ಬಿಳಿಯ ಬಣ್ಣ, ನಯವಾದ ಚರ್ಮದ ಬಯಕೆ ಪ್ರತಿಯೊಬ್ಬ ಮಹಿಳೆಗೂ ಇರುತ್ತದೆ. ಬ್ಲೀಚಿಂಗ್‌ ಮಾಡಿಸಿಕೊಳ್ಳುವುದರ ಮೂಲಕ ಇದನ್ನು ಪಡೆಯಬಹುದು. ಬ್ಲೀಚಿಂಗ್‌ನಿಂದ ಫೇಶಿಯಲ್ ಹೇರ್‌ನ ಬಣ್ಣ ತಿಳಿಯಾಗುವುದರಿಂದ ಅದು ಎದ್ದು ಕಾಣುವುದಿಲ್ಲ ಹಾಗೂ ಚರ್ಮ ಬೆಳ್ಳಗೆ ಮತ್ತು ಸುಂದರವಾಗಿ ತೋರುತ್ತದೆ. ಈಗ ಅಂಗಡಿಗಳಲ್ಲಿ ಅನೇಕ ಬಗೆಯ ಬ್ಲೀಚ್‌ ದೊರೆಯುತ್ತದೆ. ಬ್ಲೀಚ್‌ನ್ನು ಬಳಸುವ ಮೊದಲು ಕೆಲವು ಮುಖ್ಯ ವಿಷಯಗಳನ್ನು ತಿಳಿಯಿರಿ :

ಪ್ರೋಟೀನ್‌ ಹೈಡ್ರಾ ಬ್ಲೀಚ್‌

ಇದು ಫ್ರೆಕ್ಸ್‌, ಏಜಿಂಗ್‌, ಡಾರ್ಕ್‌ ಸ್ಪಾಟ್ಸ್, ಪಿಗ್ಮೆಂಟೇಶನ್‌, ಅನ್‌ಈವೆನ್‌ ಸ್ಕಿನ್‌ ಟೋನ್‌ನಂತಹ ಸಮಸ್ಯೆಗಳಿಗೆ  ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ಫೇಶಿಯಲ್ ಹೇರ್‌ನ್ನೇ ಲೈಟ್‌ ಟೋನ್‌ ಮಾಡುವುದಲ್ಲದೆ, ಪಿಗ್ಮೆಂಟೇಶನ್‌ನ ಸಮಸ್ಯೆಯನ್ನೂ ದೂರಗೊಳಿಸುತ್ತದೆ. ಇದು ಚರ್ಮವನ್ನು ಡೀಪ್‌ ಕ್ಲೀನ್‌ ಮಾಡುವುದರ ಜೊತೆಗೆ ಚರ್ಮದ ರಂಧ್ರಗಳನ್ನೂ ರಿಫೈನ್‌ಮಾಡುತ್ತದೆ. ಸನ್‌ ಟ್ಯಾನ್‌ನ್ನು ನಿವಾರಿಸಲು ಇದು ಉತ್ತಮ ವಿಧಾನ. ಇದು ಎಲ್ಲ ಬಗೆಯ ಸ್ಕಿನ್‌ ಟೋನ್‌ಗೆ ಅನುಸಾರವಾಗಿ ಕೆಲಸ ಮಾಡುತ್ತದೆ. ಸೆನ್ಸಿಟಿವ್ ‌ಸ್ಕಿನ್‌ಗೆ ಸಹ ಇದರಿಂದ ಕೆಂಪು ಅಥವಾ ಉರಿ ಉಂಟಾಗುವುದಿಲ್ಲ. ಪ್ರೋಟೀನ್‌ ಹೈಡ್ರಾ ಬ್ಲೀಚ್‌ನ್ನು ಒಳ್ಳೆಯ ಸೆಲೂನ್‌ನಲ್ಲಿ ಅನುಭವಿಗಳ ಕೈಯಿಂದಲೇ ಮಾಡಿಸಿಕೊಳ್ಳಿ.

ಎಕ್ಸ್ ಟ್ರಾ ಆಯಿಲ್ ಕಂಟ್ರೋಲ್

ವಿಶೇಷವಾಗಿ ಎಕ್ಸ್ ಟ್ರಾ ಆಯ್ಲಿ ಸ್ಕಿನ್‌ಗೆ ಈ ಬ್ಲೀಚ್‌ ಅತ್ಯಂತ ಉಪಯುಕ್ತವಾಗಿರುತ್ತದೆ. ಇದರಿಂದ ಚರ್ಮದಲ್ಲಿ ಮೆಲನಿನ್‌ಪಿಗ್ಮೆಂಟ್ಸ್ ಕಡಿಮೆಯಾಗುತ್ತವೆ. ಅವು ಕಡಿಮೆಯಾದಷ್ಟೂ ಚರ್ಮ ಅಷ್ಟೇ ಫೇರ್‌ ಆಗಿ ಗೋಚರಿಸುತ್ತದೆ. ಈ ಬ್ಲೀಚ್‌ ಚರ್ಮದ ಎಕ್ಸ್ ಟ್ರಾ ಆಯಿಲ್‌ನ್ನು ಮಿತಗೊಳಿಸುವುದಲ್ಲದೆ, ಮೃತಕೋಶಗಳನ್ನೂ ದೂರ ಮಾಡುತ್ತದೆ.

ಹೈಡ್ರೇಟಿಂಗ್‌ ಬ್ಲೀಚ್‌

ಶುಷ್ಕ ಚರ್ಮಕ್ಕೆ ಇದು ಅತ್ಯುತ್ತಮವಾದ ಬ್ಲೀಚ್‌. ಇದು ಚರ್ಮದಾಳಕ್ಕೆ ಇಳಿದು ಮಾಯಿಶ್ಚರ್‌ ಒದಗಿಸುತ್ತದೆ. ಆದ್ದರಿಂದ ಚರ್ಮಕ್ಕೆ ಫೇರ್‌ನೆಸ್‌ ದೊರೆತು ಮೃದುವಾಗಿಯೂ, ಆರೋಗ್ಯಕರವಾಗಿಯೂ ಇರುತ್ತದೆ.

ಬ್ಲೀಚ್‌ನ ವಿವಿಧ ಬಗೆಗಳು

ಪೌಡರ್‌ ಬ್ಲೀಚ್‌ : ಇದು ಅಮೋನಿಯ, ಹೈಡ್ರೋಜನ್‌ ಪೆರಾಕ್ಸೈಡ್‌ ಮತ್ತು ಬ್ಲೀಚ್‌ ಪೌಡರ್‌ನ ಮಿಶ್ರಣವಾಗಿದೆ. ಡಾರ್ಕ್‌ ಸ್ಪಾಟ್ಸ್ ಮತ್ತು ಸುಕ್ಕುಗಳ ನಿವಾರಣೆಗೆ ಇದು ಉತ್ತಮ ಸಾಧನವಾಗಿದೆ. ಅನುಭವಿಗಳಿಂದಲೇ ಇದನ್ನು ಮಾಡಿಸಿಕೊಳ್ಳಿ. ಏಕೆಂದರೆ ಸರಿಯಾದ ಪ್ರಮಾಣವಿಲ್ಲದಿದ್ದರೆ ಇದರಿಂದ ಚರ್ಮಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.

ಕ್ರೀಮ್ ಬ್ಲೀಚ್‌ : ಅತಿ ಹೆಚ್ಚು ಬಳಕೆಯಲ್ಲಿರುವ ಬ್ಲೀಚ್‌ ಇದಾಗಿದ್ದು, ಉಪಯೋಗಿಸಲೂ ಸುಲಭವಾಗಿರುತ್ತದೆ. ಇದು ಕ್ರೀಮ್ ಬ್ಲೀಚ್‌ಮತ್ತು ಆ್ಯಕ್ಟಿವೇಟರ್‌ನ ಮಿಶ್ರಣವಾಗಿದೆ.

ವಿಧಾನ : ಈ ಮಿಶ್ರಣವನ್ನು ತಯಾರಿಸಲು 4 ಭಾಗ ಕ್ರೀಮ್ ಬ್ಲೀಚ್‌ಗೆ 1 ಭಾಗ ಆ್ಯಕ್ಟಿವೇಟರ್‌ನ್ನು ಹಾಕಿ ಗಂಟಿಲ್ಲದಂತೆ ಸ್ಪಾಟುಲಾದಿಂದ ಚೆನ್ನಾಗಿ ಮಿಶ್ರ ಮಾಡಿ. ಆ್ಯಕ್ಟಿವೇಟರ್‌ನ ಪ್ರಮಾಣ ಹೆಚ್ಚಾದರೆ, ಅತಿಯಾದ ಪಿಗ್ಮೆಂಟೇಶನ್‌

ಸಮಸ್ಯೆ ಮತ್ತು ಸ್ಕಿನ್‌ ಬರ್ನ್‌ ಉಂಟಾಗಬಹುದು.

ಪ್ಯಾಚ್‌ ಟೆಸ್ಟ್ : ಮೊದಲ ಬಾರಿ ಬ್ಲೀಚ್‌ ಬಳಸುತ್ತಿದ್ದರೆ, ಬ್ಲೀಚ್‌ ಮಾಡುವ ಮೊದಲು ಪ್ಯಾಚ್‌ ಟೆಸ್ಟ್ ಮಾಡಬೇಕು. ಇದಕ್ಕಾಗಿ ಕೊಂಚ ಮಿಶ್ರಣವನ್ನು ತೋಳಿನ ಮೇಲೆ ಹಚ್ಚಿಕೊಳ್ಳಿ. ಚರ್ಮ ಕೆಂಪಾದರೆ ಅಥವಾ ಉರಿಯಾದರೆ ಅದನ್ನು ಬಳಸಬೇಡಿ.

ಬ್ಲೀಚ್‌ ಮಾಡುವ ಮೊದಲು

ಬ್ಲೀಚ್‌ ಮಾಡುವ ಮೊದಲು ಸೌಮ್ಯವಾದ ಫೇಸ್‌ ವಾಶ್‌ ಬಳಸಿ ತಣ್ಣೀರಿನಿಂದ ಮುಖ ತೊಳೆಯಿರಿ. ಬ್ಲೀಚ್‌ಗೆ ಮೊದಲು ಮತ್ತು ನಂತರ ಬಿಸಿನೀರು ಮತ್ತು ಸ್ಕ್ರಬ್‌ ಬಳಸಬಾರದೆಂಬುದನ್ನು ನೆನಪಿಡಿ. ನಂತರ ಕಣ್ಣು, ತುಟಿ ಮತ್ತು ಐ ಬ್ರೋಸ್‌ ಬಿಟ್ಟು ಪೇಸ್ಟ್ ನ್ನು ಮುಖಕ್ಕೆ ಮೇಲಿನಿಂದ ಕೆಳಗಿನವರೆಗೆ ಹಚ್ಚಿರಿ. 10-15 ನಿಮಿಷಗಳ ನಂತರ ಹತ್ತಿಯಿಂದ ಸ್ವಚ್ಛಗೊಳಿಸಿ. ನಂತರ ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ