ಸಾಮಾನ್ಯವಾಗಿ ಕೂದಲಿನ ಕುರಿತಾಗಿ ವಿಧ ವಿಧವಾದ ಮಿಥ್ಯೆಗಳು ಹರಡಿರುತ್ತವೆ. ಶ್ಯಾಂಪೂ ಬದಲಾಯಿಸುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ, ಬಿಳಿ ಕೂದಲನ್ನು ಕೀಳುವುದರಿಂದ ಅದರ ಅಕ್ಕಪಕ್ಕದ ಕೂದಲೂ ಬೆಳ್ಳಗಾಗುತ್ತದೆ.. ಇತ್ಯಾದಿ. ಆದರೆ ವಾಸ್ತವವೇ ಬೇರೆ ಇರುತ್ತದೆ. ಕೂದಲಿನ ಕುರಿತಾಗಿ ಇನ್ನಿತರ ಮಿಥ್ಯೆಗಳು ಏನೆಂದು ತಿಳಿಯೋಣ :

ಮಿಥ್ಯೆ : ಕೂದಲನ್ನು ನಿಯಮಿತಾಗಿ ಕಟ್‌ ಮಾಡಿಸುವುದರಿಂದ ಬೇಗ ಬೆಳೆಯುತ್ತದೆ.

ಸತ್ಯ : ತಜ್ಞರ ಪ್ರಕಾರ, ಪ್ರತಿ ತಿಂಗಳೂ ನಮ್ಮ ಕೂದಲು ಅರ್ಧ ಇಂಚು ಬೆಳೆಯುತ್ತದೆ. ನೀವು ಕೂದಲನ್ನು ಕತ್ತರಿಸಿ, ಬಿಡಿ.... ವ್ಯತ್ಯಾಸವೇನಿಲ್ಲ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕೂದಲು ಹೆಚ್ಚಾಗಿ ಬೆಳೆಯುತ್ತದೆ. ಕೂದಲನ್ನು ಕತ್ತರಿಸುವುದಕ್ಕೂ ಇದಕ್ಕೂ ಸಂಬಂಧವೇನಿಲ್ಲ. 2-3 ತಿಂಗಳಿಗೊಮ್ಮೆ ಕೂದಲು ಕತ್ತರಿಸಿದರೆ ಸಾಕು, ಆಗ ಸೀಳು ತುದಿ ಕೂದಲಿನ ಸಮಸ್ಯೆ ಇರುವುದಿಲ್ಲ.

ಮಿಥ್ಯೆ : ಒತ್ತಾದ, ದಟ್ಟ, ಹೊಳೆಯುವ ಕಪ್ಪು ಕೂದಲಿಗಾಗಿ ಉತ್ತಮ ವಿಧಾನದಲ್ಲಿ ಶ್ಯಾಂಪೂ ಮಾಡಬೇಕು.

ಸತ್ಯ : ಸರಿಯಾದ ವಿಧಾನದಲ್ಲಿ ತಲೆಗೆ ಶ್ಯಾಂಪೂ ಹಚ್ಚುವುದು ಅತ್ಯಗತ್ಯ. ಆದರೆ ಢಾಳಾಗಿ ಶ್ಯಾಂಪೂ ಸುರಿದು ತಿಕ್ಕುವುದರಿಂದ ಕೂದಲಿನ ಕೋಮಲತೆ ಕಠೋರವಾಗುತ್ತದೆ, ಕ್ರಮೇಣ ಶುಷ್ಕವಾಗುತ್ತದೆ.

ಮಿಥ್ಯೆ : ಶ್ಯಾಂಪೂ ಬದಲಾಯಿಸುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.

ಸತ್ಯ : ಅಗತ್ಯ ಎನಿಸಿದರೆ ನೀವು ಬಗೆ ಬಗೆಯ ಶ್ಯಾಂಪೂ ಬದಲಿಸಿ ಟ್ರೈ ಮಾಡಬಹುದು, ಉದಾ : ಡ್ಯಾಂಡ್ರಫ್‌ ತಡೆಗಟ್ಟಲು, ಕೂದಲು ಒತ್ತಾಗಿ ಬೆಳೆಯಲು..... ಆದರೆ ಇಲನ್ನೆಲ್ಲ ಹಿಂದಿನ ಶ್ಯಾಂಪೂ ಸಹ ಮಾಡುತ್ತಿತ್ತು. ನಿಯಮಿತವಾಗಿ ಅದನ್ನು ಬಳಸಬೇಕಷ್ಟೆ.

ಮಿಥ್ಯೆ : ಒಂದು ಬಿಳಿಯ ಕೂದಲನ್ನು ಕೀಳುವುದರಿಂದ ಅದರ ಸುತ್ತಮುತ್ತಲಿನ ಕೂದಲೂ ಬೆಳ್ಳಗಾಗುತ್ತದೆ.

ಸತ್ಯ : ಇದು ಆಧಾರವಿಲ್ಲದ ಮಾತು. ಬಿಳಿ ಕೂದಲನ್ನು ಕೀಳುವಿಕೆ ದುರಭ್ಯಾಸವೇ ಸರಿ. ಕೂದಲನ್ನು ಕೀಳುವುದರಿಂದ ಅದರ ಬುಡಕ್ಕೆ ಹಾನಿ ತಪ್ಪದು, ಅಲರ್ಜಿ ಸಹ ಆಗುತ್ತದೆ. ಇದರಿಂದ ಕೂದಲು ದುರ್ಬಲವಾಗುತ್ತದೆ. ಮತ್ತೆ ಆ ಭಾಗದಿಂದ ಕೂದಲು ಹುಟ್ಟುವುದಿಲ್ಲ. ಆದ್ದರಿಂದ ಕೂದಲಿನ ಆರೋಗ್ಯಕ್ಕಾಗಿ ಅದರೊಂದಿಗೆ ಸೌಮ್ಯವಾಗಿ ವರ್ತಿಸಿ.

ಮಿಥ್ಯೆ : ದಿನಕ್ಕೆ ನೂರಾರು ಸಲ ಕೂದಲು ಬಾಚುತ್ತಿರಬೇಕು.

ಸತ್ಯ : ನೀವು ದಿನಕ್ಕೆ ಎಷ್ಟು ಸಲ ಕೂದಲು ಬಾಚಿದರೂ ಹೆಚ್ಚಿನ ಲಾಭವೇನೂ ಇಲ್ಲ. ಇದರಿಂದ ಅದಕ್ಕೆ ಲಾಭ ಆಗುವುದಕ್ಕಿಂತ ಹಾನಿಯೇ ಹೆಚ್ಚು. ಬಾಚುವಿಕೆಯಿಂದ ಕೂದಲನ್ನು ಹಾರಾಡಲು ಬಿಡದೆ ಒಪ್ಪ ಓರಣವಾಗಿ ಕೂರಿಸಬಹುದಷ್ಟೆ. ಬ್ರಶ್ಶಿಂಗ್ ಮಾಡಿದಷ್ಟೂ ಕೂದಲನ್ನು ಹೊರಗೆ ಎಳೆದಂತೆ ಆಗುತ್ತದೆ. ಹೀಗಾಗಿ ಒರಟೊರಟಾಗಿ ಕೂದಲನ್ನು ಬಾಚಿದಷ್ಟೂ ಅದು ದುರ್ಬಲವಾಗುತ್ತಾ ಹೋಗುತ್ತದೆ. ನಿಮ್ಮ ಕೂದಲಲ್ಲಿ ಹೆಚ್ಚು ಸಿಕ್ಕಿದ್ದರೆ, ದೊಡ್ಡ ಹಲ್ಲಿನ ಬಾಚಣಿಗೆ ಬಳಸಲು ಮರೆಯದಿರಿ.

ಮಿಥ್ಯೆ : ಕೂದಲು ಆಯ್ಲಿ ಆಗಿದ್ದರೆ, ಕೂದಲಿಗೆ ಆದಷ್ಟೂ ಎಣ್ಣೆ ಹಚ್ಚಲೇಬಾರದು.

ಸತ್ಯ : ಇದಂತೂ ಖಂಡಿತಾ ತಪ್ಪು. ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚುವುದರಿಂದ ಶುಷ್ಕ ಕೂದಲಿಗೆ ಪೋಷಣೆ ದೂರಕುತ್ತದೆ. ಈ ಎಣ್ಣೆ ಅಂಶ ಕೂದಲಿನ ಬುಡಭಾಗದ ಸ್ಕಾಲ್ಪ್ ನ ಮೇಲ್ಪದರದಲ್ಲಿ ಸುಲಭನಾಗಿ ವಿಲೀನಗೊಳ್ಳುತ್ತದೆ. ಆಗ ಅದು ಬುಡಭಾಗದಿಂದ ತುದಿಯವರೆಗೂ ಕೂದಲಿಗೆ ಪೋಷಣೆ ಒದಗಿಸುತ್ತದೆ. ಕೂದಲಿಗೆ ಎಣ್ಣೆ ಹಚ್ಚುವಾಗ ಚೆನ್ನಾಗಿ ಮಸಾಜ್‌ಮಾಡಿ. ಇದರಿಂದ ಕೂದಲಿನ ವಾಲ್ಯೂಂ ಹೆಚ್ಚುತ್ತದೆ, ಕೋಮಲತೆ ಕೂಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ