ಮಳೆಗಾಲದ ತುಂತರು ಹನಿಯ ಮಜಾ ಯಾರಿಗೆ ಇಷ್ಟವಿಲ್ಲ? ಬಿಸಿಲ ಧಗೆಯಿಂದ ಬಿಡುವು ದೊರಕಿದಂತೆ, ಈ ಮಳೆಗಾಲದಲ್ಲಿ ಹೊರಗಿನ ತಿರುಗಾಟ ದೊಡ್ಡ ಕಿರಿಕಿರಿ ಎನಿಸುತ್ತದೆ. ಈವ್ನಿಂಗ್‌ ಪಾರ್ಟಿಗಾಗಿ ನೀವು ಗ್ರಾಂಡಾಗಿ ಮೇಕಪ್‌ ಮಾಡಿಕೊಂಡು ಹೊರ ಹೊರಟಾಗ, ಮಳೆ ಹನಿ ಮೇಕಪ್‌ನ್ನು ತೊಳೆದುಬಿಡಬಾರದು. ಹೀಗಾಗಿ, ಸೀಸನ್‌ಗೆ ತಕ್ಕಂತೆ ಮೇಕಪ್‌ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಈ ಮುಂಜಾಗರೂಕತೆ ವಹಿಸದಿದ್ದರೆ, ಮಾಡಿಕೊಂಡ ಮೇಕಪ್‌ ಪೂರ್ತಿ ಹಾಳಾಗುತ್ತದೆ. ಆದ್ದರಿಂದ ಈ ಸೀಸನ್‌ಗೆ ತಕ್ಕಂತೆ ಮೇಕಪ್‌ ಮಾಡಿದ್ದರೆ, ಈಗ ನಿಮ್ಮ ಮೇಕಪ್‌ ದೀರ್ಘಾವಧಿ ಕಾಲ ಹಾಗೇ ಉಳಿಯುತ್ತದೆ.

ಪ್ರತಿಯೊಂದು ಸೀಸನ್‌ನಲ್ಲೂ ತ್ವಚೆಗೆ ಆರ್ದ್ರತೆಯ ಅಗತ್ಯ ಇದ್ದೇ ಇದೆ. ಆದ್ದರಿಂದ ನೀವೇನಾದರೂ ಮಾಯಿಶ್ಚರ್‌ ರಹಿತ ಮೇಕಪ್‌ ಮಾಡಿದ್ದರೆ, ಆಗ ಅದು ಬಹಳ ಹೊತ್ತು ಬಾಳಿಕೆ ಬರುವುದಿಲ್ಲ. ಮಳೆಗಾಲದಲ್ಲಿ ತಾವು ಮಾಡಿಕೊಂಡ ಮೇಕಪ್‌ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಹೆಂಗಸರು ಮೇಕಪ್‌ನ ಗೋಜಿಗೇ ಹೋಗುವುದಿಲ್ಲ. ಒಮ್ಮೊಮ್ಮೆ ವಾಟರ್‌ಪ್ರೂಫ್‌ ಮೇಕಪ್‌ ಕೆಲಸಕ್ಕೇ ಬರುವುದಿಲ್ಲ.

ಇಲ್ಲಿ ಮಳೆಗಾಲವನ್ನೇ ಪ್ರಧಾನವಾಗಿಟ್ಟು ಕೊಂಡು ಕೆಲವು ಸಲಹೆ ನೀಡಲಾಗಿದೆ. ಈ ಸಲಹೆ ಅನುಸರಿಸಿ ನೀವು ಮಳೆಗಾಲದಲ್ಲೂ ಮಿರಿಮಿರಿ ಮಿಂಚಬಹುದು.

ಮೇಕಪ್‌ ಹೀಗೆ ಮಾಡಿಕೊಳ್ಳಿ

ಕ್ರೀಂ ಬ್ಲಶರನ್ನೇ ಬಳಸಬೇಕು.

ಫೌಂಡೇಶನ್‌ಗೆ ಬದಲಾಗಿ ಫೇಸ್‌ ಪೌಡರ್‌ನ್ನು ಅಧಿಕ ಬಳಸಿರಿ.

ಐಶ್ಯಾಡೋ ಸದಾ ಗುಲಾಬಿ, ನ್ಯಾಚುರಲ್ ನಂಥ ಲೈಟ್‌ ಕಲರ್ಸ್‌ದೇ ಆಗಿರಬೇಕು.

ಪೌಡರ್‌ ಶ್ಯಾಡೋ ಬಳಸಿರಿ.

ಈ ಸೀಸನ್‌ನಲ್ಲಿ ಮಸ್ಕರಾ ವಾಟರ್‌ಪ್ರೂಫ್‌ ಬಳಸಿರಿ, ಅದನ್ನು 2 ಪದರಗಳಾಗಿ ಹಚ್ಚಬೇಕು.

ಲಿಕ್ವಿಡ್‌ ಐ ಲೈನರ್‌ ಬದಲಿಗೆ ಪೆನ್ಸಿಲ್‌ ಐಲೈನರ್‌ ಬಳಸಬಹುದು.

ಐಬ್ರೋ ಪೆನ್ಸಿಲ್ ಬಳಸುವ ಬದಲು, ಐಬ್ರೋಸ್‌ ಜೆಲ್‌ ಬಳಸುವುದರಿಂದ ಫ್ರೆಶ್‌ ಲುಕ್‌ ಕಾಣಿಸುತ್ತದೆ.

ಈ ಸೀಸನ್‌ನಲ್ಲಿ ಮ್ಯಾಟ್‌ ಲಿಪ್‌ಸ್ಟಿಕ್‌ನ ಬಳಕೆ ಉತ್ತಮ ಎನಿಸುತ್ತದೆ. ನಿಯಾನ್‌ ಪಿಂಕ್‌ ಈ ಸೀಸನ್‌ಗೆ ಉತ್ತಮ ಲುಕ್ಸ್ ನೀಡುತ್ತದೆ. ಆದರೆ ಲಿಪ್‌ಸ್ಟಿಕ್‌ನ್ನು ನಿಮ್ಮ ಉಡುಗೆಗೆ ತಕ್ಕಂತೆ ಆರಿಸಿ.

ಇದರ ಜೊತೆಗೆ ಈ ಸೀಸನ್‌ನಲ್ಲಿ ನೀವು ಯಾವುದೇ ಪಾರ್ಟಿಗೆ ಹೋಗಬೇಕಾದರೆ, ಹೆವಿ ಮೇಕಪ್‌ ಬೇಕೆನಿಸುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಾಟರ್‌ಪ್ರೂಫ್‌ ಫೌಂಡೇಶನ್‌, ಐಲೈನರ್‌, ಮಸ್ಕರಾ, ಲಿಪ್‌ಸ್ಟಿಕ್‌, ಬ್ಲಶರ್‌ ಎಲ್ಲ ಸಿಗುತ್ತದೆ. ಈ ಸೀಸನ್‌ನಲ್ಲಿ ಇವನ್ನು ಬಳಸುವುದು ಲೇಸು.

ಪ್ರಭಾವಶಾಲಿ ವಿಧಾನ

ಈ ಸೀಸನ್‌ನಲ್ಲಿ ಆಯ್ಲಿ ಸ್ಕಿನ್‌ಗಾಗಿ ಆ್ಯಸ್ಟ್ರಿಂಜೆಂಟ್‌ ಬಳಸಬೇಕು. ಅದೇ ನಾರ್ಮಲ್  ಡ್ರೈಸ್ಕಿನ್‌ಗಾಗಿ, ತಣ್ಣೀರಿನಿಂದ ಮುಖ ತೊಳೆದ ಮೇಲೆ ಟೋನರ್‌ ಬಳಸಬೇಕು. ಪ್ರತಿ ಸೀಸನ್‌ನಲ್ಲೂ ಚರ್ಮವನ್ನು ಸ್ವಚ್ಛ ಶುಭ್ರವಾಗಿ ಇಟ್ಟುಕೊಳ್ಳಬೇಕು. ಮಳೆಯಲ್ಲಿ ಮುಖ ತೊಳೆದಿದ್ದರೆ, ಮನೆಗೆ ಬಂದ ಮೇಲೆ ಅದನ್ನು ಐಸ್‌ಕ್ಯೂಬ್‌ನಿಂದ 8-10 ನಿಮಿಷ ನಿಧಾನವಾಗಿ ಮಸಾಜ್‌ ಮಾಡಿ. ಮುಖವನ್ನು ಸುಂದರವಾಗಿ ಇಟ್ಟುಕೊಳ್ಳಲು ಇದೊಂದು ಪ್ರಭಾವಶಾಲಿ ವಿಧಾನವಾಗಿದೆ.

ನ್ಯಾಚುರಲ್ ಮೇಕಪ್

ಮಾನ್‌ಸೂನ್‌ನಲ್ಲಿ ಬಳಸುವ ಮೇಕಪ್‌ ಬ್ರಶ್‌ನ್ನು ಸದಾ ಶುಭ್ರ, ಡ್ರೈ ಆಗಿಡಬೇಕು. ಮೇಕಪ್‌ ಬ್ರಶ್‌ನ್ನು ಸದಾ ಯಾವುದೇ ಬಾಕ್ಸ್ ಅಥವಾ ಪೌಚ್‌ನಲ್ಲಿ ಒಣಗಿಸಿ ಇಡಿ. ಲಿಪ್‌ಸ್ಟಿಕ್‌, ಮೇಕಪ್‌ ಬ್ರಶ್‌ಗಳನ್ನು ಎಂದೂ ಪರರಿಂದ ಪಡೆಯಬೇಡಿ, ಪರರಿಗೆ ಕೊಡಬೇಡಿ. ಮಾನ್‌ಸೂನ್‌ನಲ್ಲಿ ಮೇಕಪ್‌ ನ್ಯಾಚುರಲ್ ಆಗಿರುವುದೇ ಸರಿ. ಆದರೆ ನೀವು ಹೆವಿ ಅಥಾ ಲೈಟ್‌ ಡ್ರೆಸ್‌ ಧರಿಸಿದ್ದರೆ, ಅದಕ್ಕೆ ತಕ್ಕಂತೆ ಮೇಕಪ್‌ ಮಾಡಿಕೊಳ್ಳಲು ಮರೆಯದಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ