ಚರ್ಮ ಕಾಂತಿಯುತವಾಗಿ ಇರಬೇಕೆಂದರೆ ಅದಕ್ಕೆ ಸೂಕ್ತ ಪೋಷಣೆ ದೊರೆಯುವುದು ಅತ್ಯಗತ್ಯ. ಆದ್ದರಿಂದ ನೈಸರ್ಗಿಕ ಕಾಂತಿಗಾಗಿ ಕೆಲವಾರು ವಿಷಯಗಳನ್ನು ಗಮನದಲ್ಲಿರಿಸಬೇಕಾಗುತ್ತದೆ :

ಚರ್ಮದ ಪ್ರಕಾರ : ಚರ್ಮದ ಬಳಕೆಗಾಗಿ ಅನೇಕ ಬಗೆಯ ಲೋಶನ್‌ಗಳು ಲಭ್ಯವಿದ್ದು, ಅವುಗಳನ್ನು ವಿಭಿನ್ನ ರೀತಿಯ ಚರ್ಮಕ್ಕಾಗಿ ತಯಾರಿಸಲಾಗಿರುತ್ತದೆ. ಆದ್ದರಿಂದ ಚರ್ಮ ತಜ್ಞರಲ್ಲಿಗೆ ಹೋಗಿ ಅವರಿಂದ ನಿಮ್ಮ ಚರ್ಮದ ಬಗ್ಗೆ ಮಾಹಿತಿ ಪಡೆಯಿರಿ.

ನೀರಿನ ಪ್ರಮಾಣ : ಮುಖದ ಕಾಂತಿಯನ್ನು ಕಾಪಾಡುವಲ್ಲಿ ನೀರಿನ ಪಾತ್ರ ಬಹು ಮುಖ್ಯವಾಗಿ ಇರುತ್ತದೆ. ಯಥೇಚ್ಛ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಚರ್ಮದಲ್ಲಿ ಹೊಳಪು ಮೂಡುತ್ತದೆ. ಆದ್ದರಿಂದ ಪ್ರತಿದಿನ 8-10 ಲೋಟ ನೀರನ್ನು ತಪ್ಪದೆ ಕುಡಿಯಿರಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ಕ್ಲೆನ್ಸರ್‌ : ಇದು ಚರ್ಮದ ಸ್ವಚ್ಛತೆಯ ಬಹು ಮುಖ್ಯ ಭಾಗವಾಗಿದೆ. ಇದರಿಂದ ಚರ್ಮದ ಮಲಿನತೆ ದೂರವಾಗಿ ಫ್ರೆಶ್‌ನೆಸ್ ಉಂಟಾಗುತ್ತದೆ ಮತ್ತು ಮುಖ ಸುಂದರ ಹಾಗೂ ಕಲೆರಹಿತವಾಗಿ ಗೋಚರಿಸುತ್ತದೆ. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಕ್ಲೆನ್ಸರ್‌ನ್ನು ಆಯ್ಕೆ ಮಾಡಿಕೊಳ್ಳಿ.

ರೋಸ್‌ ವಾಟರ್‌

ಇದು ಒಂದು ಉತ್ತಮ ಕ್ಲೆನ್ಸರ್‌ ಎಂದು ಸಾಬೀತಾಗಿದೆ. ಇದರ ವೈಶಿಷ್ಟ್ಯವೆಂದರೆ ಇದು ಎಲ್ಲ ಪ್ರಕಾರದ ಚರ್ಮಕ್ಕೂ ಸೂಕ್ತವಾಗಿರುತ್ತದೆ ಮತ್ತು ಅದರಿಂದ ಯಾವುದೇ ದುಷ್ಪ್ರಭಾವ ಇರುವುದಿಲ್ಲ.

ಫೇಸ್‌ ಪ್ಯಾಕ್‌ : ಮನೆಯಲ್ಲೇ ತಯಾರಿಸಿದ ಫೇಸ್‌ ಪ್ಯಾಕ್‌ ಎಲ್ಲಕ್ಕಿಂತ ಉತ್ತಮವೆಂದು ಹೇಳಲಾಗುತ್ತದೆ. ಚರ್ಮದ ಆರೋಗ್ಯಕ್ಕೆ ಇದು ಬಹಳ ಸಹಕಾರಿಯಾಗಿರುತ್ತದೆ.

ಮನೆಯಲ್ಲಿ ಫೇಸ್‌ ಪ್ಯಾಕ್‌ ತಯಾರಿಸಲು 2 ಚಮಚ ಕಡಲೆಹಿಟ್ಟು, ಅರ್ಧ ಚಮಚ ಅರಿಶಿನ, 1 ಚಿಟಕಿ ಚಂದನದ ಪುಡಿ, 1 ಚಿಟಕಿ ಕರ್ಪೂರ ಮತ್ತು ಕೊಂಚ ರೋಸ್‌ ವಾಟರ್‌ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನೂ ಮುಖಕ್ಕೆಲ್ಲ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ. ಹೀಗೆ ತಯಾರಿಸಿದ ಫೇಸ್‌ ಪ್ಯಾಕ್‌ನ್ನು ವಾರಕ್ಕೊಂದು ಸಲ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ. ಇದೇ ರೀತಿ ಮತ್ತೊಂದು ಫೇಸ್‌ ಪ್ಯಾಕ್‌ ತಯಾರಿಕೆಗಾಗಿ 1 ಚಮಚ ಆ್ಯಲೋವೆರಾ ಜೆಲ್‌, 1 ಚಮಚ ಹಾಲು, 1 ಚಮಚ ಜೇನುತುಪ್ಪ ಮತ್ತು 1 ಚಿಟಕಿ ಅರಿಶಿನ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. 20 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ. ಈ ಮಿಶ್ರಣವನ್ನು ವಾರಕ್ಕೆರಡು ಸಲ ಹಚ್ಚಿರಿ. ಚರ್ಮದ ತೊಂದರೆಗಳನ್ನು ದೂರ ಮಾಡುವಲ್ಲಿ ಆ್ಯಲೋವೆರಾ ಜೆಲ್ ‌ಒಂದು ಉತ್ತಮ ಸಾಧನ. ಇದು ಮುಖದ ಊತವನ್ನೂ ಕಡಿಮೆ ಮಾಡುತ್ತದೆ.

ಟೋನರ್‌ : ಇದು ನಿಮ್ಮ  ಚರ್ಮದ ಆರ್ದ್ರತೆಯ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಚರ್ಮ ಒಣಗದಂತೆ ರಕ್ಷಿಸುತ್ತದೆ ಹಾಗೂ ಚರ್ಮವನ್ನು ಟೋನ್‌ ಮಾಡಿ ಹೈಡ್ರೇಟ್‌ ಆಗಿರಿಸುತ್ತದೆ. ಫೇಸ್‌ ಮಾಸ್ಕ್ ಬಳಸಿದ ನಂತರ ಟೋನರ್‌ ಉಪಯೋಗಿಸುವುದರಿಂದ ಮುಖದ ಫ್ರೆಶ್‌ನೆಸ್‌ ಹೆಚ್ಚುತ್ತದೆ.

ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆಯು ಉತ್ತಮ ಮಾಯಿಶ್ಚರೈಸಿಂಗ್‌ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ರಾತ್ರಿ ಮಲಗುವ ಮುನ್ನ ಬೆಚ್ಚನೆಯ ಕೊಬ್ಬರಿ ಎಣ್ಣೆಯನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. ಇದು ಒಣ ಚರ್ಮಕ್ಕೆ ಬಹಳ ಒಳ್ಳೆಯದು. ಇದು ಗಂಟೆಗಳ ಕಾಲ ಚರ್ಮದ ತೇವಾಂಶವನ್ನು ಉಳಿಸಿರುತ್ತದೆ. ಇದರಲ್ಲಿರುವ ಫ್ಯಾಟಿ ಆ್ಯಸಿಡ್‌ ಚರ್ಮ ರಕ್ಷಣೆಗೆ ಪೂರಕವಾಗಿದ್ದು, ಫೆನೊಲಿಕ್ ಕಾಂಪೌಂಡ್‌ ಚರ್ಮಕ್ಕೆ ಆ್ಯಂಟಿ ಆಕ್ಸಿಡೆಂಟ್‌ನಂತೆ ಕೆಲಸ ಮಾಡುತ್ತದೆ ಮತ್ತು ನೈಸರ್ಗಿಕ ಕಾಂತಿ ಒದಗಿಸುತ್ತದೆ. 1 ಚಮಚ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಸೇರಿಸಿ. ಇದನ್ನು ವಾರದಲ್ಲಿ 1-2 ಸಲ ಸ್ಕ್ರಬ್‌ನಂತೆ ಬಳಸಬಹುದು. ಇದೊಂದು ಉತ್ತಮ ಎಕ್ಸ್ ಫೋಲಿಯೇಟರ್‌ ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ