- ತುಟಿಗಳಿಗೆ ಪಲ್ಪಿ ಲುಕ್ಸ್ ನೀಡಲು, ತುಟಿಗಳ ಮಧ್ಯೆ, ಮೇಲೆ ಹಾಗೂ ಕೆಳಭಾಗದಲ್ಲಿ ಶಿಮರಿ ಹೈ ಗ್ಲಾಸ್‌ನ ಡಾಟ್ಸ್ ಹಚ್ಚಿರಿ.
2.ಮೇಕಪ್ ಮಾಡಿಕೊಳ್ಳುವಾಗ, ಬ್ಲಶರ್‌ನ್ನು ಸದಾ ಬ್ಲಶರ್ ಪಾಯಿಂಟ್ ಮೇಲೆ ಒತ್ತುಕೊಡಿ. ಇದನ್ನು ತಿಳಿಯಲು ನಿಮ್ಮ ಮೂಗಿನ ಬಳಿ 2 ಬೆರಳುಗಳ ಗ್ಯಾಪಿನ ನಂತರದ ಜಾಗ ನೋಡಿ. ಅದುವೇ ನಿಮ್ಮ ಬ್ಲಶರ್ ಪಾಯಿಂಟ್. ಈಗ ಅಲ್ಲಿಂದ ಬ್ಲಶರ್ ಅಪ್ಲೈ ಮಾಡಿ.
3.ಮೇಕಪ್ ಮಾಡುವ ಮುನ್ನ, ಪ್ರೈಮರ್ ಬಳಸುವುದರಿಂದ ಸ್ಮೂತ್ ಟೆಕ್ಸ್ ಚರ್ ಸಿಗುತ್ತದೆ.
4.ಸಿಲ್ಕಿ ಶೈನಿ ಹೇರ್‌ಗಾಗಿ, ಹೇರ್ ಸೀರಮ್ ಅಗತ್ಯ ಬಳಸಿರಿ.
5.ಪರ್ಫೆಕ್ಟ್ ಕ್ಯಾಟ್ ಐಸ್ ಲುಕ್ಸ್ ಗಾಗಿ, ತೆಳು ಪಾಯಿಂಟ್‌ನ ಬ್ರಶ್ ಬಳಸಬೇಕು.
6.ಚೀಕ್ ಬೋನ್ಸ್ ಎದ್ದು ಕಾಣುವಂತೆ ಮಾಡಲು, ಅಂಡರ್ ಚೀಕ್ ಬೋನ್ಸ್ ಮೇಲೆ ಬ್ರಾನ್ಸರ್ ಬಳಸುತ್ತಾ, ಆ್ಯಕ್ಚುಯಲ್ ಚೀಕ್ ಬೋನ್ಸ್ ಹೈಲೈಟ್ ಮಾಡಿ.
7.ಕೂದಲಿಗೆ ಉತ್ತಮ ವಾಲ್ಯೂಂ ನೀಡಲು, ವಾಲ್ಯೂಮೈಝಿಂಗ್ ಸ್ಪ್ರೇ ಜೊತೆ ಬ್ಲೋ ಡ್ರೈಯರ್ ಬಳಸಬೇಕು.
8.ನಿಮ್ಮ ದುಬಾರಿ ನೇಲ್ ಪಾಲಿಶ್ ಮತ್ತೆ ಮತ್ತೆ ಒಣಗಿ ಹೋಗುತ್ತಿದ್ದರೆ, ಅದನ್ನು ತಪ್ಪಿಸಲು, ಆದಷ್ಟೂ ಆ ಬಾಟಲಿಗಳನ್ನು ಫ್ರಿಜ್ ನಲ್ಲಿರಿಸಿ. ಆಗ ನಿಮಗೆ ನೇಲ್ ಪಾಲಿಶ್ ಬಹುಕಾಲ ಬಾಳಿಕೆ ಬರುತ್ತದೆ.
9.ಮಸ್ಕರಾ ಬಳಸುವ ಮೊದಲು ಅದು ಎಕ್ಸ್ ಪೈರಿ ಡೇಟ್ ದಾಟಿಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಅದು ನಿಮ್ಮ ಲ್ಯಾಶೆಸ್ ಹಾಳು ಮಾಡುವುದಲ್ಲದೆ, ನಿಮ್ಮ ಮೇಕಪ್‌ನ್ನು ಅಸಹಜಗೊಳಿಸುತ್ತದೆ.
10.ಪಿಂಪಲ್ ಅಥವಾ ಆ್ಯಕ್ನೆ ಮೇಲೆ ಟೀ ಟ್ರೀ ಆಯಿಲ್ ಬಳಸುವುದರಿಂದ, ಅವುಗಳ ಗುರುತು ಉಳಿಯುವುದಿಲ್ಲ.
11.ಕ್ಲಿಯರ್ ಫ್ರೆಶ್ ಸ್ಕಿನ್‌ಗಾಗಿ ಸ್ಯಾಲಿಸಿಲಿಕ್ ಆ್ಯಸಿಡ್‌ಯುಕ್ತ ಕ್ಲೆನ್ಸರ್ ಬಳಸಬೇಕು.
12.ಚರ್ಮದಿಂದ ಡೆಡ್ ಸೆಲ್ಸ್ ತೆಗೆದುಹಾಕಲು, ಸಮ್ಮರ್‌ವಿಂಟರ್ ಎರಡೂ ಕಾಲದಲ್ಲಿ ಚರ್ಮವನ್ನು ಎಕ್ಸ್ ಪೋಲಿಯೇಟಿಂಗ್ ಮಾಡಿಸಬೇಕು. ಆದರೆ ವಾರದಲ್ಲಿ 2 ಕ್ಕಿಂತ ಹೆಚ್ಚು ಸಲ ಮಾಡಿಸಿದರೆ, ಚರ್ಮ ಡ್ರೈ ಆಗಿಬಿಡುತ್ತದೆ.
13.ಬೇಸಿಗೆಯಲ್ಲಿ ಟಿಂಟೆಡ್ ಮಾಯಿಶ್ಚರೈಸರ್ ಫೌಂಡೇಶನ್ ಬಳಸಲು ಮರೆಯದಿರಿ.
14.ರಾತ್ರಿ ಮಲಗುವ ಮುನ್ನ, ಮೇಕಪ್ ರಿಮೂವರ್‌ನಿಂದ ಮೇಕಪ್ ತೆಗೆದು, ಜೆಂಟಲ್ ಫೇಸ್ ವಾಶ್ ಬಳಸಬೇಕು. ಆಗ ನಿಮ್ಮ ಚರ್ಮ ಹೆಚ್ಚು ದಿನ ಫ್ರೆಶ್‌ಯಂಗ್ ಲುಕ್ಸ್ ಹೊಂದಿರುತ್ತದೆ.
15.ನೀವು ಸದಾ ಸಲ್ಫೇಟ್ ಫ್ರೀ ಇರುವ ಶ್ಯಾಂಪೂ ಮಾತ್ರ ಬಳಸಬೇಕು. ಏಕೆಂದರೆ ಸಲ್ಫೇಟ್ ಕೂದಲಿನ ಕ್ಯುಟಿಕಲ್ಸ್ ಗೆ ಹಾನಿ ಮಾಡುವ ಸಾಧ್ಯತೆಗಳಿವೆ.
16.ಕೂದಲನ್ನು ಕಂಡೀಶನ್‌ಗೊಳಿಸಲು, ಕಂಡೀಶನರ್‌ನ್ನು ಕೂದಲಿನ ಬುಡದಿಂದ ಬದಲು, ಕಿವಿಯ ಕೆಳಭಾಗದಿಂದ ಕೂದಲ ತುದಿಯವರೆಗೂ ಮಸಾಜ್ ಮಾಡಬೇಕು.
17.ಕೂದಲನ್ನು ದಿನ ಶ್ಯಾಂಪೂ ಹಾಕಿ ತೊಳೆಯಬಾರದು. ಏಕೆಂದರೆ ಅದರಲ್ಲಿನ ಕೆಮಿಕಲ್ಸ್ ಕೂದಲಿಗೆ ಹಾನಿ ಮಾಡುತ್ತವೆ.
18.ಬೆವರು ಬಂದಾಗ, ಬ್ಲಾಟಿಂಗ್ ಪೇಪರ್‌ನಿಂದ ಮುಖವನ್ನು ವೈಪಿಂಗ್ ಮಾಡಿ. ಇದರಿಂದ ಮೇಕಪ್ ಕೆಡುವುದಿಲ್ಲ.
19.ಪ್ರತಿದಿನ ಹೊರಗೆ ಹೋಗುವ ಮೊದಲು SPFಯುಕ್ತ ಸನ್‌ಸ್ಕ್ರೀನ್ ಲೋಶನ್ ಹಚ್ಚಬೇಕು. ಬೆಳಗ್ಗೆ ಮುಖ ತೊಳೆಯುವಾಗ ಅಂಥದೇ ಮಾಯಿಶ್ಚರೈಸರ್ ಬಳಸಬೇಕು.
20.ಹೆಲ್ದಿ ಕೂದಲಿಗಾಗಿ, ಸದಾ ಶುಭ್ರ ಬಾಚಣಿಗೆ ಹಾಗೂ ಬ್ರಶ್ ಬಳಸಬೇಕು. ಇತರರು ಬಳಸಿದ ಟವೆಲ್, ಬ್ರಶ್, ಬಾಚಣಿಗೆ ಎಂದೂ ಬಳಸಬೇಡಿ. ಕೂದಲ ಬೆಳವಣಿಗೆಗೆ ಇದು ಒಳ್ಳೆಯದಲ್ಲ.