ಮಳೆಗಾಲದಲ್ಲಿ ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಈ ಸೀಸನ್‌ನಲ್ಲಿ ಚರ್ಮವನ್ನು ತೇವಾಂಶ ಅಥವಾ ಆರ್ದ್ರತೆಯಿಂದ ರಕ್ಷಿಸಿ. ತೇವಾಂಶವುಳ್ಳ ಚರ್ಮ ಕೀಟಾಣುಗಳನ್ನು ಹೆಚ್ಚು ಆಕರ್ಷಿಸುತ್ತದೆ. ಪರಿಣಾಮವಾಗಿ ಚರ್ಮದಲ್ಲಿ ಉರಿ, ಗುಳ್ಳೆ, ಪದರಗಳ ಏಳುವಿಕೆ, ರಿಂಗ್ ವರ್ಮ್ ವರೆಗೂ ಕಾಟ ತಪ್ಪಿದ್ದಲ್ಲ.
ಇವುಗಳಿಂದ ಪಾರಾಗಲು ಈ ಸಲಹೆಗಳನ್ನು ಅನುಸರಿಸಿ :
- ಹೆಚ್ಚುವರಿ ಕೊಳೆ, ಜಿಡ್ಡಿನಂಶ ನಿವಾರಿಸಲು ಪ್ರತಿದಿನ ಕಡಿಮೆ ಎಂದರೂ 3 ಸಲ ಚರ್ಮವನ್ನು ಸ್ವಚ್ಛ ಮಾಡಿ, ಏಕೆಂದರೆ ಇವೆರೆಡೂ ರೋಮರಂಧ್ರ ಹೆಚ್ಚಿಸುವ ಸಾಧ್ಯತೆಗಳಿವೆ.
- ನಿಮ್ಮ ತ್ವಚೆಯನ್ನು ಆಗಾಗ ಟೋನ್ ಮಾಡಿ. ಇದಕ್ಕಾಗಿ ನಾನ್ ಆಲ್ಕೋಹಾಲಿಕ್ ವೆರೈಟೀಸ್ ಬಳಸಿ. ಅದು ನಿಮ್ಮ ಚರ್ಮದ Ph ಬ್ಯಾಲೆನ್ಸ್ಡ್ ಆಗಿ ಉಳಿಯಲು ನೆರವಾಗುತ್ತದೆ. ಹಾಗಾಗಿ ನಿಮ್ಮ ಚರ್ಮ ಸಹಜವಾಗಿ ಕಾಂತಿಯುತವಾಗುತ್ತದೆ.
- ಮಳೆಯ ಕಾರಣ ಚರ್ಮದಲ್ಲಿ ಉಂಟಾಗುವ ಆರ್ದ್ರತೆ, ಚರ್ಮಕ್ಕೆ ಹಾನಿ ಮಾಡಬಲ್ಲದು. ನಿಮ್ಮ ಚರ್ಮವನ್ನು ಸದಾ ಸಾಫ್ಟ್, ಕೋಮಲ, ಸ್ವಸ್ಥವಾಗಿಟ್ಟುಕೊಳ್ಳಲು ಎಫೆಕ್ಟಿವ್ ಡೇ ಕ್ರೀಮ್ಸ್ ಬಳಸಿರಿ.
- 30-40 SPF ಯುಕ್ತ ಉತ್ತಮ ಸನ್‌ಸ್ಕ್ರೀನ್ ಲೋಶನ್ ಬಳಸಿ. ಸೀಸನ್ ಕ್ಲೌಡಿ ಎನಿಸಿದರೂ ಅದು ಸೂರ್ಯನ UV ಕಿರಣಗಳ ಹಾನಿಕಾರಕ ಪ್ರಭಾವವನ್ನು ತಡೆಯಲಾರದು.
- ನಿಮ್ಮ ಚರ್ಮದ ಉದುರುವಂಥ ಹೊರ ಪದರಗಳನ್ನು ಬಲು ನಯನಾಜೂಕಾಗಿ ಉಜ್ಜಿ ತೆಗೆಯಿರಿ, ಆಗ ಮೃತ ಜೀವಕೋಶಗಳು ತೊಲಗುತ್ತವೆ. ಆದರೆ ಜೋರಾಗಿ ಉಜ್ಜಾಡಬೇಡಿ.
- ದೇಹದಲ್ಲಿ ತೇವಾಂಶ ಉಳಿಸಿಕೊಳ್ಳಲು ದಿನವಿಡೀ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಏಕೆಂದರೆ ಹ್ಯುಮಿಡಿಟಿ ಕಾರಣ ಹೆಚ್ಚು ಬೆವರುವ ಸಾಧ್ಯತೆ ಇರುತ್ತದೆ. ಇದರಿಂದ ದೇಹದಲ್ಲಿ ಹೆಚ್ಚಿನಂಶ ಆರ್ದ್ರತೆ ಹೋಗಿ, ಚರ್ಮ ಕೊಳಕಾಗಿ ನಿರ್ಜೀವವಾಗಿಯೂ ತೋರಬಹುದು.
- ಇತರ ಸೀಸನ್‌ಗಳಲ್ಲಿ ವಾರಕ್ಕೆ 2 ಸಲ ಕೂದಲಿಗೆ ಶ್ಯಾಂಪೂ, ಕಂಡೀಶನಿಂಗ್ ಮಾಡಿದರೆ ಸಾಕಾಗುತ್ತದೆ. ಆದರೆ ಮಳೆಗಾಲದಲ್ಲಿ 3-4 ಸಲ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ಹೆಚ್ಚು ಬೆವರುವಿಕೆಯಿಂದ ನಿಮ್ಮ ಸ್ಕಾಲ್ಪ್ ನಲ್ಲಿ ಕೊಳೆ, ಕೀಟಾಣು ಜಮೆಗೊಳ್ಳುವ ಸಾಧ್ಯತೆ ಹೆಚ್ಚು.
- ಮಾನ್‌ಸೂನ್‌ನಲ್ಲಿ ಕೃತಕ ಒಡವೆ ಧರಿಸದೇ ಇರುವುದೇ ಮೇಲು. ಅದರಲ್ಲೂ ನಿಮ್ಮ ಚರ್ಮ ಹೆಚ್ಚು ಸಂವೇದನಾಶೀಲವಾಗಿದ್ದರೆ, ಹವೆಯಲ್ಲಿನ ಆರ್ದ್ರತೆ ಬ್ರೇಕ್‌ಔಟ್‌ನ ಅಪಾಯ ಹೆಚ್ಚಿಸುವ ಸಾಧ್ಯತೆಗಳಿವೆ.
- ಮನೆಯಲ್ಲೇ ಫೇಸ್ ಪೀಲ್ಸ್ ಪ್ಯಾಕ್ಸ್ ತಯಾರಿಸಿ. ಇವು ನೈಸರ್ಗಿಕವಾಗಿದ್ದು, ಚರ್ಮಕ್ಕೆ ಹೆಚ್ಚಿನ ಕಾಂತಿ ಕೊಡುತ್ತವೆ.
- ಸದಾ ಪೌಷ್ಟಿಕ, ತಾಜಾ ಆಹಾರವನ್ನೇ ಸೇವಿಸಿ. ಇದರಲ್ಲಿ ಕೊಬ್ಬಿನಂಶ ಸಹ ಇರಬೇಕು (ಸಂಪೂರ್ಣ ತ್ಯಜಿಸಬಾರದು), ಅದು ತೊಂದರೆಗೊಳಗಾದ ಚರ್ಮದ ರಿಪೇರಿ ಮಾಡಿ, ಸದಾ ಆರ್ದ್ರತೆ ಉಳಿಸಿಕೊಳ್ಳಲು ನೆರವಾಗುತ್ತದೆ.
- ನಿಮ್ಮ ಪಾದ, ಕಾಲುಗಳು, ಫ್ರೀ ಆಗಿ ಗಾಳಿ ಆಡುವಂತಿರಲಿ. ಸದಾ ಕ್ಲೋಸ್ಡ್ ಫುಟ್‌ವೇರ್ (ಶೂಸ್) ಬೆವರು ಹೆಚ್ಚಿಸಿ ಫಂಗಲ್ ಬ್ಯಾಕ್ಟೀರಿಯಲ್ ಸೋಂಕಿಗೆ ಮೂಲವಾಗುತ್ತದೆ. ಇದರ ಬದಲಿಗೆ ಸ್ಯಾಂಡಲ್ಸ್, ಪ್ಲೇಟರ್ಸ್ ಬಳಸಿರಿ.
- ಪೆಡಿಕ್ಯೂರ್‌ಗೆಂದು ಹೋದಾಗ, ಟೂಲ್ಸ್ ಸ್ಟೆರಿಲೈಸ್ಡ್ ಆಗಿದೆ ತಾನೇ ಎಂದು ಖಚಿತಪಡಿಸಿಕೊಳ್ಳಿ. ಅಂದಹಾಗೆ ಹೆಚ್ಚಿನ ಪಾರ್ಲರ್‌ಗಳು ಶುಚಿತ್ವ, ಶುಭ್ರತೆಗೆ ಆದ್ಯತೆ ಕೊಡುತ್ತವೆ. ಆದರೆ ಮಳೆಗಾಲದಲ್ಲಿ ಅದನ್ನು ಮೇಂಟೇನ್ ಮಾಡುವುದು ಕಷ್ಟ. ಆದ್ದರಿಂದ ಎಲ್ಲಾ ಟೂಲ್ಸ್ ಸೋಂಕುರಹಿತ ತಾನೇ ಎಂದು ಪರೀಕ್ಷಿಸಿ. ಅಗತ್ಯ ಎನಿಸಿದರೆ ಅದನ್ನು ನಿಮ್ಮ ಮುಂದೆಯೇ ಮಾಡಿ ತೋರಿಸಲು ಹೇಳಿ.