ಮಳೆ ಬರುವ ದಿನಗಳಲ್ಲಿ ನೀಟಾಗಿ ಮೇಕಪ್‌ ಮಾಡಿಕೊಂಡು ಹೊರಗೆ ಹೊರಡುವುದು ನಿಜಕ್ಕೂ ಒಂದು ಸವಾಲೇ ಸರಿ. ಮೇಕಪ್ ಎಷ್ಟೇ ಚೆನ್ನಾಗಿ ಹೊಂದುವಂತಿದ್ದರೂ, ಅದು ವಾಟರ್‌ಪ್ರೂಫ್‌ ಆಗಿರದಿದ್ದರೆ ಮುಖದ ಮೇಲೇನೋ ಅಸಹ್ಯವಾಗಿ ಮೆತ್ತಿದಂತೆ ಗುರುತುಗಳು ಉಳಿದುಬಿಡುತ್ತವೆ.

ಈ ಕುರಿತಾಗಿ ಸೌಂದರ್ಯ ತಜ್ಞೆಯರೊಂದಿಗೆ ಚರ್ಚಿಸಿದಾಗ, ಮಳೆಗಾಲದಲ್ಲಿ ಚರ್ಮದ ಸಂವೇದನಾಶೀಲ ರೋಮಕೂಪಗಳು ಬಹಳಷ್ಟು ಓಪನ್‌ ಆಗಿಬಿಡುತ್ತವೆ. ಇದರಿಂದ ಚರ್ಮ ಪೂರ್ತಿಯಾಗಿ ಡೀಟಾಕ್ಸಿಫೈ ಆಗುವುದಿಲ್ಲ, ನಿರ್ಜೀವವಾಗಿ ಗೋಚರಿಸುತ್ತದೆ. ಹೀಗಾಗಿ ಮೇಕಪ್‌ ಬಹಳ ಹೊತ್ತು ಉಳಿಯುವುದಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಚರ್ಮದ ಶುಚಿತ್ವದ ಕಡೆ ಹೆಚ್ಚಿನ ಗಮನಹರಿಸಬೇಕು, ಆಗ ಮಾತ್ರ ಮೇಕಪ್‌ ಮಾಡಿಕೊಳ್ಳುವುದು ಸುಲಭ ಆಗಲು ಸಾಧ್ಯ. ಸೂಕ್ತ ಕಾಲಾವಕಾಶ ನೋಡಿಕೊಂಡು ಫೇಸ್‌ವಾಶ್‌, ಫೇಸ್‌ಪ್ಯಾಕ್‌ಗಳನ್ನು ಈ ಸಂದರ್ಭದಲ್ಲಿ ಬಳಸಬೇಕು...... ಎಂದು ವಿವರಿಸುತ್ತಾರೆ.

ಮಳೆಗಾಲದ ದಿನಗಳಲ್ಲಿ ಮರೆಯದೆ ರೇನ್‌ ಪ್ರೂಫ್‌ ಮೇಕಪ್‌ ಮಾಡಿಕೊಳ್ಳಬೇಕಾದುದು ಅತ್ಯಗತ್ಯ. ಈ ಕುರಿತಾಗಿ ಸೌಂದರ್ಯ ತಜ್ಞೆಯರು ನೀಡುವ ಸಲಹೆ ಹೀಗಿವೆ :

ಮೇಕಪ್‌ ಸದಾ ನ್ಯಾಚುರಲ್ ಟೋನ್‌ಗೆ ತಕ್ಕಂತಿರಬೇಕು. ಚರ್ಮ ಯೆಲ್ಲೋ ಆಗಿದ್ದರೆ ಯೆಲ್ಲೋ, ಬ್ರೌನ್‌ ಅಥವಾ ಲೆವೈಕ್‌ ಟೋನ್‌ ಬಳಸಿರಿ.

ಮಾನ್‌ಸೂನ್‌ನಲ್ಲಿ ಲಿಕ್ವಿಡ್‌ ಫೌಂಡೇಶನ್‌ನ್ನು ಆದಷ್ಟು ಅವಾಯ್ಡ್ ಮಾಡಿ. ಇದರಿಂದ ಕಲೆ, ಗುರುತು ಉಳಿದುಬಿಡುತ್ತವೆ.

ಕ್ರೀಂ ಕನ್ಸೀಲರ್‌ನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ಮುಖದಲ್ಲಿ ಕಲೆ, ಗುರುತು ಉಳಿಯದು ಹಾಗೂ ಮುಖ ಸ್ವಚ್ಛ, ಶುಭ್ರವಾಗಿರುತ್ತದೆ.

ವಾಟರ್‌ಪ್ರೂಫ್‌ ಐ ಲೈನರ್‌, ಕಾಜಲ್ (ಕಾಡಿಗೆ ಕಪ್ಪು), ಮಸ್ಕರಾಗಳನ್ನೇ ಹೆಚ್ಚಾಗಿ ಬಳಸಿರಿ.

ಮೇಕಪ್‌ಗೆ ಮುನ್ನ ಮತ್ತು ಅದನ್ನು ಕಳಚಿದ ನಂತರ, ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಐಸ್‌ ಬೆರೆಸಿದ ನೀರಾದರೆ ಇನ್ನೂ ಉತ್ತಮ.

ನಿಮಗೆ ಫೌಂಡೇಶನ್‌ ಹೆಚ್ಚು ಇಷ್ಟವಾದರೆ, ವಾಟರ್‌ಪ್ರೂಫ್‌ ಫೌಂಡೇಶನ್‌ ಬಳಸಬೇಕು, ಆದರೆ ಕನಿಷ್ಠ ಪ್ರಮಾಣದಲ್ಲಿ.

ಮಳೆಗಾಲದಲ್ಲಿ ವಾಟರ್‌ಪ್ರೂಫ್‌ ಬ್ಲಶ್‌ ಆನ್‌ ಅವಶ್ಯ ಬಳಸಿರಿ. ವೆಲೈಕ್‌, ಬ್ರೌನ್‌, ಬ್ರೈಟ್‌ ಪಿಂಕ್‌, ಪೀಚ್‌ ಇತ್ಯಾದಿ ಬಣ್ಣಗಳನ್ನು ಉಪಯೋಗಿಸುವುದರಿಂದ ಮುಖ ಚೆನ್ನಾಗಿ ಕಾಣುತ್ತದೆ.

ನಿಮ್ಮೊಂದಿಗೆ ಬ್ಲಾಟಿಂಗ್‌ ಪೇಪರ್‌, ಮ್ಯಾಟಿಫೈಯಿಂಗ್‌ ಟ್ರಾನ್ಸ್ ಲೂಶನ್‌ ಪೌಡರ್‌ ಇತ್ಯಾದಿ ಅಗತ್ಯ ಇರಿಸಿಕೊಳ್ಳಿ. ಇದರಿಂದ ಮತ್ತೆ ಮತ್ತೆ ಟಚ್‌ಅಪ್‌ ನೀಡುವುದರಿಂದ ಮುಖ ತಾಜಾ ಅನಿಸುತ್ತದೆ.

ಈ ಸೀಸನ್‌ನಲ್ಲಿ ಪಾರ್ಟಿ ಅಟೆಂಡ್‌ ಮಾಡುವುದಿದ್ದರೆ, ನ್ಯಾಚುರಲ್ ಮೇಕಪ್‌ ಸರಿಯಾಗಿರುತ್ತದೆ. ಸಂಜೆಯ ಪಾರ್ಟಿಗಳಾದರೆ, ಸ್ಕಿನ್‌ಟೋನ್‌ಗೆ ತಕ್ಕಂತೆ ಐ ಮೇಕಪ್‌ ಇರಲಿ. ಸ್ಕಿನ್‌ಟೋನ್‌ ಯೆಲ್ಲೋ ಇದ್ದರೆ ಆರೆಂಜ್‌, ಕಾಪರ್‌, ಪೀಚ್‌ ಕಲರ್ಸ್‌ ಚೆನ್ನಾಗಿ ಹೊಂದುತ್ತವೆ. ಕೂಲ್ ‌ಟೋನ್‌ ಇದ್ದರೆ ಮೆಜೆಂತಾ, ರೋಝಿ ಪಿಂಕ್‌, ಬರ್ಗ್ಯಾಂಡಿ ಇತ್ಯಾದಿ ಸರಿ. ನ್ಯೂಟ್ರಲ್ ಸ್ಕಿನ್‌ ಟೋನ್‌ ಇದ್ದರೆ ಯಾವ ಐ ಮೇಕಪ್‌ ಆದರೂ ನಡೆಯುತ್ತದೆ.

ಮಳೆಗಾಲದಲ್ಲಿ ಮುಖದ ಕ್ಲೆನ್ಸಿಂಗ್‌, ಟೋನಿಂಗ್‌ಮಾಯಿಶ್ಚರೈಸಿಂಗ್‌ ಕಡೆ ಹೆಚ್ಚು ಗಮನವಿರಲಿ. ನಿಮ್ಮದು ಆಯ್ಲಿ ಚರ್ಮವಾಗಿದ್ದರೆ, ಅಗತ್ಯ ಆ್ಯಸ್ಟ್ರಿಂಜೆಂಟ್‌ ಬಳಸಿರಿ. ಮೇಕಪ್‌ ರಿಮೂವರ್‌ ಬಳಸಿಯೇ ಅದನ್ನು ಕಳಚಬೇಕು. ಇದಾದ ಮೇಲೆ ಮಾಯಿಶ್ಚರೈಸರ್‌ ಮತ್ತು ನೈಟ್‌ ಕ್ರೀಂ ಹಚ್ಚಲು ಮರೆಯಬಾರದು, ಆಗ ಚರ್ಮ ಹಾಯಾಗಿ ಉಸಿರಾಡುತ್ತದೆ. ಮೇಕಪ್‌ ಪ್ರಾಡಕ್ಟ್ಸ್ ಸದಾ ಬ್ರಾಂಡೆಡ್ ಆಗಿರಬೇಕು, ಆಗ ರಾಶೆಸ್‌ ಆಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ