ನಮ್ಮ ವ್ಯಕ್ತಿತ್ವಕ್ಕೆ ಮುಖವೇ ಕನ್ನಡಿ. ಆದ್ದರಿಂದಲೇ ಪ್ರತಿಯೊಬ್ಬ ಮಹಿಳೆಯೂ ತನ್ನ ಮುಖವನ್ನು ಸುಂದರವಾಗಿರಿಸಲು ಶತಪ್ರಯತ್ನ ಮಾಡುತ್ತಾಳೆ. ಆದರೆ ಮುಖ ಚರ್ಮ ಕಲೆರಹಿತವಾಗಿಯೂ ಮತ್ತು ತುಟಿಗಳು ಗುಲಾಬಿಯಂತೆಯೂ ಇದ್ದಾಗ ಮಾತ್ರ ಮುಖ ಸುಂದರವಾಗಿ ಕಾಣುತ್ತದೆ. ತುಟಿಗಳ ರಕ್ಷಣೆಗೆ ಕೆಲವು ಮುಖ್ಯ ಟಿಪ್ಸ್ ಬಗ್ಗೆ ತಿಳಿದುಕೊಳ್ಳಿ :

ತುಟಿಗಳ ಟ್ಯಾನಿಂಗ್‌ಗೆ ಕಾರಣಗಳು

ಕೆಲವು ಸಲ ಹೆಚ್ಚು ಕಾಸ್ಮೆಟಿಕ್ಸ್ ಬಳಕೆ ಅಥವಾ ಅಗ್ಗದ ಕಾಸ್ಮೆಟಿಕ್ಸ್ ಬಳಕೆಯಿಂದಲೂ ತುಟಿಗಳು ಟ್ಯಾನ್‌ ಆಗುತ್ತವೆ.

ಧೂಮಪಾನದಿಂದಲೂ ತುಟಿಗಳು ಕಪ್ಪಾಗುತ್ತವೆ.

ಹೆಚ್ಚು ಸಮಯ ಸ್ವಿಮಿಂಗ್‌ ಮಾಡುವುದರಿಂದ ತುಟಿಗಳು ಕಪ್ಪಾಗಬಹುದು.

ಹೆಚ್ಚು ಕೆಫೀನ್‌ನ ಸೇವನೆಯಿಂದಲೂ ತುಟಿಗಳು ಕಪ್ಪಾಗುವ ಸಾಧ್ಯತೆ ಇರುತ್ತದೆ.

ಟ್ಯಾನಿಂಗ್‌ ದೂರ ಮಾಡಲು ಟಿಪ್ಸ್

ಲಿಪ್‌ ಫೇಶಿಯಲ್ : ಡರ್ಮಟಾಲಜಿಸ್ಟ್ ಡಾ. ರೋಹಿತ್‌ ಹೀಗೆ ಹೇಳುತ್ತಾರೆ, ಜನರು ಮುಖಕ್ಕಷ್ಟೇ ಫೇಶಿಯಲ್ ಮಾಡುತ್ತಾರೆ. ಲಿಪ್ ಫೇಶಿಯಲ್‌ನಿಂದ ಟ್ಯಾನಿಂಗ್‌ ಆಗುವುದು ತಪ್ಪುತ್ತದೆ ಎಂಬುದನ್ನು ಅವರು ತಿಳಿದಿಲ್ಲ. ಅಲ್ಲದೆ ಇದರಿಂದ ತುಟಿಗಳು ಮತ್ತೂ ಆಕರ್ಷಕವಾಗುತ್ತವೆ. ಆದರೆ ಇದನ್ನು ಎಕ್ಸ್ ಪರ್ಟ್‌ನಿಂದಲೇ ಮಾಡಿಸಬೇಕು.

ಲಿಪ್‌ ಟ್ರೀಟ್‌ ಮೆಂಟ್‌ ಮತ್ತು ಲಿಪ್‌ ಮಾಸ್ಕ್  : ಲಿಪ್‌ ಟ್ಯಾನಿಂಗ್‌ನ್ನು ದೂರ ಮಾಡಲು ಈಗ ಅಂಗಡಿಗಳಲ್ಲಿ ಲಿಪ್‌ ಲೈಟ್‌ನಿಂಗ್‌ನಂತಹ ಟ್ರೀಟ್‌ಮೆಂಟ್‌ ದೊರೆಯುತ್ತದೆ ಮತ್ತು ಅದು ಜನಪ್ರಿಯ ಆಗಿದೆ. ಇದಲ್ಲದೆ ಲಿಪ್‌ ಮಾಸ್ಕ್ ಸಹ ಹೆಚ್ಚು ಪಾಪ್ಯುಲರ್‌

ಆಗುತ್ತಿದೆ.

ಇತರೆ ಉಪಾಯಗಳು

ದಾಳಿಂಬೆ : ದಾಳಿಂಬೆ ರಸದಿಂದಲೂ ಟ್ಯಾನಿಂಗ್‌ ದೂರವಾಗುತ್ತದೆ. ಇದನ್ನು ಅರಿಶಿನದ ಜೊತೆ ಸೇರಿಸಿ ತುಟಿಗಳಿಗೆ ಹಚ್ಚಿ. 15 ನಿಮಿಷಗಳ ನಂತರ ಮುಖ ತೊಳೆಯಿರಿ.

ಗುಲಾಬಿ ದಳಗಳು : ತುಟಿಗಳ ಟ್ಯಾನಿಂಗ್‌ ದೂರಗೊಳಿಸಲು ಗುಲಾಬಿ ದಳಗಳು ಬಹಳ ಪ್ರಯೋಜನಕಾರಿ. ಗುಲಾಬಿ ದಳಗಳನ್ನು ಅರೆದು ಅದಕ್ಕೆ ಕೊಂಚ ಗ್ಲಿಸರಿನ್‌ ಸೇರಿಸಿ ದಿನ ರಾತ್ರಿ ತುಟಿಗಳಿಗೆ ಸವರಿ ಬೆಳಗ್ಗೆ ಎದ್ದು ತೊಳೆಯಿರಿ.

ನಿಂಬೆ : ನಿಂಬೆರಸವನ್ನು ಬೆಳಗ್ಗೆ ಮತ್ತು ರಾತ್ರಿ ತುಟಿಗಳಿಗೆ ಉಜ್ಜಿ. 10 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಟ್ಯಾನಿಂಗ್‌ ದೂರವಾಗುತ್ತದೆ.

ಕೇಸರಿ ಮತ್ತು ಹಾಲು : ಕೇಸರಿಯೂ ತುಟಿಯ ಕಪ್ಪನ್ನು ದೂರಗೊಳಿಸುತ್ತದೆ. ಹಸಿ ಹಾಲಿಗೆ ಕೇಸರಿ ಸೇರಿಸಿ ರಾತ್ರಿ ತುಟಿಗಳಿಗೆ ಹಚ್ಚಿ ಮಲಗಿ. ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ.

ಬೀಟ್‌ರೂಟ್‌: ಬೀಟ್‌ರೂಟ್‌ ಚೂರನ್ನು ತುಟಿಗಳ ಮೇಲೆ ಉಜ್ಜಿ ಅಥವಾ ಅದರ ರಸವನ್ನು ನಿಂಬೆರಸದೊಂದಿಗೆ ಸೇರಿಸಿ ತುಟಿಗಳಿಗೆ ಹಚ್ಚಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ತುಟಿಗಳು ಗುಲಾಬಿ ಬಣ್ಣದೊಂದಿಗೆ ಹೊಳೆಯುತ್ತವೆ.

ಶುಗರ್‌ ಸ್ಕ್ರಬ್‌ : ತುಟಿಗಳ ಟ್ಯಾನಿಂಗ್‌ ದೂರಗೊಳಿಸಲು ಸಕ್ಕರೆಗೆ ಕೆಲವು ಹನಿ ಕೊಬ್ಬರಿ ಎಣ್ಣೆ ಸೇರಿಸಿ. ಬ್ರಶ್‌ನ ಸಹಾಯದಿಂದ ಹಗುರವಾಗಿ ತುಟಿಗಳಿಗೆ ಸ್ಕ್ರಬ್‌ ಮಾಡಿ.

- ವಿದ್ಯುಲ್ಲತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ