ಐ ಲೈನರ್‌ ಮತ್ತು ಐ ಶ್ಯಾಡೋ ಮಾತ್ರವಲ್ಲ, ಇದೀಗ ಮಾರುಕಟ್ಟೆಯಲ್ಲಿ ಯೆಲ್ಲೋ, ಬ್ಲೂ, ಪಿಂಕ್‌, ಗ್ರೀನ್‌ ಶೇಡ್‌ಗಳಲ್ಲಿ ಮಸ್ಕರಾದ ಸಂಗ್ರಹದಲ್ಲಿ ಏನೂ ಕೊರತೆ ಇಲ್ಲ. ಹೀಗಿರುವಾಗ ನೀವು ನಿಯಮಿತವಾಗಿ ಬ್ಲ್ಯಾಕ್‌ಟ್ರಾನ್ಸ್ ಪರೆಂಟ್‌ ಶೇಡ್‌ನ ಮಸ್ಕರಾ ಬಳಸುತ್ತಾ ಬೇಸತ್ತಿದ್ದರೆ, ಈ ಹೊಸ ವರ್ಷಕ್ಕೆ ಹೊಸ ಕೊಡುಗೆಯಾಗಿ ಈ ಕಲರ್‌ಫುಲ್ ಮಸ್ಕರಾ ಬಳಸಲು ಆರಂಭಿಸಿ. ಈ ಮಸ್ಕರಾದ ಕಲರ್‌ಫುಲ್ ಶೇಡ್ಸ್ ಕಂಗಳಿಗೆ ಬಿಗ್‌ಬ್ರೈಟ್‌ ಲುಕ್ಸ್ ನೀಡುತ್ತವೆ. ಬ್ಲ್ಯಾಕ್‌ಗೆ ಬದಲಾಗಿ ಇವು ಸಾಕಷ್ಟು ಆಕರ್ಷಕ ಎನಿಸುತ್ತವೆ. ಇವನ್ನು ಆರಿಸುವಾಗ ನಿಮ್ಮ ಸ್ಕಿನ್‌ ಟೋನ್‌ ಜೊತೆಗೆ ಕಂಗಳ ಬಣ್ಣವನ್ನೂ ವಿಶೇಷವಾಗಿ ಗಮನದಲ್ಲಿಡಬೇಕು.

ಬ್ಲೂ ಮಸ್ಕರಾ

ನಿಮ್ಮ ಕಂಗಳ ಬಣ್ಣ ಗ್ರೇ, ಬ್ರೌನ್‌ ಯಾ ಲೈಟ್‌ ಗ್ರೀನ್‌ ಆಗಿದ್ದರೆ, ಆಗ ನೀವು ನಿಮ್ಮ ವ್ಯಾನಿಟಿ ಬ್ಯಾಗಿಗೆ ಬ್ಲೂ ಶೇಡ್‌ನ ಮಸ್ಕರಾ ಹಾಕಿಕೊಳ್ಳಿ. ಇಂದಿನ ಮಾರುಕಟ್ಟೆಯಲ್ಲಿ ಬ್ಲೂ ಬಣ್ಣದ ಹಲವು ಶೇಡ್ಸ್ ನ ಮಸ್ಕರಾ ಲಭ್ಯ. ಅಂದರೆ ರಾಯಲ್ ಬ್ಲೂ, ನೇವಿ ಬ್ಲೂ, ಸೀ ಬ್ಲೂ, ಇತ್ಯಾದಿ. ಬ್ಲೂ ಬಣ್ಣದ ಈ ಎಲ್ಲಾ ಶೇಡ್‌ಗಳೂ ಫೇರ್‌ ಕಾಂಪ್ಲೆಕ್ಷನ್‌ವುಳ್ಳ ಮಹಿಳೆಯರಿಗೆ ಮಾತ್ರವಲ್ಲದೆ, ಡಾರ್ಕ್‌ಮೀಡಿಯಂ ಕಾಂಪ್ಲೆಕ್ಷನ್‌ನವರಿಗೂ ಅನ್ವಯಿಸುತ್ತದೆ. ಆದರೆ ಬ್ಲೂ ಶೇಡ್‌ನ ಮಸ್ಕರಾವನ್ನು  ಡೇ ಪಾರ್ಟಿಗಳಿಗೆ ಬಳಸುವುದು ಲೇಸು.

ಗ್ರೀನ್ಮಸ್ಕರಾ

ಡಾರ್ಕ್‌ ಬ್ರೌನ್‌ ಶೇಡ್ಸ್ ವುಳ್ಳ ಕಂಗಳಿಗೆ ಗ್ರೀನ್‌ ಶೇಡ್‌ನ ಮಸ್ಕರಾ ಚೆನ್ನಾಗಿ ಒಪ್ಪುತ್ತದೆ. ಆದರೆ ವಿಷಯ ಸ್ಕಿನ್‌ ಟೋನ್ ಕುರಿತಾಗಿದ್ದರೆ, ಬ್ಲೂ ತರಹ ಗ್ರೀನ್‌ ಕಲರ್‌ ಮಸ್ಕರಾ ಸಹ ಡಾರ್ಕ್‌, ಫೇರ್‌, ಮೀಡಿಯಂ.... ಹೀಗೆ ಎಲ್ಲಾ ಬಗೆಯ ಸ್ಕಿನ್‌ ಟೋನ್‌ನವರಿಗೂ ಅನ್ವಯಿಸುತ್ತದೆ. ಗ್ರೀನ್‌ ಮಸ್ಕರಾ ನಿಮ್ಮ ಕಂಗಳಿಗೆ ಎದ್ದು ಕಾಣಿಸಬೇಕೆಂದರೆ, ಯಾವಾಗ ಗ್ರೀನ್‌ ಕಲರ್‌ ಮಸ್ಕರಾ ಹಚ್ಚಿದರೂ, ಅದರ ಜೊತೆ ಡಾರ್ಕ್‌ ಶೇಡ್‌ನ ಐ ಶ್ಯಾಡೋ ಯಾ ಐ ಲೈನರ್‌ ಹಚ್ಚಲು ಹೋಗಬೇಡಿ. ಇಲ್ಲದಿದ್ದರೆ ಡಾರ್ಕ್‌ ಶೇಡ್ ಮುಂದೆ ನಿಮ್ಮ ಮಸ್ಕರಾ ಬಣ್ಣ ಡಲ್ ಆಗಿಹೋಗುತ್ತದೆ.

ಬ್ರೌನ್ಮಸ್ಕರಾ

ಬ್ಲ್ಯಾಕ್‌ ಆದ ನಂತರ ಕಲರ್‌ಫುಲ್ ಮಸ್ಕರಾ ಬಳಸಲು ನೀವು ಹಿಂಜರಿಯುತ್ತಿದ್ದರೆ, ನೀವು ಈ ಬ್ರೌನ್‌ ಮಸ್ಕರಾದಿಂದಲೇ ಆರಂಭಿಸಿ. ಇದು ಬ್ಲ್ಯಾಕ್‌ ಶೇಡ್‌ಗಿಂತ ತುಸು ಲೈಟ್‌ ಆಗಿರುತ್ತದೆ. ಆದರೆ ಇದರ ಪರಿಣಾಮ ಸಾಕಷ್ಟು ನ್ಯಾಚುರಲ್ ಎನಿಸುತ್ತದೆ. ಮೀಡಿಯಂ ಫೇರ್‌ ಕಾಂಪ್ಲೆಕ್ಷನ್ನಿನ ಹೆಂಗಸರಿಗೆ ಮಾತ್ರವಲ್ಲದೆ, ಬ್ರೌನ್‌ ಕಂಗಳ ಹೆಂಗಸರಿಗೂ ಇದು ಚೆನ್ನಾಗಿ ಒಪ್ಪುತ್ತದೆ. ಇದನ್ನು ಪಾರ್ಟಿ, ಫಂಕ್ಷನ್‌ಗಳಂಥ ವಿಶೇಷ ಸಂದರ್ಭಗಳಿಗೆ ಮಾತ್ರವಲ್ಲದೆ, ದೈನಂದಿನ ಬಳಕೆಗೂ ಯೂಸ್‌ ಮಾಡಿ. ಹಗಲು ಅಥವಾ ಇರುಳು ಎರಡು ಹೊತ್ತಿಗೂ ಇದು ನಡೆಯುತ್ತದೆ.

ಗೋಲ್ಡನ್ಮಸ್ಕರಾ

ನೀವು ಯಾವುದೇ ಸಂಜೆಯ ಪಾರ್ಟಿಗೆ ಹೊರಡುತ್ತಿರುವಿರಾದರೆ ಗ್ರೀನ್‌, ಬ್ಲೂ, ಪರ್ಪಲ್ ಮಸ್ಕರಾಗಳನ್ನು ಬಿಟ್ಟು ಗೋಲ್ಡನ್ ಆರಿಸುವುದೇ ಸೂಕ್ತ. ಆಗ ನೀವು ಪಾರ್ಟಿಯ ಕೇಂದ್ರಬಿಂದು ಆಗುತ್ತೀರಿ. ಇದು ಎಲ್ಲಾ ಬಗೆಯ ಕಂಗಳ ಶೇಡ್ಸ್ ಗೂ ಒಪ್ಪುತ್ತದೆ. ಡಾರ್ಕ್‌, ಮೀಡಿಯಂ, ಫೇರ್‌ ಸ್ಕಿನ್‌ ಟೋನ್‌ವುಳ್ಳ ಮಹಿಳೆಯರಿಗೂ ಗೋಲ್ಡನ್‌ ಶೇಡ್‌ನ ಮಸ್ಕರಾ ಹೆಚ್ಚು ಒಪ್ಪುತ್ತದೆ. ಅಂದರೆ ಬೇರೆ ಶೇಡ್ಸ್ ನ ಮಸ್ಕರಾ ಇಟ್ಟುಕೊಳ್ಳಿ ಬಿಡಿ, ಪಾರ್ಟಿಯ ಕೇಂದ್ರಬಿಂದು ಆಗಲು ನೀವು ಗೋಲ್ಡನ್‌ ಶೇಡ್‌ ಮಸ್ಕರಾವನ್ನು ನಿಮ್ಮ ವ್ಯಾನಿಟಿ ಬ್ಯಾಗಿಗೆ ಸೇರಿಸಲು ಮರೆಯದಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ