ಆಕೆ ಬದುಕಿನ ಕಾಲದಲ್ಲಿ ಎದುರಿಸಿದ ನೋವಿಗೆ ಬೇರಾರೇ ಆಗಿದ್ದರೂ ಹಾಡು ಸಾಯಲಿ ಆರಾಮಾಗಿ ಬದುಕಿದ್ದರೆ ಸಾಕೆಂದು ದನಿ ನಿಲ್ಲಿಸಿ ಬಿಡುತ್ತಿದ್ದರು.

ಮನೆಯಲ್ಲೇ ಮೊದಲ ಶತ್ರು ಎಂಬಂತೆ ಆಕೆ ಬೆಳೆದದ್ದೇ ದೊಡ್ಡ ಸಂಗೀತ ದ ಆಲದ ಮರದ ಕೆಳಗೆ. ಆದರೆ ಕ್ರಮೇಣ ದನಿಯಲ್ಲಿ ಏರಿಳಿತ ಮತ್ತು ಆ ಮಾದಕತೆ ಅದ್ಯಾವ ಮಟ್ಟಕ್ಕೆ ಆಕೆಯನ್ನು ಕರೆದೊಯ್ಯಿತೆಂದರೆ ಒಂದ ಸಮಯಕ್ಕೆ ತಾನು ಬದುಕಬೇಕೆಂದರೆ ಹಾಡು ಮಾತ್ರ ತನ್ನನ್ನು ಬದುಕಿಸಬಲ್ಲದು ಎಂದು ನಿರ್ಧರಿಸಿಬಿಟ್ಟಳು.

ಮತ್ತೆ ಆಕೆ ತಿರುಗಿ ನೋಡಲಿಲ್ಲ…

ಹಳೆಯ ಹಾಡುಗಳು ಬಿಡಿ –

ಅವು ಶತಮಾನದ ಹಿಟ್ಸ್ ಎಂಬ ಲಿಸ್ಟ್ ಸೇರಿದ ನಂತರವೂ,

“ಜರಾ ಸಾ ಜೂಮ್ ಲೂ ಮೈ” – ಎಂದು ಹಾಡದಿದ್ದರೆ ನೆನಪಿರಲಿ ಕಾಜೋಲ್ ಗೊಂದು ಬ್ರೆಕ್ ಆ ಪರಿಯಲ್ಲಿ ಸಿಗುತ್ತಲೇ ಇರಲಿಲ್ಲ. ಅಷ್ಟ್ಯಾಕೆ

“ಯಾಹಿ ರೇ .. ಯಾಹಿ ರೇ .. ರಂಗಿಲಾರೇ “ ( ರಂಗಿಲಾ ) ಎನ್ನುತ್ತಾ, ಆಗಿನ ಕಾಲಕ್ಕೆ  ಮೈಗಿಂತ ಹೆಚ್ಚು ಎದೆ ಕುಣಿಸಿ ಮತ್ತೇರಿಸಿ ಕುಣಿದ ಹಾಡನ್ನು ಉರ್ಮಿಳಾ ಮಾತೊಂಡ್ಕರ್ ಗಾಗಿ ಇನ್ಯಾರಾದರೂ ಹಾಡುವುದು ಸಾಧ್ಯವಿತ್ತೆ. ಅದರಲ್ಲೇ ಇನ್ನೊಂದು ಹಾಡು ಕೈಗೆತ್ತಿಕೊಂಡು ಬಿಟ್ಟ ಹಾಡು ಅದ್ಯಾವ ಪರಿ ಮಾದಕತೆ ಎಂದರೆ ಆ ಲಿರಿಕ್ಸ್ ಅನುಭವಿಸಿದವರಿಗೇ ಗೊತ್ತು.

ತನಹಾ ತನಹಾ.. ( ಜಾಕಿ ಶ್ರಾಫ್ ಜೊತೆಗಿನ ಆ ಸೆಕ್ಸಿ ಹಾಡು ಇನ್ಯಾರ ದನಿಯಲ್ಲಾದರೂ ಊಹಿಸಲು ಸಾಧ್ಯವಾದರೆ ಹೇಳಿ )

ಕಿಸಿಸೇ ಪ್ಯಾರ ಲೇಲೋ- ಕಿಸಿಕೋ ಪ್ಯಾರ ದೇದೋ – ಆಕೆಯ ಬದುಕಿನಲ್ಯಾವತ್ತೂ ಇದು ಮಾತ್ರ ಆಗಲೇ ಇಲ್ಲ. ಆಕೆ ಕೊಟ್ಟಿದ್ದಷ್ಟೆ ಬಂತು.

ಜವಾನಿ ಜಾನೆ ಮನ್.. ( ನಮಕ್ ಹಲಾಲ್) ಕೇಳುವವರ  ಜವಾನಿ ಎದ್ದು ಬರುವಂತೆ ಹಾಡಿದ್ದರೆ,

ಯೆ ಮೆರಾ ದಿನ್ ಯಾರ ಕಾ ದಿವಾನಾ ( ಡಾನ್) ಅರ್ಧ ಚಿತ್ರವನ್ನೇ ಆರ್ಥಿಕವಾಗಿ ಗೆಲ್ಲಿಸಿದ ದನಿ ಅದು.

ಆದರೆ ಇವೆಲ್ಲದ ಜತೆ ಜತೆಗೆ ಆಕೆಯ ಜೀವನ ಪೂರ್ತಿ ಸಾಲು ಸಾಲಾಗಿ ದುರಂತಗಳೇ ಘಟಿಸುತ್ತಲೇ ಇದ್ದುವಲ್ಲ. ಆ ನೋವು.. ಹತಾಶೆ.. ಇನ್ನೇನಾಗುವುದೇ ಇಲ್ಲ ಈ ಬದುಕಿನಲ್ಲಿ ಎಂದೆಲ್ಲಾ ಅನ್ನಿಸಿದಾಗ, ಆದರ ಅಡಿಯಿಂದ ಇದ್ದ ಎಲ್ಲ ಕಸುವನ್ನು ಹಾಕಿ ಹಾಡಿ ಹಾಡಿ ಹನ್ನೆರಡು ಸಾವಿರ ಮೈಲಿಗಲ್ಲು ನೆಟ್ಟ ಹಾಡುಗಾರ್ತಿ ಬದುಕಿದ್ದಾಗಲೇ ಮನೆ ಮಕ್ಕಳು ಗಂಡ ಎಲ್ಲವನ್ನೂ ಎಲ್ಲ ಕಳೆದುಕೊಳ್ಳುತ್ತಲೇ, ಸಾವನ್ನೂ ನೋಡುತ್ತಲೇ ಹಾಡಿದ ಹಾಡುಗಾರ್ತಿ – ಬಹುಶ: ಇನ್ಯಾರೂ ಅಲ್ಲ ಮತ್ತೊಬ್ಬರು ಇಲ್ಲವೇ ಇಲ್ಲ. ಈ ಯರಾ ಮುಗಿಯಿತು. ಇನ್ನೊಬ್ಬಾಕೆ ಬರಲಾರರು.

ಕೆಸೆಟ್ ಕಾಲದಲ್ಲಿ ನನ್ನ ಹತ್ತಿರ ಇದ್ದ ಐನೂರಕ್ಕೂ ಹೆಚ್ಚಿನ ಕೆಸೆಟ್ಗಳಲ್ಲಿ ಅರ್ಧಕ್ಕೂ ಹೆಚ್ಚು ಹಾಡುಗಳ ಇದೇ ದನಿಯವಾಗಿದ್ದವು.

ತೀರ ಇತ್ತಿಚೆಗೆ ಕನ್ನಡ ಅದ್ಭುತ ರೋಮಾಂಟಿಕ್ ಸಿನೇಮಾ ಎಂದೇ ಹೆಸರು ಮಾಡಿದ್ದ “ ಮುಂಗಾರು ಮಳೆ ೨ “ ರಲ್ಲೂ “ಹೇಳದೆ ಕಾರಣ “ ಎನ್ನುವ ಹಾಡಿಗೂ ದನಿ ಆಗಿ ಬಿಟ್ಟರಲ್ಲ.. ಊಹಿಸಲಸಾಧ್ಯವದು.. ಎಷ್ಟು ನಿಧಾನ ಹಾಡಿಗೆ ಆಶಾ ಹಾಡುತ್ತಾರೆಂದರೆ ..? ಹಿಂದೊಮ್ಮೆ ಕನ್ನಡದ ರಾಜ್ ಅಣ್ಣಾವ್ರು ಜೊತೆಯಲ್ಲೂ ಹಾಡಿದ್ದರೆಂದು ಕೇಳಿದ್ದೇನೆ – ಹಾಡು ನೆನಪಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ