ಮನೆ ಹಾಗೂ ಆಫೀಸಿನ ಕೆಲಸದ ಹೊರೆ, ಗಂಡ ಹಾಗೂ ಮಕ್ಕಳ ಜವಾಬ್ದಾರಿಗಳನ್ನು ಹೊತ್ತ ಮಹಿಳೆಯರು ತಮ್ಮ ಕನಸುಗಳು, ಬಯಕೆಗಳು, ಒಲವನ್ನು ಬಲಿ ಕೊಡುತ್ತಾರೆ. ಹೀಗೆ ಮಾಡುವುದು ತಪ್ಪು. ಅವರು ತಮ್ಮ ಬಗ್ಗೆ ಕಾಳಜಿ ವಹಿಸುವುದು, ತಮ್ಮನ್ನು ಸದಾ ಪ್ರೆಸೆಂಟೆಬಲ್ ಆಗಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ಅದಕ್ಕೆ ಅವರು ಕೊಂಚ ಸಮಯ ಮೀಸಲಿಡಬೇಕು.
ನಾನಿನ್ನೂ ಯುವತಿ! ಕೆಲವು ಮಹಿಳೆಯರು ಮದುವೆಯಾದ ಸ್ವಲ್ಪ ಸಮಯದ ನಂತರ, ಮತ್ತೆ ಕೆಲವರು ಮಕ್ಕಳಾದ ನಂತರ ತಮಗೆ ವಯಸ್ಸಾಯಿತು ಎಂದುಕೊಳ್ಳುತ್ತಾರೆ. ಆದರೆ ವಾಸ್ತವವೇನೆಂದರೆ, ಅವರ ಆಲೋಚನೆ ಅವರನ್ನು ವೃದ್ಧರನ್ನಾಗಿಸುತ್ತದೆ. ಈ ವಿಷಯದ ಬಗ್ಗೆ ಕಾಸ್ಮೆಟಾಲಜಿಸ್ಟ್ ಮತ್ತು ಬ್ಯೂಟಿ ಅಂಡ್ ಹೇರ್ ಎಕ್ಸ್ ಪರ್ಟ್ ಸುನೀತಾ ಹೀಗೆ ಹೇಳುತ್ತಾರೆ, ಮನೋವೈಜ್ಞಾನಿಕ ರೂಪದಲ್ಲಿ ನೋಡಿದರೆ ಮಾನಸಿಕವಾಗಿ ವೃದ್ಧರಾದರೇ ದೈಹಿಕವಾಗಿಯೂ ವೃದ್ಧರಾಗಿರುತ್ತಾರೆ.
ಆದ್ದರಿಂದ ಸಮಯದ ಜೊತೆ ಜೊತೆಗೆ ನಮ್ಮ ಆಲೋಚನೆಯಲ್ಲೂ ಬದಲಾವಣೆ ತರಬೇಕು. ಹೀಗೆ ಮಾಡದಿದ್ದಲ್ಲಿ ಒತ್ತಡದ ರೇಖೆಗಳು ಮುಖದ ಮೇಲೆ ನೆರಿಗೆಗಳ ರೂಪದಲ್ಲಿ ಕಂಡುಬರುತ್ತವೆ. ಹೀಗಿರುವಾಗ ನಮ್ಮ ಆಲೋಚನೆ ಹೇಗೆ ಬದಲಾಯಿಸುವುದು, ಯಂಗ್ ಸ್ಟರ್ ಗ್ಯಾಂಗ್‌ನಲ್ಲಿ ಸೇರಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಅತ್ಯಂತ ಅಗತ್ಯವಾದದ್ದು ತನ್ನನ್ನು ತಾನು ಮೋಹಿಸುವುದು. ಎಲ್ಲ ಮಹಿಳೆಯರೂ ಆಗಾಗ್ಗೆ ಬ್ಯೂಟಿ ಪಾರ್ಲರ್‌ಗೆ ಹೋಗಬೇಕು. ಬ್ಯೂಟಿ ಪಾರ್ಲರ್‌ಗೆ ಹೋಗಲಾಗದವರು ತಮ್ಮನ್ನು ಸುಂದರವಾಗಿಟ್ಟುಕೊಳ್ಳಲು ಮನೆಯಲ್ಲೇ ಬ್ಯೂಟಿ ಟ್ರೀಟ್ ಮೆಂಟ್ ಪಡೆಯಬೇಕು.
ಬ್ಯೂಟೀಶಿಯನ್ ರೇಣು ಹೀಗೆ ಹೇಳುತ್ತಾರೆ, ``ಮನೆಯ ಕೆಲಸದಿಂದ ಬಿಡುವು ಸಿಕ್ಕ ಕೂಡಲೇ ಮಹಿಳೆಯರು ತಮ್ಮ ಬಗ್ಗೆ ಹಾಗೂ ತಮ್ಮ ಸೌಂದರ್ಯದ ಬಗ್ಗೆ ಯೋಚಿಸಬೇಕು. ನಿಯಮಿತವಾಗಿ ಸ್ಕಿನ್ ಕ್ಲೀನಿಂಗ್ ಮತ್ತು ಮಾಯಿಶ್ಚರೈಸಿಂಗ್ ಮಾಡಿಸಿಕೊಳ್ಳಬೇಕು.
``ಇದರ ಜೊತೆಗೆ ತೆಳುವಾಗಿ ಮೇಕಪ್ ಮಾಡಿಕೊಳ್ಳಬೇಕು. ಅದಕ್ಕೆ ಎಸ್‌ಪಿಎಫ್‌ಯುಕ್ತ ಕ್ರೀಮ್ ನಲ್ಲಿ 3-4 ಹನಿ ಫೌಂಡೇಶನ್ ಬೆರೆಸಿ ಮುಖ ಹಾಗೂ ಕತ್ತಿನ ಮೇಲೆ ಹಚ್ಚಿ. ಅದರಿಂದ ಮುಖದಲ್ಲಿ ಕಾಂತಿ ಬರುತ್ತದೆ. ಅದು ಸನ್‌ಸ್ಕ್ರೀನ್ ಕೆಲಸವನ್ನೂ ಮಾಡುತ್ತದೆ. 30-40 ವಯಸ್ಸಿನ ಮಹಿಳೆಯರಂತೂ ತಮ್ಮ ತ್ವಚೆಯ ಬಗ್ಗೆ ವಿಶೇಷ ಗಮನ ಕೊಡಬೇಕು. ಏಕೆಂದರೆ ಈ ವಯಸ್ಸಿನಲ್ಲಿ ತಮ್ಮ ಬಗ್ಗೆ ಕೊಂಚ ನಿರ್ಲಕ್ಷ್ಯ ವಹಿಸಿದರೂ ಮುಖದ ಮೇಲೆ ತೆಳುವಾದ ನೆರಿಗೆಗಳು ಮೂಡಲಾರಂಭಿಸುತ್ತವೆ. ಸಣ್ಣಪುಟ್ಟ ಕಪ್ಪು ಕಲೆಗಳು ಶುರುವಾಗುತ್ತವೆ.''
ಇದರ ಬಗ್ಗೆ ಸುನೀತಾ ಹೀಗೆ ಹೇಳುತ್ತಾರೆ, ``ಮುಖದಲ್ಲಿ ಬರುತ್ತಿರುವ ಈ ಬದಲಾವಣೆಗಳನ್ನು ಅಲಕ್ಷಿಸಬೇಡಿ. ಏಕೆಂದರೆ ಇದು ಹೆಚ್ಚುತ್ತಿರುವ ನಿಮ್ಮ ವಯಸ್ಸನ್ನು ತಡೆಯಬಹುದಾದ ವಯಸ್ಸು. ಆದ್ದರಿಂದ 30 ವಯಸ್ಸಿನ ನಂತರ ಫೇಶಿಯಲ್ ಮತ್ತು ಹಗುರವಾದ ಸ್ಕಿನ್ ಟ್ರೀಟ್‌ಮೆಂಟ್ ಅಗತ್ಯವಾಗಿ ಮಾಡಿಸಿ, ಫ್ರೂಟ್ ಫೇಶಿಯಲ್ ಟ್ರೈ ಮಾಡಿ. ಮನೆಯಲ್ಲಿ ರಸಭರಿತ ಹಣ್ಣುಗಳ ತಿರುಳನ್ನು ಬೆರೆಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಮುಖ ತೊಳೆಯಿರಿ. ಅದರಿಂದ ನೆರಿಗೆಗಳು ಕಡಿಮೆಯಾಗುತ್ತವೆ.''
40-50 ವಯಸ್ಸಿನ ಮಹಿಳೆಯರು ಆ ವಯಸ್ಸಿಗೆ ಬಂದ ಕೂಡಲೇ ತಮ್ಮ ಕಾಲ ಮುಗಿದೇ ಹೋಯಿತೆಂದು ತಿಳಿದುಕೊಳ್ಳುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ದೊಡ್ಡವರಾಗುತ್ತಿರುತ್ತಾರೆ, ಗಂಡ ಮನೆಗೆ ಬೇಕಾದ ಸೌಲಭ್ಯಗಳನ್ನು ಹೊಂದಿಸುತ್ತಿರುತ್ತಾರೆ. ಹೀಗಿರುವಾಗ ಮಹಿಳೆಯರು ತಮ್ಮನ್ನು ನೋಡುವವರು ಯಾರು ಎಂದು ಯೋಚಿಸಿ ಅಲಂಕರಿಸಿಕೊಳ್ಳುವುದಿಲ್ಲ. ಅದು ತಪ್ಪು, ಈ ವಯಸ್ಸಿನಲ್ಲೂ ಮಹಿಳೆಯರು ಸುಂದರವಾಗಿ ಕಾಣಬಹುದು.