ ಪ್ರಾಡಕ್ಟ್ಸ್ ಉಪಯೋಗಿಸಬೇಡಿ.

- ಶ್ವೇತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ