‘ಕಾಂತಾರ : ಚಾಪ್ಟರ್ 1’ ರಿಲೀಸ್ ಬೆನ್ನಿಗೇ ‘ಕಾಂತಾರ: ಚಾಪ್ಟರ್ 2’ ಬಗ್ಗೆ ಘೋಷಣೆ!
– ರಾಘವೇಂದ್ರ ಅಡಿಗ ಎಚ್ಚೆನ್.
ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ : ಅಧ್ಯಾಯ 1’ ಇಂದು ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ನಿರೀಕ್ಷೆಯಂತೆ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರ ರಿಲೀಸ್ಗೂ ಮೊದಲು ಅಂದರೆ ಅಕ್ಟೋಬರ್ 1ರಂದು ಸಿನಿಮಾಗೆ ಹಲವು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ದುಬಾರಿ ಟಿಕೆಟ್ ಬೆಲೆ ಮತ್ತು ಯಶಸ್ವಿ ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ ಕೋಟಿ ಕೋಟಿ ಹರಿದುಬಂದಿದೆ.
ಇದೀಗ ‘ಕಾಂತಾರ : ಅಧ್ಯಾಯ 1’ಗೆ ಎಲ್ಲಾ ಕಡೆ ಸಖತ್ ರೆಸ್ಪಾನ್ಸ್ ಸಿಗುತ್ತಿದ್ದು, ಸಿನಿಮಾ ತುಂಬಾನೇ ಅದ್ದೂರಿಯಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಚಿತ್ರವನ್ನು ಬಹುವಾಗಿ ಇಷ್ಟಪಡುತ್ತಿದ್ದಾರೆ. ಈ ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹೀಗಿರುವಾಗಲೇ ಈ ಸಿನಿಮಾಗೆ ರಿಷಬ್ ಸೀಕ್ವೆಲ್ ಘೋಷಣೆ ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
‘ಕಾಂತಾರ: ಚಾಪ್ಟರ್ 1’ ರಿಲೀಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಸೀಕ್ವೆಲ್ ಹೇಳಲು ರೆಡಿಯಾಗಿದ್ದಾರೆ. ಕಾಂತಾರ ಮೂಲಕ ಡಿವೈನ್ ಸ್ಟಾರ್ ಹಿಂದಿನ ಕಾಲದ ಕಥೆಯನ್ನು ವಿವರಿಸಿದರು. ಈ ಬಾರಿಯೂ ಅವರು ದೈವದ ವಿಚಾರವನ್ನೇ ಇಟ್ಟುಕೊಂಡಿದ್ದಾರೆ. ರಿಷಬ್ ಕ್ರಿ.ಶ.4-5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಮಾಯಾವಿ ಲೋಕವನ್ನು ನೋಡುಗನ ಮುಂದಿರಿಸಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವಾಗಿದ್ದು, ಚಾವುಂಡಿ (ಒಂದು ದೈವ) ಆಗಮನ ಆಗುತ್ತದೆ. ಆ ಬಳಿಕ ಕೊರಗ್ಗಜ್ಜನನ್ನೂ ತೋರಿಸಲಾಗಿದೆ. ಕೊನೆಯಲ್ಲಿ ಮತ್ತೊಂದು ದಂತ ಕಥೆ ಇದೆ ಎಂದು ಹೇಳಲಾಗುತ್ತದೆ. ಅದುವೇ ‘ಕಾಂತಾರ: ಚಾಪ್ಟರ್ 2’. ಈ ಸಿನಿಮಾ ಬಗ್ಗೆ ಈಗಲೇ ಕುತೂಹಲ ಮೂಡುವಂತೆ ಮಾಡಿದೆ.