ಆಗ ಮಾತ್ರ ಅದರಿಂದ ಹೊರಬರಲು ಅವರು ಯೋಚಿಸುತ್ತಾರೆ....''

`ಸಂಘರ್ಷ್‌' ಚಿತ್ರದಲ್ಲಿ ಬಾಲನಟಿಯಾಗಿ ಬಾಲಿವುಡ್‌ಗೆ ಎಂಟ್ರಿ ಪಡೆದುಕೊಂಡ ನಟಿ ಆಲಿಯಾ ಭಟ್‌, `ಸ್ಟೂಡೆಂಟ್‌ ಆಫ್‌ ದಿ ಇಯರ್‌' ಚಿತ್ರದಿಂದ ನಾಯಕಿ ಪಟ್ಟಕ್ಕೇರಿ ತನ್ನದೇ ಪ್ರತ್ಯೇಕ ಛಾಪು ಮೂಡಿಸಿದಳು. ಅವಳ ಮುಗ್ಧ ನಟನೆ ವೀಕ್ಷಕರಿಗೆ ಬಹಳ ಹಿಡಿಸಿತು. ಯುವಜನತೆಗೆ ಈ ಚಿತ್ರ ಹುಚ್ಚೆಬ್ಬಿಸಿತು. ಟೀನೇಜರ್‌ ಆಲಿಯಾ ಎಲ್ಲರ ಮನಗೆದ್ದಳು. ಇದಾದ ಮೇಲೆ ಬಂದ `ಹೈವೇ' ಚಿತ್ರದಲ್ಲಿನ ತನ್ನ ನಟನೆಯಿಂದ ವಿಮರ್ಶಕರ ಮನ ಗೆದ್ದಳು. `ಉಡ್ತಾ ಪಂಜಾಬ್‌' ಅವಳ ಪಾಲಿನ ಒಂದು ಸ್ಟ್ರಾಂಗ್‌ ಚಿತ್ರ. ಇದರಲ್ಲಿ ಬಿಹಾರಿ ಹುಡುಗಿ ನಂದಾಳ ಪಾತ್ರ ಬಲು ಗಟ್ಟಿ ಎನಿಸಿತ್ತು. ಈ ಚಿತ್ರಕ್ಕಾಗಿ ಈಕೆಗೆ 2016ರ ಉತ್ತಮ ನಟಿ ಪ್ರಶಸ್ತಿ ಸಹ ಸಿಕ್ಕಿತ್ತು.

ಇದಾದ ಮೇಲೆ `2 ಸ್ಟೇಟ್ಸ್, ಹಂಪ್ಟಿ ಶರ್ಮ ಕೀ ದುಲ್ಹನಿಯಾ, ಕಪೂರ್‌ ಸನ್ಸ್, ಡಿಯರ್‌ ಝಿಂದಗಿ,' ಇತ್ಯಾದಿ ಚಿತ್ರಗಳಲ್ಲಿ ಸಣ್ಣ ಪ್ರಾಯದಲ್ಲೇ ಸಮರ್ಥವಾಗಿ ನಟಿಸಿ ಸೈ ಎನಿಸಿಕೊಂಡಳು. ಹೀಗೆ ಈಕೆ ಬಾಲಿವುಡ್‌ನ ಟಾಪ್‌ವೋಸ್ಟ್ ಹೀರೋಯಿನ್‌ ಎನಿಸಿದಳು. ಹಿಂದಿಯ ಪ್ರತಿ ನಿರ್ಮಾಪಕ ನಿರ್ದೇಶಕರೂ ಈಕೆ ತಮ್ಮ ಚಿತ್ರದ ನಾಯಕಿ ಆಗಬೇಕೆಂದು ಬಯಸುತ್ತಾರೆ.

ನಟನೆ ಒಂದು ಕಲೆ

ಆಲಿಯಾ ಹೇಳುತ್ತಾಳೆ, ``ನಟನೆ ಎಂಬುದು ನಿಜಕ್ಕೂ ಒಂದು ಅದ್ಭುತ ಕಲೆ! ಆ ಪಾತ್ರ ಏನನ್ನು ಬೇಡುತ್ತದೆ ಏನನ್ನು ವ್ಯಕ್ತಪಡಿಸಬೇಕೆಂದು ನೀವು ಪರ್ಫೆಕ್ಟ್ ಆಗಿ ಅರ್ಥ ಮಾಡಿಕೊಂಡರೆ, ನಿಮಗೆ ನಟನೆ ಬಂತೆಂದು ಅರ್ಥ. ಹೀಗಾಗಿಯೇ ನಾನು ಎಲ್ಲಾ ಪಾತ್ರಗಳನ್ನೂ ಸಾಧ್ಯವಾದಷ್ಟೂ ಜೀವಂತವಾಗಿ ಇರಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಅದು `ಉಡ್ತಾ ಪಂಜಾಬ್‌'ನ ಬಿಹಾರಿ ನಂದಾ ಆಗಿರಬಹುದು, `ಹೈವೇ' ಚಿತ್ರದ ವೀರಾ ತ್ರಿಪಾಠಿ ಅಥವಾ `ಡಿಯರ್‌ ಝಿಂದಗಿ'ಯ ಕಾಯ್ರಾ.... ಎಲ್ಲದರಲ್ಲೂ ನಾನು ನನ್ನ ಛಾಪು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ.''

ಎಷ್ಟೋ ಸಲ ಆಲಿಯಾಳ ಹೆಸರು ಹೀರೋ ಸಿದ್ಧಾರ್ಥ್‌ ಮಲ್ಹೋತ್ರ ಜೊತೆ ಗಾಸಿಪ್‌ ಕಾಲಂನಲ್ಲಿ ಮೂಡಿಬಂದಿದೆ. ಇದಕ್ಕೆ ಡೋಂಟ್‌ಕೇರ್‌ ಎನ್ನುವ ಆಲಿಯಾ, ಆತ ನನ್ನ ಗೆಳೆಯನಷ್ಟೆ ಎನ್ನುತ್ತಾಳೆ. ತನ್ನ ಚಿತ್ರಗಳಲ್ಲಿ ಈಕೆಗೆ `ಡಿಯರ್‌ ಝಿಂದಗಿ' ಬಲು ಆಪ್ತ. ``ನಿಮ್ಮಲ್ಲಿ ಏನೇ ಕುಂದುಕೊರತೆಗಳಿದ್ದರೂ ಅದನ್ನು ಮುಚ್ಚಿಡುವ ಬದಲು ನಾಲ್ಕು ಜನರೊಂದಿಗೆ ಹಂಚಿಕೊಳ್ಳಿ. ನನಗೆ ಸದಾ ಫಾಸ್ಟ್ ಆಗಿ ಮಾತನಾಡುವ ಅಭ್ಯಾಸ, ಕೆಲವೊಮ್ಮೆ ಬೇರೆಯವರಿಗೆ ಅರ್ಥವಾಗಲ್ಲ. ಹಾಗೇಂತ ನಾನು ಅದನ್ನು ಮುಚ್ಚಿಡಲು ಹೋಗೋಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದೌರ್ಬಲ್ಯ ಇದ್ದೇ ಇರುತ್ತದೆ, ಇತರರಿಗೆ ನೋವಾಗದಂತೆ ಅದರ ಜೊತೆ ಬಾಳಬೇಕಷ್ಟೆ.''

ಮನದಾಳದ ಕನಸು

ನಟನೆ ಮಾತ್ರವಲ್ಲದೆ ಆಲಿಯಾ ಹಾಡುವುದೂ ಉಂಟು. ಎಷ್ಟೋ ಚಿತ್ರಗಳಲ್ಲಿ ತಾನೇ ಹಾಡಿದ್ದಾಳೆ. ತಾನೇ ಹಾಡಿರುವ `ಲವ್ ಯೂ ಝಿಂದಗಿ....' ಹಾಡು ಬಲು ಇಷ್ಟವಂತೆ. ಕರೀನಾಳ ನಟನೆ ಇವಳಿಗೆ ಬಲು ಇಷ್ಟ. ಹಿಂದಿನವರಾದ ರೇಖಾ, ಶಬಾನಾ ಆಜ್ಮಿ, ವಹೀದಾ ರೆಹಮಾನ್‌ ಮುಂತಾದವರ ಫ್ಯಾನ್‌ ಕೂಡ. ನಿರ್ದೇಶಕರಾದ ತಂದೆ ಮಹೇಶ್‌ ಭಟ್‌ರ `ದಿಲ್ ‌ಹೈ ಕಿ ಮಾನ್ತಾ ನಹೀ, ಹಂ ಹೈ ರಾಹಿ ಪ್ಯಾರ್‌ ಕೇ' ಇವಳಿಗೆ ಅಚ್ಚುಮೆಚ್ಚು. ತಂದೆಯ ರೊಮ್ಯಾಂಟಿಕ್‌ ಚಿತ್ರಗಳಲ್ಲಿ ನಟಿಸುವಾಸೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ