ಸಿನಿಮಾ ಕಾರ್ಯಕ್ರಮವೊಂದರ ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್ ನಟಿ ನಿಖಿತಾ ರಾವಲ್ ಅತ್ಯಂತ ಮುಜುಗರಕ್ಕೀಡಾದ ಘಟನೆ ನಡೆದಿದೆ.

ನಿಖಿತಾ ರಾವಲ್ ಕ್ಯಾಮೆರಾಗಳಿಗೆ ಫೋಸ್ ನೀಡುತ್ತಿದ್ದಾಗ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ಕೇಳಿಕೊಂಡು ಬಂದು, ಇದ್ದಕ್ಕಿದ್ದಂತೆ ನಟಿಗೆ ಬಲವಂತವಾಗಿ ಲಿಪ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಲಿವುಡ್, ತೆಲುಗು ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಿಖಿತಾ ರಾವಲ್, ಮುಂಬೈನಲ್ಲಿ ನಡೆದ ಅದ್ಧೂರಿ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಅವರು ರೆಡ್ ಕಾರ್ಪೆಟ್ ಮೇಲೆ ಆಗಮಿಸಿ ಮುಗುಳುನಗುತ್ತಾ ಕ್ಯಾಮೆರಾಗಳಿಗೆ ಫೋಸ್ ನೀಡುತ್ತಿದ್ದರು.ಈ ವೇಳೆಯೇ ಅಚಾನಕ್ಕಾಗಿ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದರು. ಪ್ರೀತಿಯಿಂದಲೇ ಅಭಿಮಾನಿಯೊಂದಿಗೆ ಸೆಲ್ಫಿಗೆ ಫೋಸ್ ನೀಡಿದ ನಿಖಿತಾ ರಾವಲ್. ಸಾಮಾನ್ಯವಾಗಿ ಅಭಿಮಾನಿಗಳು ಸೆಲ್ಫಿ ಬಳಿಕ ಕೈಕುಲುಕುವುದು ಅಥವಾ ಅಪ್ಪಿಕೊಳ್ಳುವುದು ವಾಡಿಕೆ. ಆದರೆ ಈ ಅಭಿಮಾನಿ ಮೊದಲು ಅಪ್ಪಿಕೊಂಡರು, ಅದೂ ಸಹಜ ಎಂಬಂತೆ ನಟಿ ಸುಮ್ಮನಿದ್ದರು. ಬಳಿಕ ಏಕಾಏಕಿ ಮಹಿಳಾ ಅಭಿಮಾನಿ ನಿಖಿತಾ ರಾವಲ್ ಅವರನ್ನು ಬಲವಂತವಾಗಿ ಹಿಡಿದು ಚುಂಬಿಸಲು ಮುಂದಾದರು. ನಿಖಿತಾ ಬಿಡಿಸಿಕೊಳ್ಳಲು, ತಳ್ಳಲು ಪ್ರಯತ್ನಿಸಿದರು. ಆದರೆ ಮಹಿಳಾ ಅಭಿಮಾನಿಯಿಂದ ದೂರ ಸರಿಯಲು ಸಾಧ್ಯವಾಗಲಿಲ್ಲ.

ನಟಿಯ ಎಲ್ಲಾ ಪ್ರಯತ್ನಗಳು ವಿಫಲಗೊಂಡ ಬಳಿಕವೇ ಮಹಿಳಾ ಅಭಿಮಾನಿ ತಾವಾಗಿಯೇ ಬಿಟ್ಟರು. ಆದರೂ ಅವರು ಕೆನ್ನೆಗೂ ಒಂದು ಚುಂಬನ ನೀಡಿ ಅಲ್ಲಿಂದ ತೆರಳಿದರು. ಆಘಾತಕ್ಕೊಳಗಾದ ನಿಖಿತಾ ರಾವಲ್ ಅವರು ಒಂದು ಕ್ಷಣ ಮಾತು ಬರದೇ ಸ್ತಬ್ಧರಾಗಿ ನಿಂತುಬಿಟ್ಟರು. ಸಿಬ್ಬಂದಿಗಳು ತಕ್ಷಣ ಮಹಿಳಾ ಅಭಿಮಾನಿಯನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿನ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. “ನಟಿಯರ ಬಳಿ ಅನಧಿಕೃತ ವ್ಯಕ್ತಿಗಳು ತೆರಳಲು ಅವಕಾಶ ನೀಡಿದ್ದು ಯಾಕೆ? ಭದ್ರತೆ ಎಲ್ಲಿತ್ತು?” ಎಂದು ಹಲವರು ಪ್ರಶ್ನಿಸಿದ್ದಾರೆ.ಇದು ಸಂಪೂರ್ಣ ಭದ್ರತಾ ಲೋಪ ಎಂದು ದೇಶಾದ್ಯಂತದ ಸಿನಿಮಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಇಂತಹ ಸಣ್ಣ ಲೋಪವೂ ದೊಡ್ಡ ಗಂಡಾಂತರಕ್ಕೆ ಕಾರಣವಾಗಬಲ್ಲದು. ಸೆಲೆಬ್ರಿಟಿಗಳ ಜೀವಕ್ಕೂ ಅಪಾಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ