ಈ ಫೇಸ್‌ ಮಿಸ್ಟ್ ನ ಕಾನ್ಸೆಪ್ಟ್ ಇತ್ತೀಚಿನ ಕೆಲವು ವರ್ಷಗಳ ಕೊಡುಗೆ ಎನ್ನಬಹುದು. ಇದರಲ್ಲಿ ಮುಖ್ಯವಾಗಿ ಮೇಕಪ್‌ ಮಾಡಿಕೊಳ್ಳುವ ಮೊದಲು ಚರ್ಮವನ್ನು ರೆಡಿ ಮಾಡಲು ಕ್ಲೆನ್ಸರ್‌ಮಾಯಿಶ್ಚರೈಸರ್‌ ನಂತರ ಮಿಸ್ಟ್ ಬಹಳ ಉಪಯುಕ್ತ ಎನಿಸಿದೆ.

ಇದನ್ನು ಪ್ರೀ ಪ್ರೈಮರ್‌ ಎಂದೂ ಹೇಳುತ್ತಾರೆ. ಏಕೆಂದರೆ ಇದು ಚರ್ಮದ ಹೈಡ್ರೇಶನ್‌ನನ್ನು ಬೂಸ್ಟ್ ಮಾಡಿ, ಅದರಲ್ಲಿ ಇನ್‌ಸ್ಟೆಂಟ್ ಗ್ಲೋ ತಂದುಕೊಡುತ್ತದೆ. ಈ ಕಾರಣದಿಂದ ಮೇಕಪ್‌ ಹೆಚ್ಚು ಹೊತ್ತು ಉಳಿಯುತ್ತದೆ. ಇದು ಬಹುತೇಕವಾಗಿ ನ್ಯಾಚುರಲ್ ಹರ್ಬ್‌ಪ್ರಾಡಕ್ಟ್ಸ್ ನಿಂದ ತಯಾರಾಗುತ್ತದೆ, ಇದರಿಂದಾಗಿ ಚರ್ಮದ ಮೇಲೆ ಇದರ ಪರಿಣಾಮ ನ್ಯಾಚುರಲ್ ಆಗಿಯೇ ಇರುತ್ತದೆ.

ಮಿಸ್ಟ್ ನ ಮಹತ್ವವೇನು?

ಇದರ ಕುರಿತಾಗಿ `ದಿ ಬ್ಯೂಟಿ ಕೋ ಡಾಟ್‌'ನ ಎಕ್ಸ್ ಪರ್ಟ್‌ ಸೂರಜ್‌ ವಾಜಿರಾನಿ ಹೇಳುವುದೆಂದರೆ, ಬ್ಯೂಟಿ ಇಂಡಸ್ಟ್ರಿ ಕಳೆದ ಹಲವ ವರ್ಷಗಳಿಂದ ಬಹಳ ಪ್ರಗತಿ ಸಾಧಿಸಿದೆ ಹಾಗೂ ಹೊಸ ಹೊಸ ಉತ್ಪನ್ನಗಳಿಂದ ಇಂದಿನ ಹೆಂಗಸರಿಗೆ ಅನುಕೂಲ ಕಲ್ಪಿಸಿದೆ. ಈ ದಿಸೆಯಲ್ಲಿ ಮಿಸ್ಟ್ ಸಹ ಸಾಕಷ್ಟು ಚಾಲ್ತಿಯಲ್ಲಿದೆ.

ಅಸಲಿಗೆ ಮಿಸ್ಟ್ ಎಂದರೆ ಒಂದು ಬಗೆಯ ಸ್ಕಿನ್‌ ಟ್ರೀಟ್‌ಮೆಂಟ್‌. ಇದು ಚರ್ಮಕ್ಕೆ ಪೋಷಣೆ, ಕಾಂತಿ, ಶಕ್ತಿ ಒದಗಿಸುತ್ತದೆ. ಇಂದಿನ ಹೆಂಗಸರು ಅತ್ಯಧಿಕ ಟೆನ್ಶನ್‌, ಮಾಲಿನ್ಯ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ನೇರ ಪರಿಣಾಮವನ್ನು ಅವರ ಚರ್ಮದ ಮೇಲೆ ಗಮನಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಿಸ್ಟ್ ಬಳಕೆಯಿಂದ ಚರ್ಮವನ್ನು ಎಷ್ಟೋ ಪಾಲು ಕಾಪಾಡಿಕೊಳ್ಳಬಹುದು.

ಅದರಿಂದ ಅನೇಕ ಲಾಭಗಳಿವೆ :

ಮೇಕಪ್‌ಗೆ ಮೊದಲು ಫೇಸ್‌ ಮಿಸ್ಟ್ ಬಳಸುವುದರಿಂದ ಬ್ಯೂಟಿ ಪ್ರಾಡಕ್ಟ್ಸ್ ಬಲು ಸುಲಭವಾಗಿ ಚರ್ಮದಲ್ಲಿ ವಿಲೀನವಾಗುತ್ತದೆ. ಇದರಿಂದ ಇನ್‌ಸ್ಟೆಂಟ್‌, ಫ್ರೆಶ್‌, ಮನೋಹರ ಲುಕ್ಸ್ ನಿಮ್ಮದಾಗುತ್ತದೆ. ಇದು ಎಲ್ಲಾ ಬಗೆಯ ಚರ್ಮಕ್ಕೂ ಅನ್ವಯವಾಗುತ್ತದೆ.

ನೀವು ಪಾರ್ಟಿಗೇನಾದರೂ ಹೊರಟಿದ್ದರೆ, ಇದರ ಸ್ಪ್ರೇಯಿಂದ ಸುಲಭವಾಗಿ ಟಚ್‌ ಅಪ್‌ ಸಿಗುತ್ತದೆ. ಸ್ಪ್ರೇ ನಂತರ ಬೆರಳ ತುದಿಯಿಂದ ಬ್ಲೆಂಡ್‌ ಮಾಡಿ. ಇದರಿಂದ ನಿಮ್ಮ ಸುಸ್ತು ಎಷ್ಟೋ ಪಟ್ಟು ಕಡಿಮೆ ಆಗುತ್ತದೆ. ಹಾಗಾಗಿ ಅದರ ಪ್ರಪಲ್ಲತೆಯ ಪರಿಣಾಮ ನಿಮ್ಮ ಚರ್ಮದ ಮೇಲೆ ಕಾಣಿಸುತ್ತದೆ.

ಇಡೀ ದಿನದಲ್ಲಿ ಯಾವಾಗ ಬೇಕಾದರೂ ಇದನ್ನು ಬಳಸಿಕೊಳ್ಳಬಹುದು, ಸ್ಪ್ರೇ ಮಾಡಬಹುದು. ಇದರಿಂದ ಸುಲಭವಾಗಿ ಪರ್ಫೆಕ್ಟ್ ಲುಕ್ಸ್ ಸಿಗುತ್ತದೆ.

ಇದು ರಫ್‌ ಸ್ಕಿನ್‌ನ್ನು ಸಹ ತಾಜಾ ಆಗಿಸಬಲ್ಲದು. ಏಕೆಂದರೆ ಸುದೀರ್ಘ ಕಾಲ ಏಸಿ ಅಡಿ ಕೆಲಸ ಮಾಡುತ್ತಿದ್ದರೆ ಅಥವಾ ಹೊರಗಿನ ಬಿಸಿಲಿನಲ್ಲಿ ಓಡಾಡುತ್ತಿದ್ದರೆ, ಚರ್ಮ ತನ್ನ ಆರ್ದ್ರತೆ ಕಳೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಇದು ಆರ್ದ್ರತೆಯನ್ನು ಕಾಪಿಡುವ ಕೆಲಸ ಮಾಡುತ್ತದೆ.

ಯಾವ ಹೆಂಗಸರು ಅಧಿಕ ಮೇಕಪ್‌ ಮಾಡಿಕೊಳ್ಳುತ್ತಾರೋ, ಸಹಜವಾಗಿಯೇ ಅವರ ಚರ್ಮ ಡ್ರೈ  ನಿರ್ಜೀವ ಆಗಿಬಿಡುತ್ತದೆ. ಅಂಥವರಿಗೆ ಫೇಸ್‌ ಮಿಸ್ಟ್ ಹೆಚ್ಚು ಲಾಭದಾಯಕ.

ಇದು ಮಾಯಿಶ್ಚರೈಸರ್‌ನಡಿ ಹೈಡ್ರೇಶನ್‌ನ ಎಕ್ಸ್ ಟ್ರಾ ಲೇಯರ್‌ ಆಗಿ ಮೂಡಿ, ಪರ್ಫೆಕ್ಟ್ ಟೋನರ್‌ನ ಕೆಲಸ ಮಾಡುತ್ತದೆ.

ಇದು ಚರ್ಮಕ್ಕೆ 100% ನ್ಯಾಚುರಲ್ ಲುಕ್ಸ್ ನೀಡುತ್ತದೆ. ಹಾಗಾಗಿ ಪ್ರತಿಯೊಂದು ಬಗೆಯ ಸ್ಕಿನ್‌ ಟೋನ್‌ಗೂ ಉಪಯುಕ್ತ ಅನಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ