ಚಳಿಗಾಲ ಬಂದಾಗ ಮೈ ಕಾಯಿಸಿಕೊಳ್ಳುವುದು ಮತ್ತು ಮಂಜಿನಲ್ಲಿ ಬಾಯಿಂದ ಹೊಗೆಯ ಉಂಗುರಗಳನ್ನು ಬಿಡುವ ಆಸೆಯಾಗುತ್ತದೆ.  ಆದರೆ ಒಮ್ಮೊಮ್ಮೆ ಈ ಮೋಜು ತ್ವಚೆಗೆ ಘಾತಕವಾಗುತ್ತದೆ.

ಖ್ಯಾತ ಡರ್ಮಟಾಲಜಿಸ್ಟ್ ಡಾ. ಅರುಣಾ ಹೀಗೆ ಹೇಳುತ್ತಾರೆ, ``ಒಮ್ಮೊಮ್ಮೆ ಮಹಿಳೆಯರು ಚಳಿಗಾಲದಲ್ಲಿ ಟ್ಯಾನಿಂಗ್‌ ಆಗುವುದಿಲ್ಲ ಎಂದುಕೊಂಡು ಮೋಸ ಹೋಗುತ್ತಾರೆ. ಅದು ತಪ್ಪು ಕಲ್ಪನೆ.  ಈ ಸೀಸನ್‌ನಲ್ಲಿ ಬಿಸಿಲಿನೊಂದಿಗೆ ಮಂಜು ಸಹ ತ್ವಚೆಯನ್ನು ಟ್ಯಾನ್‌ ಮಾಡಿಬಿಡುತ್ತದೆ.'' ಮಂಜಿನಿಂದ ತಂಪಾಗುತ್ತದೆ.  ತಂಪಿನಿಂದ ಬಣ್ಣ ಹೊಳೆಯುತ್ತದೆ. ಆದರೆ ಟ್ಯಾನಿಂಗ್‌ ಹೇಗೆ ಆಗುತ್ತದೆ ಎಂದು ನಿಮ್ಮ ತಲೆಯಲ್ಲಿ ಪ್ರಶ್ನೆಗಳು ಏಳುತ್ತಿರಬಹುದು. ಈ ಗೊಂದಲವನ್ನು ಪರಿಹರಿಸುತ್ತಾ ಡಾ. ಅರುಣಾ ಹೀಗೆ ಹೇಳುತ್ತಾರೆ, `` ಯುವಿ ಎ ಮತ್ತು ಯುವಿ ಬಿ ಎಂಬ ಎರಡು ರೀತಿಯ ಕಿರಣಗಳಿರುತ್ತವೆ. ಮಹಿಯರಿಗೆ ಸಾಧಾರಣವಾಗಿ ಯುವಿ ಬಿ ಕಿರಣಗಳ ಬಗ್ಗೆ ತಿಳಿದಿರುತ್ತದೆ. ಅವು ಸೂರ್ಯನ ಕಿರಣಗಳಿಂದ ಬಂದಿರುತ್ತವೆಂದು ಗೊತ್ತು. ಆದರೆ ಮೋಡ, ಮಂಜು ಮತ್ತು ಗಾಡಿಯ ಗಾಜುಗಳಿಂದ ತೂರಿಬರುವ ಯುವಿ ಎ ಕಿರಣಗಳು ತ್ವಚೆಯನ್ನು ಟ್ಯಾನ್‌ ಮಾಡಿಬಿಡುತ್ತವೆ''.ಕೊಂಚ ಯೋಚಿಸಿ, ನೀವು ಚಳಿಯ ಮೋಜು ಸವಿಯಲು ಸನ್‌ಸ್ಕ್ರೀನ್‌ ಹಾಗೂ ಹೊದಿಕೆಯಿಲ್ಲದೆ ಮನೆಯಿಂದ ಹೊರಗೆ ಎಷ್ಟು ಬಾರಿ ಹೋಗಿಲ್ಲ? ನಿಮ್ಮ ತ್ವಚೆಯ ಮೇಲೆ ಎಷ್ಟು ಮೆಲನಿನ್‌ ಕುಳಿತಿರಬಹುದು? ಸ್ವಲ್ಪ ಸಮಯದ ನಂತರ ಅದರ ಪ್ರಭಾವ ನಿಮಗೆ ಏಜಿಂಗ್‌ ಮಾರ್ಕ್ಸ್ ರೂಪದಲ್ಲಿ ಕಂಡುಬರುತ್ತದೆ. ಈಗ ಚಳಿಗಾಲ ಮತ್ತೆ ವಾರೆಂಟ್‌ ಕೊಡುತ್ತಿದೆ. ಆದ್ದರಿಂದ ಈ ಬಾರಿ ನಿಮ್ಮ ತ್ವಚೆಯನ್ನು ಚಳಿಗಾಲದಲ್ಲಿ ಉಂಟಾಗುವ ಟ್ಯಾನಿಂಗ್‌ನಿಂದ ರಕ್ಷಿಸಲು ಈ ಟಿಪ್ಸ್ ಗಮನಿಸಿ.

ಮನೆಯಲ್ಲಿಯೂ ಸನ್‌ಸ್ಕ್ರೀನ್‌ ಉಪಯೋಗಿಸಿರಿ. ಏಕೆಂದರೆ ಮನೆಯಲ್ಲಿ ಟ್ಯೂಬ್‌ ಲೈಟ್‌ಗಳು, ಎಲ್ಇಡಿ ಬಲ್ಪ್ ಗಳು ಇತ್ಯಾದಿಗಳಿಂದ ಹೊರಬರುವ ಬೆಳಕಿನ ಕಿರಣಗಳಲ್ಲಿಯೂ ಯುವಿ ಎ ಕಿರಣಗಳಿರುತ್ತವೆ.  ಅದರಿಂದ ತ್ವಚೆಗೆ ಟ್ಯಾನ್ ಉಂಟಾಗುತ್ತದೆ.

ಯಾವಾಗಲೂ ಎಸ್‌ಪಿಎಫ್‌ 30ರ ಸನ್‌ಸ್ಕ್ರೀನ್‌ಹಚ್ಚಿ. ಅದರಲ್ಲಿ ಪಿ++ ಚಿಹ್ನೆ ಇದೆಯೇ ನೋಡಿ. ಕೆಲವು ಮಹಿಳೆಯರ ತ್ವಚೆ ಆಯ್ಲಿ ಆಗಿರುತ್ತದೆ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಅವರ ಮುಖದ ಮೇಲೆ ಅಂಟಂಟಾಗಿರುತ್ತದೆ. ಆದರೆ ಈಗ ಮಾರ್ಕೆಟ್‌ನಲ್ಲಿ ಸನ್‌ಸ್ಕ್ರೀನ್‌ ಹಲವಾರು ರೂಪಗಳಲ್ಲಿ ಲಭ್ಯವಿವೆ.  ಉದಾಹರಣೆಗೆ  ಜೆಲ್‌, ಪೌಡರ್, ಸ್ಪ್ರೇ.... ಆದರೆ ಆಯ್ಲಿ ತ್ವಚೆಯವರಿಗೆ ಸನ್‌ಸ್ಕ್ರೀನ್ ಚೆನ್ನಾಗಿರುತ್ತದೆ.

ಗಮನಿಸಿ

ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಿಸಿಲಲ್ಲಿ ಕೂತಿರುವುದು ಅತ್ಯಂತ ಹಾನಿಕಾರಕ. ಏಕೆಂದರೆ ಆಗ ಸೂರ್ಯನಿಂದ ಯುವಿ ಎ ಕಿರಣಗಳು ಬರುತ್ತವೆ. ಅವು ತ್ವಚೆಯ ಕೊಲೋಜೆನ್‌ ಲೇಯರ್‌ನ್ನು ಡ್ಯಾಮೇಜ್‌ ಮಾಡುತ್ತವೆ. ಅಂದಹಾಗೆ  ಕೊಲೋಜೆನ್‌ ಲೇಯರ್‌ನಿಂದಲೇ ಸ್ಕಿನ್‌ ಟೈಟ್‌ ಆಗುತ್ತದೆ ಮತ್ತು ಒಂದು ವೇಳೆ ಈ ಲೇಯರ್‌ ಡ್ಯಾಮೇಜ್‌ ಆದರೆ ಸ್ಕಿನ್‌ನಲ್ಲಿ ಟ್ಯಾನಿಂಗ್‌ ಉಂಟಾಗುತ್ತದೆ.

ಬಿಸಿಲಿನಲ್ಲಿ ಕುಳಿತುಕೊಳ್ಳಲು 10 ಗಂಟೆಗಿಂತ ಮೊದಲಿನ ಸಮಯವನ್ನು ಆರಿಸಿಕೊಳ್ಳಿ. ಆಗ ಸೂರ್ಯನ ಕಿರಣಗಳಿಂದ ನಮಗೆ ವಿಟಮಿನ್‌ `ಡಿ' ಸಿಗುತ್ತದೆ. ಆದರೆ ಬಿಸಿಲು ನೇರವಾಗಿ ಮುಖದ ಮೇಲೆ ಬೀಳದಂತೆ ನೋಡಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ