ತ್ವಚೆಯ ಬ್ಯೂಟಿಗಾಗಿ ಕಾಸ್ಮೆಟಿಕ್ ಪ್ರಾಡಕ್ಟ್ಸ್ ಜೊತೆಯಲ್ಲೇ ಹಲವಾರು ವಸ್ತುಗಳನ್ನು ಬಳಸಿ ಅದನ್ನು ಸದಾಕಾಲ ಇರುವಂತೆ ಮಾಡಬಹುದು. ಈ ವಸ್ತುಗಳು ಕೇವಲ ಆರೋಗ್ಯಕರ ಮಾತ್ರವಲ್ಲದೆ, ಹಲವಾರು ಬಗೆಯ ಸೈಡ್ ಎಫೆಕ್ಟ್ ಗಳಿಂದಲೂ ಕಾಪಾಡುತ್ತವೆ. ಉದಾ: ಬಾದಾಮಿ, ಕೇಸರಿ, ಹಾಲು, ಜೇನುತುಪ್ಪ, ಗುಲಾಬಿ, ಬೇವು ಇತ್ಯಾದಿ. ಇಂಥವುಗಳಲ್ಲಿ ಅಡಗಿರುವ ನೈಸರ್ಗಿಕ ಘಟಕಗಳಿಂದ ಅವು ತ್ವಚೆಯನ್ನು ಗ್ಲೋ ಆಗಿಸುವುದಲ್ಲದೆ, ಸುಕ್ಕುಗಳು ಕಾಡದಂತೆ ರಕ್ಷಿಸುತ್ತವೆ. ಇವುಗಳ ನಿಯಮಿತ ಬಳಕೆಯಿಂದ ನೀವು ಎಲ್ಲಾ ವಯಸ್ಸಿನಲ್ಲಿಯೂ ಯಂಗ್ ಆಗಿಯೇ ಕಾಣುವಿರಿ. ಬನ್ನಿ ಇವುಗಳ ಲಾಭದ ಬಗ್ಗೆ ತಿಳಿಯೋಣ :
ಗುಲಾಬಿ
ಇದರಲ್ಲಿ ವಿಟಮಿನ್ಸ್, ಮಿನರಲ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿದ್ದು, ಇದು ಮಾಯಿಶ್ಚರೈಸರ್‌ನ ಕೆಲಸ ಮಾಡುವುದಲ್ಲದೆ, ಇದರಲ್ಲಿ ಆ್ಯಂಟಿ ಸೆಫ್ಟಿಕ್, ಆ್ಯಂಥ್ರಿಜೆಂಟ್, ಆ್ಯಂಟಿ ಇನ್‌ಫ್ಲಮೇಟರಿ ಗುಣಗಳೂ ಇರುವುದರಿಂದ, ಇದು ಆ್ಯಕ್ನೆ ಮತ್ತು ರೆಡ್‌ನೆಸ್ ಹಿಂಸೆಗಳಿಂದಲೂ ಮುಕ್ತಿ ಕೊಡಿಸುತ್ತದೆ.
ಸ್ಕಿನ್ ಆಗುತ್ತದೆ ಕ್ಲಿಯರ್: ಆ್ಯಂಟಿ ಆಕ್ಸಿಡೆಂಟ್ ಗುಣದಿಂದಾಗಿ ಗುಲಾಬಿ ಚರ್ಮವನ್ನು ಕೀಟಾಣುಗಳಿಂದ ಮುಕ್ತಗೊಳಿಸಿ, ಮುಖವನ್ನು ಸದಾ ಕ್ಲಿಯರ್ ಆಗಿಡುತ್ತದೆ. 1 ದೊಡ್ಡ ಚಮಚದಷ್ಟು ಗುಲಾಬಿ ದಳಗಳಿಗೆ ತುಸು ನೀರು ಚಿಮುಕಿಸಿ ಮುಖದ ಮೇಲೆ ಪೂರ್ತಿ ಹರಡಿ, ಸ್ವಲ್ಪ ಹೊತ್ತು ಹಾಗೇ ಇರಿ. ನಂತರ ತಣ್ಣೀರಲ್ಲಿ ಮುಖ ತೊಳೆದರೆ, ಅದು ಹೊಳೆಯುತ್ತದೆ.
ಮಾಯಿಶ್ಚರೈಸಿಂಗ್ ಗುಣ : ಗುಲಾಬಿಯ ದಳಗಳಲ್ಲಿ ಅಡಗಿರುವ ನ್ಯಾಚುರಲ್ ಆಯಿಲ್, ನಮ್ಮ ಜೀವಕೋಶಗಳನ್ನು ತಲುಪಿ ಅದಕ್ಕೆ ಆರ್ದ್ರತೆ ಒದಗಿಸುತ್ತದೆ. ಅದರಿಂದ ಚರ್ಮದಲ್ಲಿ ಸಹಜ ಹೊಳಪು ಹೆಚ್ಚುತ್ತದೆ.
ಆಯಿಲ್ ಕಂಟ್ರೋಲರ್ : ಹೆಚ್ಚಿನ ಟೋನರ್‌ಗಳಲ್ಲಿ ಆಲ್ಕೋಹಾಲ್ ಇರುವುದರಿಂದ, ಅವು ಚರ್ಮವನ್ನು ಡ್ರೈ ಮಾಡುತ್ತವೆ. ಆದರೆ ಗುಲಾಬಿ ಚರ್ಮವನ್ನು ಆದಷ್ಟೂ ಸಾಫ್ಟ್ ಮಾಡುತ್ತದೆ. ಇದರ ಪೇಸ್ಟ್ ಸಿದ್ಧಪಡಿಸಿ ಮುಖಕ್ಕೆ ಸವರಿ ಒಣಗಲು ಬಿಡಿ. ಆಗ ಇದು ರೋಮರಂಧ್ರಗಳನ್ನು ಕಡಿಮೆ ಮಾಡುವುದಲ್ಲದೆ, ಚರ್ಮಕ್ಕೆ ಹೆಚ್ಚಿನ ತಾಜಾತನ ಗಳಿಸಿಕೊಡುತ್ತದೆ.
ಉರಿಗೆ ಉಪಶಮನ : ಆ್ಯಂಟಿ ಇನ್‌ಫ್ಲಮೆಟರಿ ಗುಣ ಇರುವುದರಿಂದ, ಇದು ಆ್ಯಕ್ನೆಗಳೊಂದಿಗೆ ಹೋರಾಡಿ ಚರ್ಮಕ್ಕೆ ಸದಾ ಕೂಲ್ ಕೂಲ್ ಫೀಲ್ ನೀಡುತ್ತದೆ.
ನ್ಯಾಚುರಲ್ ಸನ್‌ಸ್ಕ್ರೀನ್ : ಗುಲಾಬಿಯಲ್ಲಿ ಧಾರಾಳ ವಿಟಮಿನ್`ಸಿ' ಹಾಗೂ ಆ್ಯಂಟಿ ಆಕ್ಸಿಡೆಂಟ್ ಗುಣಗಳಿರುವುದರಿಂದ, ಇದು ಸೂರ್ಯನ UV ಕಿರಣಗಳಿಂದ ಚರ್ಮಕ್ಕೆ ರಕ್ಷಣೆ ಕೊಡುತ್ತದೆ. ಸನ್ ಬರ್ನ್ ಆಗಿರುವ ಚರ್ಮಕ್ಕೂ ಸಹ ಆರಾಮ ಒದಗಿಸುತ್ತದೆ. ಗುಲಾಬಿ ದಳಗಳನ್ನು ನೀರಿನಲ್ಲಿ ಕುದಿಸಿ ಚೆನ್ನಾಗಿ ಆರಲು ಬಿಡಿ. ಈ ನೀರಿನಿಂದ ಪ್ರತಿದಿನ ಮುಖ ತೊಳೆದರೆ, ಮುಖಕ್ಕೆ ಹೆಚ್ಚಿನ ಗ್ಲೋ ಸಿಗುತ್ತದೆ.
ಕೂದಲಿಗೆ ನೀಡಿ ಮಾಯಿಶ್ಚರ್ : ಇದು ಕೂದಲಿಗೆ ಮಾಯಿಶ್ಚರ್ ಒದಗಿಸಿ ಅದಕ್ಕೆ ಹೊಳಪು ನೀಡುತ್ತದೆ. ಇದಕ್ಕಾಗಿ ನೀವು ಡೇಲಿ ರೋಸ್ ವಾಟರ್‌ನಿಂದ ಕೂದಲಿಗೆ ಮಸಾಜ್ ಮಾಡಬೇಕು.
ಕೇಸರಿ
ಇದರಲ್ಲಿ ಪೊಟ್ಯಾಶಿಯಂ ಇರುವ ಕಾರಣ ಇದು ಜೀವಕೋಶಗಳನ್ನು ನಿರ್ಮಿಸಿ, ಅದರ ನಿರ್ವಹಣೆಯಲ್ಲೂ ಪ್ರಧಾನ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಇದ್ದು, ಅದು ಚರ್ಮಕ್ಕೆ ಬಲು ಲಾಭಕಾರಿ. ಇದರಲ್ಲಿ ಆ್ಯಂಟಿ ಫಂಗಲ್ ಗುಣಗಳೂ ಇರುದರಿಂದ, ಇದು ಆ್ಯಕ್ನೆ ಬಾರದಂತೆ ತಡೆಯುತ್ತದೆ.