ಬನ್ನಿ, ಸ್ಟ್ರೇಟ್‌ನರ್‌ ಕೂದಲಿಗೆ ಹೇಗೆ ಹಾನಿ ಮಾಡಬಲ್ಲದು ಎಂಬುದನ್ನು ತಿಳಿಯೋಣ :

ಸ್ಟ್ರೇಟ್‌ನಿಂಗ್‌ ಮಾಡುವುದರಿಂದ ಕೂದಲಿನಿಂದ ರಿಲೀಸ್‌ ಆಗುವ ಕೆಮಿಕಲ್ಸ್ ಅದಕ್ಕೆ ಖಂಡಿತಾ ಹಾನಿ ಉಂಟು ಮಾಡಬಲ್ಲದು. ಡ್ಯಾಮೇಜ್‌ವರೆಗೂ! ಅಷ್ಟು ಮಾತ್ರವಲ್ಲ, ಇದರಿಂದ ಆಗುವ ಬೇರೆ ಹಾನಿಗಳೆಂದರೆ

ಡ್ರೈ ಹೇರ್‌ : ಸ್ಟ್ರೇಟ್‌ನಿಂಗ್‌ ನಿಂದ ಕೂದಲು ಬಹಳಷ್ಟು ಡ್ರೈ ಆಗಿಬಿಡುತ್ತದೆ. ಅಸಲಿಗೆ, ಸ್ಟ್ರೇಟ್‌ನರ್‌ ಬಳಕೆಯಿಂದ ಕೂದಲಿನ ನೈಸರ್ಗಿಕ ತೈಲಾಂಶ ಹಿಂಗಿಹೋಗುತ್ತದೆ. ಅದರಿಂದ ಕೂದಲು ದುರ್ಬಲ, ನಿರ್ಜೀವವಾಗಿ ತೋರುತ್ತದೆ. ನೀವು ಇಂಥ ಡ್ರೈ ಕೂದಲಿನ ಮೇಲೆ ಸತತ ಹೀಟ್‌ ಬಳಸುತ್ತಲೇ ಇದ್ದರೆ, ಡ್ರೈನೆಸ್‌ ಜೊತೆ ನಿಮಗೆ ಕೂದಲುದುರುವಿಕೆ ಸಮಸ್ಯೆಯೂ ಕಾಡುತ್ತದೆ. ಹೀಗಾಗಿ ಸ್ಟ್ರೇಟ್‌ನರ್‌ನ ಸತತ ಬಳಕೆ ಸರಿಯಲ್ಲ.

ಕೂದಲಿನಲ್ಲಿ ಫ್ರಿಂಜಿನೆಸ್‌ : ಕೂದಲಿಗೆ ಹೆಚ್ಚು ಸ್ಟ್ರೇಟ್‌ನಿಂಗ್‌ ಮಾಡಿಸಿದಷ್ಟೂ ಅದು ಜಾಸ್ತಿ ಹರಡಿಕೊಂಡು, ಸಿಕ್ಕಾಗುತ್ತದೆ. ಸ್ಟ್ರೇಟ್‌ನಿಂಗ್‌ ನಂತರ ಹೆಂಗಸರು ಹೇರ್‌ ವಾಶ್‌ ಮಾಡುವಾಗ ನೇರ ಶ್ಯಾಂಪೂ ಬಳಸುತ್ತಾರೆ, ಆದರೆ ಹಾಗೆ ಮಾಡಬಾರದು. ಹೇರ್‌ ಸ್ಟೈಲ್ ‌ಮಾಡಿಕೊಳ್ಳುವಾಗ  ಹೀಟ್‌ ಯಾ ಕೆಮಿಕಲ್ಸ್ ಬಳಕೆ ಮಾಡುವುದಾದರೆ, ಹೇರ್‌ ವಾಶ್‌ಗೆ ಮೊದಲು ತುಸು ಬೆಚ್ಚಗಿನ ಆಯಿಲ್ ಮಸಾಜ್‌ ಅತ್ಯಗತ್ಯ. ಅದಾದ ಮೇಲೆ 15 ನಿಮಿಷ ಸ್ಟೀಮರ್‌ ಬಳಸಬೇಕು. ಒಂದು ಪಕ್ಷ ಸ್ಟೀಮರ್‌ ಇಲ್ಲದಿದ್ದರೆ ಹಾಟ್‌ ಟವೆಲ್‌ನ್ನೇ ಬಳಸಿಕೊಳ್ಳಿ. ಇದು ಕೂದಲು ಡ್ಯಾಮೇಜ್‌ ಆಗುವುದನ್ನು ತಡೆಯುತ್ತದೆ.

ಕೂದಲು ಉದುರುವಿಕೆ : ತಲೆಗೂದಲಿಗೆ ಹೀಟ್‌ ಕೆಮಿಕಲ್ಸ್ ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆಯಾದರೆ, ಅದರಲ್ಲಿ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಇವೆಲ್ಲವುಗಳಲ್ಲಿ ಅತಿ ದೊಡ್ಡ ಸಮಸ್ಯೆ ಎಂದರೆ ಕೂದಲು ಮುರಿದು ಉದುರುವಿಕೆ. ಎಷ್ಟೋ ಸಲ ಕೂದಲು ಎಷ್ಟು ಹಾಳಾಗುತ್ತದೆಂದರೆ, ಬೇರು ಸಮೇತ ಹೋಗಿಬಿಡುತ್ತದೆ. ಹೀಗಾದಾಗ ಕೆಮಿಕಲ್ಸ್ ಹೀಟಿಂಗ್‌ ಉಪಕರಣಗಳಾದ ಹೇರ್‌ ಸ್ಪ್ರೇ, ಹೇರ್‌ ಜೆಲ್‌, ಸ್ಟ್ರೇಟ್‌ನರ್‌, ಡ್ರೈಯರ್‌ ಇತ್ಯಾದಿ ಬಳಸಲೇಬಾರದು. ಹೇರ್‌ ಫಾಲ್ ಹೆಚ್ಚಾಗಿದ್ದರೆ, ಹೆಚ್ಚು ಸಂದುವುಳ್ಳ ಬಾಚಣಿಗೆ ಮಾತ್ರ ಬಳಸಬೇಕು.

ಕೂದಲಿನ ಹೊಳಪು ಮಾಸತೊಡಗಿದರೆ : ಯಾವ ಹೆಂಗಸಿಗೇ ಇರಲಿ, ಸುಂದರ ಕೂದಲು ಇದ್ದರೆ ಅವಳ ಸೌಂದರ್ಯ ಇಮ್ಮಡಿಸುತ್ತದೆ. ಆದರೆ ಕೂದಲು ತುಂಬಾ ಡ್ರೈ ಆಗಿ, ನಿರ್ಜೀವವಾದರೆ ಇದರಿಂದ ಮುಖದ ಕಳೆಯೇ ಕೆಟ್ಟು ಹೋಗುತ್ತದೆ. ಹೆಚ್ಚು ಹೀಟ್‌ ಬಳಸುವ ಕಾರಣ ಕ್ರಮೇಣವಾಗಿ ಕೂದಲಿನ ಮಾಯಿಶ್ಚರ್‌ ಕಡಿಮೆ ಆಗಿಬಿಡುತ್ತದೆ. ಈ ಕಾರಣ ಕೂದಲಿನ ಹೊಳಪು, ಸೌಂದರ್ಯ ತಂತಾನೇ ಕುಗ್ಗುತ್ತದೆ. ಅದರ ಹೊಳಪು ಹೆಚ್ಚಿಸಲು ಪ್ರತಿ ವಾರ ಹೇರ್‌ ಸ್ಪಾ ಮಾಡಿಸಿ, ಶ್ಯಾಂಪೂ ನಂತರ ಅಗತ್ಯ ಹೇರ್‌ ಮಾಸ್ಕ್ ಬಳಸಿರಿ.

ತಲೆ ಕಡಿತದ ಸಮಸ್ಯೆ : ಸ್ಟ್ರೇಟ್‌ ನಿಂಗ್‌ನ ಮತ್ತೊಂದು ನಕಾರಾತ್ಮಕ ಪರಿಣಾಮ ಎಂದರೆ, ತಲೆಯ ಸ್ಕಾಲ್ಪ್ ಮೇಲೂ ಹಾನಿ ಆಗುತ್ತದೆ. ಸ್ಟ್ರೇಟ್‌ ನಿಂಗ್‌ ಕಾರಣ ಸ್ಕಾಲ್ಪ್ ಕ್ರಮೇಣ ಡ್ರೈ ಆಗಲು ಶುರುವಾಗುತ್ತದೆ. ಈ ಕಾರಣ ತಲೆಯಲ್ಲಿ ನವೆ, ಕಡಿತ ಹೆಚ್ಚುತ್ತದೆ. ಇದಕ್ಕಾಗಿ ವಾರಕ್ಕೆ ಅಗತ್ಯ 2-3 ಸಲ ತಲೆ ಸ್ನಾನ ಮಾಡಬೇಕು. ಅದು ಸಹಜವಾಗಿ ಒಣಗಬೇಕು. ಖಂಡಿತಾ ಡ್ರೈಯರ್ ಬಳಸಬೇಡಿ. ನಿಮಗೆ ಸ್ಟ್ರೇಟ್‌ ಹೇರ್‌ ಅತ್ಯಧಿಕ ಇಷ್ಟವೆಂದರೆ, ಹೀಟ್‌ ಇಲ್ಲದೆ ಸಹ ಸ್ಟ್ರೇಟ್‌ ಹೇರ್‌ನ್ನು ಸುಲಭವಾಗಿ ಪಡೆಯಬಹುದು. ಹೀಟ್‌ ಇಲ್ಲದೆ ನ್ಯಾಚುರಲ್ ಆಗಿ ಸ್ಟ್ರೇಟ್‌ ಹೇರ್‌ ಪಡೆಯುವುದು ಹೇಗೆ ಎಂದು ತಿಳಿಯೋಣ ಬನ್ನಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ