ಹೆಚ್ಚಿನ ಮಹಿಳೆಯರು ಮನೆಯಿಂದ ಹೊರಡವ ಮೊದಲು ಸಾಕಷ್ಟು ಸಮಯ ಕನ್ನಡಿಯ ಮುಂದೆ ಇರುತ್ತಾರೆ. ಮುಖಕ್ಕೆ ಬೆಲೆಬಾಳುವ ಸೌಂದರ್ಯ ಪ್ರಸಾಧನಗಳನ್ನು ಬಳಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಮೇಕಪ್‌ ಮಾಡಿಕೊಳ್ಳುವುದರಲ್ಲಿ ಮಹಿಳೆಯರು ಪ್ರಸಿದ್ಧರು. ಸ್ಕಿನ್‌ ಸ್ಟೋರ್‌ ಡಾಟ್‌ ಕಾಮ್ ಎಂಬ ಕಂಪನಿಯು 16-75 ವರ್ಷ ವಯಸ್ಸಿನ ಸುಮಾರು 3000 ಮಹಿಳೆಯರಿಗೆ ನಡೆಸಿದ ಒಂದು ಸರ್ವೆಯ ಪ್ರಕಾರ, ಮಹಿಳೆಯರು ಮನೆಯಿಂದ ಹೊರಡುವ ಮೊದಲು ಸುಮಾರು 16 ಬ್ಯೂಟಿ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ ಎಂದು ತಿಳಿದು ಬಂದಿವೆ.

ಕೇವಲ ಮೇಕಪ್‌ ಸಾಲದು

ಮೇಕಪ್‌ ಪ್ರಾಡಕ್ಟ್ಗಳನ್ನು ಅವಲಂಬಿಸಿರುವುದು ಹಣ ಮತ್ತು ಸಮಯದ ನಷ್ಟವಲ್ಲವೇ? ಮೇಕಪ್‌ ಪ್ರಾಡಕ್ಟ್ ನಿಂದ ರೂಪದಲ್ಲಿ ಪರಿವರ್ತನೆಯಾಗಿ ಆಕರ್ಷರಾಗಲು ಸಾಧ್ಯವೇ?

ಈ ವಿಷಯದ ಬಗ್ಗೆ ನಡೆಸಿದ ಒಂದು ರಿಸರ್ಚ್‌ನಿಂದ ತಿಳಿದು ಬಂದ ಅಂಶವೆಂದರೆ ಮಹಿಳೆಯರು ರೂಪವತಿಯಾಗಿ ತೋರಲು ಮೇಕಪ್‌ನ ಪಾತ್ರ ಕಿರಿದು ಎಂಬುದು. ಅವರ ನ್ಯಾಚುರಲ್ ಬ್ಯೂಟಿಯಿಂದಲೇ ಅವರು ಆಕರ್ಷಕವಾಗಿ ತೋರಲು ಸಾಧ್ಯ. ಒಳ್ಳೆಯ ರೂಪವಿಲ್ಲದ ಮಹಿಳೆಯು ಎಷ್ಟೇ ಮೇಕಪ್‌ ಮಾಡಿಕೊಂಡರೂ ಸಹ, ಸ್ವಾಭಾವಿಕವಾಗಿ ರೂಪವತಿಯಾದ ಮೇಕಪ್‌ ರಹಿತ ಮಹಿಳೆಗೆ ಸಾಟಿಯಗಲಾರಳು.

ಅಮೆರಿಕದ ನಾರ್ತ್‌ ಯೂನಿರ್ಸಿಟಿಯಲ್ಲಿ ಇದರ ಕುರಿತಾಗಿ ನಡೆಸಿದ ಅಧ್ಯಯನದಲ್ಲಿ 18-21 ವಯಸ್ಸಿನ 44 ಹುಡುಗಿಯರ ಮೇಕಪ್‌ ಸಹಿತ ಮತ್ತು ಮೇಕಪ್‌ ರಹಿತ ಫೋಟೋಗಳನ್ನು ತೆಗೆಯಲಾಗಿತ್ತು. ಈ ಫೋಟೋಗಳನ್ನು 62 ಯುವಜನರಿಗೆ ತೋರಿಸಿ ಸೌಂದರ್ಯದ ಆಧಾರದ ಮೇಲೆ ರೇಟಿಂಗ್‌ ನೀಡಲು ತಿಳಿಸಲಾಗಿತ್ತು. ಅವರಿಗೆ ಹುಡುಗಿಯರ ಮೇಕಪ್‌ ಸಹಿತದ ಅಥವಾ ಮೇಕಪ್‌ ರಹಿತದ ಯಾವುದಾದರೂ ಒಂದು ಫೋಟೋವನ್ನು ಮಾತ್ರ ತೋರಿಸಲಾಗಿತ್ತು.

ರೇಟಿಂಗ್‌ನ ವಿಶ್ಲೇಷಣೆಯಿಂದ ತಿಳಿದು ಬಂದುದೆಂದರೆ, ಮೇಕಪ್‌ನಿಂದ ಕೇವಲ 2%ವರೆಗೆ ಸೌಂದರ್ಯ ಹೆಚ್ಚಳ ಕಂಡಿತು. ಆದರೆ ನ್ಯಾಚುರಲ್ ಫೀಚರ್ಸ್ ಮತ್ತು ಪರ್ಸನಾಲಿಟಿಯಿಂದ 69% ನಷ್ಟು ಸೌಂದರ್ಯ ಉತ್ತಮವಾಗಿ ತೋರಿತು.

ನಿಜವಾದ ಸೌಂದರ್ಯ : ಸೌಂದರ್ಯ ಅನೇಕ ಅಂಶಗಳನ್ನು ಅಲಂಬಿಸಿರುತ್ತದೆ. ಹೈ ಚೀಕ್‌ ಬೋನ್ಸ್, ದೊಡ್ಡ ಕಣ್ಣುಗಳು, ತುಂಬಿದ ತುಟಿಗಳು, ಹೊಳೆಯುವ ಕೂದಲು, ಕೋಮಲ ಕಲೆರಹಿತ ಚರ್ಮ ಇವು ಮಹಿಳೆಯರನ್ನು ಆಕರ್ಷಕಗೊಳಿಸಿದರೆ, ಪುರುಷರಿಗೆ ಅಗಲವಾದ ಹಣೆ ಮತ್ತು ದವಡೆ, ಬಲವಾದ ಮೈಕಟ್ಟು, ಇವು ಆಕರ್ಷಕವಾಗಿಡುತ್ತವೆ. ಮೇಕಪ್‌, ಫೀಚರ್ಸ್ ಮತ್ತು ಬಣ್ಣವೇ ಅಲ್ಲದೆ ವ್ಯಕ್ತಿಯನ್ನು ಆಕರ್ಷಕಗೊಳಿಸಬಲ್ಲ ಅಂಶಗಳು ಇನ್ನೂ ಅನೇಕವಿವೆ.

ಸ್ಮೈಲೀ ಫೇಸ್‌ : ನಗುಮುಖದಿಂದ ನೀವು ಇತರರ ದೃಷ್ಟಿಯಲ್ಲಿ ಆಕರ್ಷಕ ಮತ್ತು ಸುಂದರವಾಗಿ ಕಾಣುವಿರಿ. ಬಲವಂತದ ನಗುವಿಗಿಂತ ಸ್ವಾಭಾವಿಕವಾದ ಮುಗುಳ್ನಗೆಯು ಮುಖಕ್ಕೆ ವಿಶೇಷವಾದ ಕಾಂತಿಯನ್ನು ನೀಡುತ್ತದೆ.

ಪರ್ಫೆಕ್ಟ್ ಫಿಗರ್‌ : ನಿಮ್ಮ ಫಿಗರ್‌ನ್ನು 36-24-36 ಅಳತೆಯಂತೆ ಮೇಂಟೇನ್‌ ಮಾಡಿದರೆ, ನೀವು ಶ್ಯಾಮಲ ವರ್ಣದವರಾಗಿರಲಿ ಅಥವಾ ಮೇಕಪ್‌ ರಹಿತವಾಗಿರಲಿ, ಆಕರ್ಷಕವಾಗಿಯೇ ಕಾಣುವಿರಿ. ಅದೇ ಸ್ಥೂಲಕಾಯದ ಮಹಿಳೆಯುವ ಎಷ್ಟೇ ಮೇಕಪ್‌

ಮಾಡಿದ್ದರೂ ಸುಂದರವಾಗಿ ಕಾಣುವುದಿಲ್ಲ.

ಸ್ಮಾರ್ಟ್‌ ಬಿಹೇವಿಯರ್‌ : ನಿಮ್ಮ ಮಾತನಾಡುವ ಶೈಲಿ, ಏಳುವ ನಡೆದಾಡುವ ರೀತಿ, ಡ್ರೆಸ್‌ ಮಾಡುವ ರೀತಿ, ಡ್ರೆಸ್‌ ಮಾಡುವ ವಿಧಾನ, ಮುಂತಾದ ವಿಷಯಗಳು ನಿಮ್ಮ ಸೌಂದರ್ಯವನ್ನು ಅಳೆಯುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ