ಮಾನ್‌ಸೂನ್‌ನೊಂದಿಗೆ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಅವುಗಳಲ್ಲಿ ಹೆಚ್ಚು ತ್ರಾಸದಾಯಕವೆಂದರೆ ಬೆವರು. ಇದು ಕೆಲವು ಸಲ ಮೊಡವೆಗಳಿಗೆ ಕಾರಣವಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿಯಿರಿ.

ಮುಖದ ಮೇಲೆ ಬೆವರು ಬಂದಾಗ ಧೂಳಿನ ಕಣಗಳು ಮುಖದ ಮೇಲೆ ಅಂಟಿಕೊಳ್ಳುತ್ತವೆ ಮತ್ತು ಚರ್ಮರಂಧ್ರಗಳನ್ನು  ಮುಚ್ಚಿಬಿಡುತ್ತವೆ. ಇದರಿಂದ ಬೆವರುಸಾಲೆ ಉಂಟಾಗುತ್ತದೆ. ಕೆಲವು ಮಹಿಳೆಯರ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ. ಅಂಥವರಿಗೆ ಬೆವರಿನಿಂದ ಕೆರೆತ ಮತ್ತು ರಾಶಸ್‌ನಂತಹ ಸಮಸ್ಯೆ ಉಂಟಾಗುತ್ತದೆ.

ಆಯಿಲ್ ಸ್ಕಾಲ್ಪ್ ಸಹ ಮೊಡವೆಗಳಿಗೆ ಒಂದು ಮುಖ್ಯ ಕಾರಣವಾಗುತ್ತದೆ. ಬೆವರಿನಿಂದಾಗಿ ಇಂತಹ ಚರ್ಮದಲ್ಲಿ ಪಿಂಪಲ್ಸ್ ಉತ್ಪನ್ನವಾಗುತ್ತವೆ.

ಮುಖದ ಅಂದಕ್ಕಾಗಿ ಅನೇಕ ಮಹಿಳೆಯರು ಪೌಡರ್‌ ಹಚ್ಚಿಕೊಳ್ಳುತ್ತಾರೆ. ನೀವು ಈ ರೀತಿ ಮಾಡುವವರಾದರೆ ಎಚ್ಚರದಿಂದಿರಿ. ಏಕೆಂದರೆ ಪೌಡರ್‌ನ ಹೆಚ್ಚಿನ ಬಳಕೆಯಿಂದ ರೋಮರಂಧ್ರಗಳು ಬ್ಲಾಕ್‌ ಆಗಿ ಮೊಡವೆಯ ಸಮಸ್ಯೆ ಹೆಚ್ಚುತ್ತದೆ.

ಉಪಾಯ

ಈ ಕಾಲದಲ್ಲಿ ಸಾಧ್ಯವಾದಷ್ಟು ಕಡಿಮೆ ಮೇಕಪ್‌ಮಾಡಿ ಮತ್ತು ಮಲಗುವ ಮೊದಲು ಮರೆಯದೆ ಅದನ್ನು ಸ್ವಚ್ಛಗೊಳಿಸಿ.

ಆಯಿಲ್‌ ಮೇಕಪ್‌ ಪ್ರಾಡಕ್ಟ್ ಬಳಸಬೇಡಿ.

ಕ್ಲೇ ಮಾಸ್ಕ್ ಬಳಸಿ. ಇದು ಬೆವರನ್ನು ಕಡಿಮೆ ಮಾಡುತ್ತದೆ.

ದಿನ 2 ಹನಿ ನಿಂಬೆರಸವನ್ನು ನೀರಿಗೆ ಬೆರೆಸಿ ಮುಖಕ್ಕೆ ಹಚ್ಚಿರಿ. 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಬೆವರಿನಿಂದಾಗಿ ಮುಖದ ಮೇಲೆ ಸೇರಿರುವ ತೈಲಾಂಶ ಸ್ವಚ್ಛವಾಗುತ್ತದೆ ಮತ್ತು ಮೊಡವೆಗಳು ಇದ್ದರೆ ಅವು ಸ್ವಚ್ಛವಾಗುತ್ತವೆ.

ಮಸ್ಟರ್ಡ್‌ ಪೌಡರ್‌ಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿರಿ ಮತ್ತು 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದಲೂ ಬೆವರು ಕಡಿಮೆಯಾಗಿ ಪಿಂಪಲ್ಸ್ ಸಮಸ್ಯೆ ದೂರವಾಗುತ್ತದೆ.

ಮಂಜುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ 12 ನಿಮಿಷಗಳ ಕಾಲ ಮುಖದ ಮೇಲೆ ಉಜ್ಜಿರಿ. ಇದೂ ಸಹ ಹೆಚ್ಚಿನ ತೈಲಾಂಶ ಮತ್ತು ಮೊವೆಗಳನ್ನು ದೂರಗೊಳಿಸುತ್ತದೆ.

ಈ ಸಮಸ್ಯೆಯ ಬಗ್ಗೆ ಡರ್ಮಟಾಲಜಿಸ್ಟ್ ಡಾ. ವಿವೇಕ್‌ ಹೀಗೆ ಹೇಳುತ್ತಾರೆ, ಹೀಗೆ ಮಾಡುವಾಗ ಯಾವ ಪ್ರಾಡಕ್ಟನ್ನೇ ಆಗಲಿ, ಕಣ್ಣಿನ ಸುತ್ತಮುತ್ತ ಪ್ರಯೋಗಿಸಬೇಡಿ ಮತ್ತು 2 ನಿಮಿಷಗಳಿಗಿಂತ ಹೆಚ್ಚಾಗಿ ಮಾಡಬೇಡಿ. ಮುಖ್ಯವಾದ ಸೂಚನೆ ಎಂದರೆ ಮಂಜುಗಡ್ಡೆಯನ್ನು ಎಂದೂ ನೇರವಾಗಿ ಚರ್ಮದ ಮೇಲೆ ಅಪ್ಲೈ ಮಾಡಬೇಡಿ. ಇಲ್ಲವಾದರೆ ಪ್ರಯೋಜನಕ್ಕಿಂತ ಮಿಗಿಲಾಗಿ ಹಾನಿಯುಂಟಾಗುತ್ತದೆ.

- ಕೆ. ಪಲ್ಲವಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ