ಬೆವರು ಮತ್ತು ತೈಲ ಸ್ರಾವದಿಂದಾಗಿ ಆಯ್ಲೀ ಸ್ಕಿನ್‌ ಮತ್ತಷ್ಟು ತೈಲಯುಕ್ತ, ನಿಸ್ತೇಜ ಆಗಿ ತೋರುತ್ತದೆ. ಹವೆಯಲ್ಲಿ ಬಿಸಿ ಮತ್ತು ಆರ್ದ್ರತೆ ಕೂಡಿದಾಗ ಕೆಂಪು ಕಲೆ ಗುಳ್ಳೆ ಮೊದಲಾದ ಸಮಸ್ಯೆಗಳು ತಲೆದೋರುತ್ತವೆ ಮತ್ತು ಚರ್ಮದಲ್ಲಿ ಕೊಳೆಯೂ ಸೇರಿಕೊಳ್ಳುತ್ತದೆ.

ತಾಜಾ ತ್ವಚೆಗಾಗಿ

ಬೆವರು ಮತ್ತು ತೈಲವನ್ನು ದೂರಗೊಳಿಸಲು ಮಾನ್‌ಸೂನ್‌ನಲ್ಲಿ ಚರ್ಮವನ್ನು ಸ್ವಚ್ಛವಾಗಿರಿಸಬೇಕು. ಸ್ಕ್ರಬಿಂಗ್‌ನಿಂದ ರೋಮ ರಂಧ್ರಗಳು ಸಂಪೂರ್ಣ ಸ್ವಚ್ಛವಾಗುತ್ತವೆ ಮತ್ತು ಮೊಡವೆಗಳು ಇಲ್ಲವಾಗುತ್ತವೆ. ಟೋನಿಂಗ್‌ ಸಹ ಇದೇ ರೀತಿಯಲ್ಲಿ ಉಪಯೋಗಿ ಎನಿಸುತ್ತದೆ.

ನೀವು ಮನೆಯಲ್ಲಿಯೇ ಫೇಶಿಯಲ್ ಸ್ಕ್ರಬ್‌ ತಯಾರಿಸಕೊಳ್ಳಬಹುದು. ಇದಕ್ಕಾಗಿ ಮೊಸರಿಗೆ ಅಕ್ಕಿಹಿಟ್ಟು ಅಥವಾ ಅರೆದ ಬಾದಾಮಿ ಮಿಶ್ರ ಮಾಡಿ. ಬೇಕಾದರೆ ಒಣಗಿಸಿ ಪುಡಿ ಮಾಡಿದ ನಿಂಬೆ ಅಥವಾ ಕಿತ್ತಳೆ ಸಿಪ್ಪೆಯನ್ನೂ ಸೇರಿಸಬಹುದು. ಇದನ್ನು ಮುಖಕ್ಕೆ ಹಚ್ಚಿ, ನಿಧಾನವಾಗಿ ಗುಂಡಾಗಿ ಉಜ್ಜಿ. ನಂತರ ನೀರಿನಿಂದ ತೊಳೆಯಿರಿ.

ಸೆನ್ಸಿಟಿವ್ ‌ಅಥವಾ ಮೊಡವೆಯಿಂದ ಕೂಡಿದ ಚರ್ಮಕ್ಕೆ ಸ್ಕ್ರಬಿಂಗ್‌ ಮಾಡಬೇಡಿ. ಮೊಡವೆಗಳನ್ನು ದೂರ ಮಾಡಲು ಓಟ್ಸ್ ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಮಿಶ್ರಣ ಮಾಡಿ ವಾರಕ್ಕೆರಡು ಬಾರಿ ಹಚ್ಚಿರಿ.

ಈ ಕಾಲದಲ್ಲಿ ಹೂಗಳಿಂದ ತಯಾರಿಸಿದ ಯಾವುದಾದರೂ ಚರ್ಮದ ಟಾನಿಕ್‌ ಅಥವಾ ಫ್ರೆಶ್‌ನರ್‌ ಉಪಯುಕ್ತವಾಗಿರುತ್ತದೆ. ಗುಲಾಬಿ ಜಲ ಒಂದು ನೈಸರ್ಗಿಕ ಟೋನರ್‌ ಆಗಿದೆ. ಫ್ರಿಜ್‌ನಲ್ಲಿರಿಸಿದ ರೋಸ್‌ ವಾಟರ್‌ ಅಥವಾ ಸ್ಕಿನ್‌ ಟಾನಿಕ್‌ನಿಂದ ಹತ್ತಿಯ ಸಹಾಯದಿಂದ  ಮುಖ ಸ್ವಚ್ಛಗೊಳಿಸಿ. ವೆಟ್‌ ಟಿಶ್ಶೂನಿಂದ ಮುಖವನ್ನು ಒರೆಸಿ ಕಾಂಪ್ಯಾಕ್ಟ್ ಪೌಡರ್‌ ಹಚ್ಚಿ. ಇದರಿಂದ ತ್ವಚೆಯಲ್ಲಿ ತಾಜಾತನ ಉಂಟಾಗುತ್ತದೆ.

ಮುಖದ ಮೇಲೆ ಕೆಂಪು ಕಲೆ, ಮೊಡವೆ ಅಥವಾ ಗುಳ್ಳೆಗಳಾಗಿದ್ದರೆ ದಿನಕ್ಕೆರಡು ಸಲ ಮೆಡಿಕೇಟೆಡ್‌ ಸೋಪ್‌ ಅಥವಾ ಕ್ಲೆನ್ಸರ್‌ನಿಂದ ಮುಖ ತೊಳೆಯಿರಿ. ಒಂದು ಆ್ಯಂಟಿಸೆಪ್ಟಿಕ್‌ ಲೋಶನ್‌ ಮತ್ತು ರೋಸ್‌ವಾಟರ್‌ನ ಸಮಪ್ರಮಾಣದ ಮಿಶ್ರಣದಿಂದ ದಿನಕ್ಕೆ 4-5 ಸಲ ಮುಖವನ್ನು ಸ್ವಚ್ಛಗೊಳಿಸಿ. ಗುಳ್ಳೆಗಳ ಮೇಲೆ ಚಂದನದ ಪೇಸ್ಟ್ ಹಚ್ಚಿರಿ.

ಮಳೆಗಾಲದಲ್ಲಿ ಆಗಾಗ ಮುಖವನ್ನು ನೀರಿನಿಂದ ತೊಳೆಯುತ್ತಿರಿ. ದಿನವೆಲ್ಲ ಚರ್ಮದ ಮೇಲೆ ಕೊಳೆ ಸೇರುವುದರಿಂದ ರಾತ್ರಿ ಅದನ್ನು ಸ್ವಚ್ಛಗೊಳಿಸಿ. ಮಾನ್‌ಸೂನ್‌ನಲ್ಲಿ ಶರೀರದ ನೀರಿನಂಶ ಬೆವರಿನ ರೂಪದಲ್ಲಿ ಹೊರಗೆ ಹೋಗುತ್ತದೆ, ಆದ್ದರಿಂದ ಆದಷ್ಟು ಹೆಚ್ಚು ನೀರು ಕುಡಿಯಿರಿ.

ಬಿಸಿ ಟೀಗೆ ಬದಲಾಗಿ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿದ ಐಸ್‌ ಟೀ ಕುಡಿಯಿರಿ.

ನಿಮ್ಮ ಚರ್ಮ ಸಾಮಾನ್ಯವಾದದ್ದಾಗಲೀ ಅಥವಾ ಆಯ್ಲೀ ಆಗಿರಲಿ, ಬೇವು ಮತ್ತು ತುಳಸಿಯ ಅಂಶದಿಂದ ಕೂಡಿದ ಫೇಸ್‌ವಾಶ್‌ನ್ನು ಬಳಸಿ.

ಆಯ್ಲಿ ಸ್ಕಿನ್

ತ್ವಚೆಯು ತೈಲಯುಕ್ತವಾಗಿದ್ದರೆ ಮೊಡವೆ, ಗುಳ್ಳೆ ಮತ್ತು ಕೆಂಪು ಕಲೆಗಳ ಸಮಸ್ಯೆ ಉಂಟಾಗುತ್ತದೆ.

ಚರ್ಮದ ಸ್ವಚ್ಚತೆ : ಕಡೆಲಹಿಟ್ಟು ಮತ್ತು ಮೊಸರು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ಮುಖ ತೊಳೆಯಿರಿ. ಒಣ ಪುದೀನಾ ಎಲೆಗಳ ಪುಡಿಯನ್ನೂ ಈ ಪೇಸ್ಟ್ಗೆ ಸೇರಿಸಬಹುದು.

ಟೋನರ್‌ : ರೋಸ್‌ ವಾಟರ್‌ ಮತ್ತು ಸೋರೆಕಾಯಿ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ