ಶರತ್ ಚಂದ್ರ
ಒಂದಷ್ಟು ಸ್ಟಾರ್ ನಟರು ಬೇರೆ ಬೇರೆ ನಾಯಕರ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿಕೊಂಡು ಬಂದಿರುವುದು ತುಂಬಾ ವರ್ಷಗಳಿಂದ ನೋಡಿದ್ದೇವೆ. ಕೆಲವು ನಟರು ಸ್ನೇಹಕ್ಕೆ ಕಟ್ಟುಬಿದ್ದು ನಟಿಸಿದರೆ, ಕೆಲವೊಂದು ಪಾತ್ರಗಳಿಗೆ ಇವರನ್ನು ಬಿಟ್ಟರೆ ಬೇರಾರು ಸೂಕ್ತ ಅಲ್ಲ ಅಂತ ಡೈರೆಕ್ಟರ್ ಗೆ ಅನಿಸಿದಾಗ ಅಂತ ಸಂದರ್ಭದಲ್ಲಿ ಸ್ಟಾರ್ ನಟರ ಮನವೊಲಿಸಿ ಗೆಸ್ಟ್ ರೋಲ್ ಗೆ ನಿರ್ದೇಶಕರು ಆಯ್ಕೆ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿರುವ ಬಝ್ ನ ಪ್ರಕಾರ ಸಾಯಿ ಕುಮಾರ್ ಮತ್ತು ನಿರೂಪ್ ಬಂಡಾರಿ ತಂದೆ ಮಗನಾಗಿ ಅಭಿನಯಿಸುತ್ತಿರುವ ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಬಗ್ಗೆ ಅಧಿಕೃತವಾಗಿ ಚಿತ್ರ ತಂಡ ಮಾಹಿತಿ ಹಂಚಿ ಕೊಂಡಿಲ್ಲ. ಶಿವಣ್ಣ ಈ ಹಿಂದೆ ಕೂಡ ಒಂದಷ್ಟು ಅತಿಥಿ ಪಾತ್ರಗಳನ್ನು ಮಾಡಿದ್ದು, ಶಿವಣ್ಣನಿಗಾಗಿ ವಿಶೇಷ ಪಾತ್ರ ವನ್ನು ಸೃಷ್ಟಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇನ್ನೊಂದು ವಿಶೇಷ ಸುದ್ದಿಯೇನೆಂದರೆ, ಬಿಡುಗಡೆಗೆ ಸಿದ್ಧವಾಗಿರುವ ಬಹು ನಿರೀಕ್ಷಿತ ಚಿತ್ರ ಪ್ರೇಮ್ಸ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಬಹುತಾರಾಗಣದ ಕೆಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆಯಂತೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಪತ್ರಕರ್ತರು ಪ್ರೇಮ್ ಗೆ ಸುದೀಪ್ ಅಭಿನಯಿಸುವ ಬಗ್ಗೆ ಕೇಳಿದಾಗ
ಪ್ರೇಮ್ ಅವರು ಕಾದು ನೋಡಿ ಎಂದು ಹೇಳಿದ್ರು. ಕೆಡಿ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ಕಿಚ್ಚ ಸುದೀಪ್ ಅವರ ಸೇರ್ಪಡೆ ಮತ್ತು ಅವರ ಪಾತ್ರದ ಬಗ್ಗೆ ಸಿನಿ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಸುದೀಪ್ ಅವರಿಗೆ ಈ ಹಿಂದೆ ಪ್ರೇಮ್ ಅವರು' ದಿ ವಿಲನ್ 'ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರವನ್ನು ನೀಡಿದ್ದರು.
ಧ್ರುವ ಸರ್ಜಾ, ರವಿಚಂದ್ರನ್, ರಮೇಶ್,ಸಂಜಯ್ ದತ್,ಶಿಲ್ಪಾ ಶೆಟ್ಟಿ ಹೀಗೆ ಅತೀ ದೊಡ್ಡ ತಾರ ಬಳಗ ಇರುವ ಈ ಚಿತ್ರ ಇದೇ ವರ್ಷ ಬಿಡುಗಡೆ ಆಗುತ್ತಿದ್ದು, ಕಿಚ್ಚ ಸುದೀಪ್ ಅವರ ಎಂಟ್ರಿಯಿಂದ ಚಿತ್ರದ ಬಗ್ಗೆ ಕ್ರೇಜ್ ಇನ್ನಷ್ಟು ಹೆಚ್ಚಿದೆ.