ಮಳೆಗಾಲದಲ್ಲಿ ಕೂದಲು ಮತ್ತೆ ಮತ್ತೆ ನೀರಿನಲ್ಲಿ ನೆನೆಯುವುದರಿಂದ ಅದು ಅಂಟಂಟಾಗಿ, ಸಿಕ್ಕಾಗಿ, ಉದುರಿ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಸೀಸನ್ ಎಲ್ಲಾ ಬಗೆಯ ಕೂದಲಿನವರಿಗೂ ಸಮಸ್ಯೆ ಎನಿಸಿದೆ. ಅದರಲ್ಲೂ ಆಯ್ಲಿ ಹೇರ್‌ನವರಿಗೆ ಈ ಸಮಸ್ಯೆ ಇನ್ನೂ ಜಾಸ್ತಿ. ಆಯ್ಲಿ ಹೇರ್ ಪರಿಸರದ ಕೊಳೆ, ಮಾಲಿನ್ಯಗಳನ್ನು ಸುಲಭವಾಗಿ ಆಕರ್ಷಿಸುತ್ತದೆ. ಈ ಕಾರಣಗಳಿಂದ ಕೂದಲು ಉದುರತೊಡಗುತ್ತದೆ.
ಮಳೆಗಾಲದಲ್ಲಿ ಕೂದಲು ಆಗಾಗ ಒದ್ದೆ ಆಗುತ್ತದೆ. ಮಳೆಯ ಹನಿಗಳಲ್ಲಿನ ಮಾಲಿನ್ಯ ಮತ್ತು ಆ್ಯಸಿಡ್ ಬೆರೆತ ನೀರು ಕೂದಲಿಗೆ ಹಾನಿ ಮಾಡುತ್ತದೆ. ಆದ್ದರಿಂದ ಸಾಧ್ಯವಿದ್ದಷ್ಟು ಮಳೆಯಲ್ಲಿ ನೆನೆಯಬೇಡಿ. ಹಾಗೂ ನೆನೆದರೆ, ಮನೆಗೆ ಹೋದ ತಕ್ಷಣ ತುಸು ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆದು, ಒಣಗಿಸಿ. ಈ ಸೀಸನ್‌ನಲ್ಲಿ ಯಾವುದೇ ಬಗೆಯ ಹೇರ್ ಜೆಲ್ ಅಥವಾ ಹೇರ್ ಸ್ಟೈಲಿಂಗ್ ಪ್ರಾಡಕ್ಟ್ಸ್ ಬಳಸಲೇಬೇಡಿ. ಈ ಸಂದರ್ಭದಲ್ಲಿ ಕೆಮಿಕಲ್ ಫ್ರೀ ಹೇರ್ ಪ್ರಾಡಕ್ಟ್ಸ್ ಉಪಯೋಗಿಸಬೇಕು. ನಿಯಮಿತ ಕಂಡೀಶನಿಂಗ್ ಮತ್ತು ಶ್ಯಾಂಪೂನಿಂದ ನೆತ್ತಿಯ ಚರ್ಮದಿಂದ ಹೆಚ್ಚುವರಿ ತೈಲಾಂಶ ಹೋಗಿಬಿಡುತ್ತದೆ, ಇದರಿಂದ ಕೂದಲು ಡ್ರೈ ಆಗಿ ಉದುರತೊಡಗುತ್ತದೆ.
ಸ್ವಸ್ಥ ಕೂದಲು ಪಡೆಯಲಿಕ್ಕಾಗಿ, ಹಳೆಯ ಕಾಲದ ಹೇರ್ ರೊಟೀನ್ ಬಿಟ್ಟು, ಹೊಸ ರೊಟೀನ್ ಫಾಲೋ ಮಾಡಬೇಕು. ಅದು ಯಾವುವೆಂದರೆ :
- ನೀವು ಪ್ರತಿದಿನ ಶ್ಯಾಂಪೂ ಬಳಸುತ್ತೀರಾದರೆ, ಮೈಲ್ಡ್ ಶ್ಯಾಂಪೂ ಮಾತ್ರ ಬಳಸಿರಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ಹೆಚ್ಚುತ್ತದೆ. ಆದರೆ ಮಳೆಯ ಕಾರಣದಿಂದ ಕೂದಲು ಒದ್ದೆಮುದ್ದೆ ಆಗಿಹೋಗುತ್ತದೆ. ಹೀಗಾಗಿ ವಾರಕ್ಕೆ 2-3 ಸಲ ಮಾತ್ರ ಶ್ಯಾಂಪೂ ಬಳಸಿ ಸ್ನಾನ ಮಾಡಿ.
- ಸ್ಮೂಥ್ ಕೆರಾಟಿನ್‌ಯುಕ್ತ ಶ್ಯಾಂಪೂ ಈ ಸೀಸನ್‌ನಲ್ಲಿ ಹೆಚ್ಚು ಲಾಭದಾಯಕ. ಇದರಿಂದ ಕೂದಲು ಶುಭ್ರ, ಸ್ವಚ್ಛ, ಸಿಲ್ಕಿ, ದಟ್ಟವಾಗಿ ಹೊಳೆಹೊಳೆಯ ತೊಡಗುತ್ತದೆ. ಕೆರಾಟಿನ್ ಕೂದಲಿಗೆ ಪೋಷಣೆ ನೀಡುತ್ತದೆ, ಇದರಿಂದ ಅದು ಸಿಕ್ಕಾವುಗುದಿಲ್ಲ. ಇಷ್ಟು ಮಾತ್ರವಲ್ಲದೆ ಕೂದಲಿನ ಕಂಡೀಶನಿಂಗ್, ಸೀರಮ್ ಅಳವಡಿಕೆ ಇತ್ಯಾದಿ ಲಾಭದಾಯಕ.
- ಶ್ಯಾಂಪೂ ಮಾಡಿದ ನಂತರ ಕೂದಲಿಗೆ ಮಾಸ್ಕ್ ಹಚ್ಚಬೇಕಾದುದು ಅನಿವಾರ್ಯ. ನಿಮ್ಮ ಕೂದಲು ಫಿಝಿ ಎನಿಸಿದ್ದರೆ, ಆ್ಯಂಟಿಫಿಝಿ ಮಾಸ್ಕ್ ಬಳಸಬೇಕು. ಮಾಸ್ಕನ್ನು ಬಹಳ ಹೊತ್ತು ಹಾಗೆಯೇ ಧರಿಸಿರಬಾರದು. ಇಲ್ಲದಿದ್ದರೆ, ನಿಮ್ಮ ಕೂದಲು ಜಿಡ್ಡು ಜಿಡ್ಡಾಗುತ್ತದೆ. ಕೇವಲ 5-6 ನಿಮಿಷ ಧರಿಸಿದ್ದರೆ ಸಾಕು.
- ಮಳೆಗಾಲದಲ್ಲೂ ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದು ಒಳ್ಳೆಯವುದು. ಜೊತೆಗೆ ಕೆಲವು ಹನಿ ಹಿಪ್ಪೆ ಎಣ್ಣೆ (ಆಲಿವ್ ಆಯಿಲ್) ಬೆರೆಸಿದ್ದರೆ ಇನ್ನೂ ಉತ್ತಮ. ಇದು ಕೂದಲಿಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಶ್ಯಾಂಪೂ ಮಾಡಿಕೊಳ್ಳುವ ಮುನ್ನ ವಾರದಲ್ಲಿ 1-2 ಸಲ ಈ ಎಣ್ಣೆಯನ್ನು ತುಸು ಬೆಚ್ಚಗೆ ಮಾಡಿ ಕೂದಲಿನ ಬುಡಕ್ಕೆ ಹಚ್ಚಿರಿ. ಸಮಯದ ಕೊರತೆ ಎನಿಸಿದರೆ 5 ನಿಮಿಷದಿಂದ ಅರ್ಧ ಗಂಟೆವರೆಗೂ ನಿಧಾನವಾಗಿ ತಲೆಗೂದಲಲ್ಲಿ ಮಸಾಜ್ ಮಾಡುವುದರಿಂದ, ಬೆಚ್ಚಗಿನ ನೀರಲ್ಲಿ ಅದ್ದಿಹಿಂಡಿದ ಟರ್ಕಿ ಟವೆಲನ್ನು ತಲೆಗೆ ಬಿಗಿಯಾಗಿ ಸುತ್ತಿಕೊಳ್ಳಿ. ಶ್ಯಾಂಪೂ ನಂತರ ಕೂದಲನ್ನು ಡ್ರೈಯರ್‌ನಿಂದ ಒಣಗಿಸಿ, ಆಗ ಕೂದಲು ಹೊಳೆ ಹೊಳೆಯತೊಡಗುತ್ತದೆ.