ನೀವು ಹೀಗೆ ಮಾಡಿ ನೋಡಿ : ಮ್ಯಾಕ್ಸ್ ವಿವಾ ಗ್ಲಾಮ್ ಬ್ರಾಂಡ್‌ ನ ಲಿಪ್‌ ಸ್ಟಿಕ್‌ ಗೆ ಈಗ 30 ವರ್ಷ ತುಂಬಿದೆ. ಈ ಮೂಲಕ ಈ ಬ್ರಾಂಡ್‌ ವಿಶ್ವವಿಡೀ ದೊಡ್ಡ ಹೆಸರು ಗಳಿಸಿದೆ! ಈ ಕಂಪನಿ ಲಕ್ಷಾಂತರ ಡಾಲರ್‌ ಗಳನ್ನು ಈಗಾಗಲೇ ಬಡವರಿಗೆ ದಾನ ಮಾಡಿದೆ. ಪಾಪ್‌ ಸ್ಟಾರ್‌ ಕಿಮ್ ಪೆಟ್ರಾಸ್‌ ಈ ಚಾರಿಟಿ ಮ್ಯಾನೇಜ್‌ ಮೆಂಟ್‌ ನ ಬ್ರಾಂಡ್‌ ಅಂಬಾಸಿಡರ್‌ಪ್ರಮೋಟರ್‌. ಇಂಥ ಘನವೆತ್ತ ಪಾಪ್‌ ಸ್ಟಾರ್‌ ಈ ಲಿಪ್‌ ಸ್ಟಿಕ್‌ ಬಳಸುತ್ತಿದ್ದಾಳೆಂದ ಮೇಲೆ ನೀವು ಏಕೆ ಅದನ್ನು ಬಳಸಬಾರದು?

mayari-beauty-launch-event-pho

ರಂಗುರಂಗಿನ ತಮಾಶಾ : ಮಿಸ್‌ ಯಾ ಮಿಸೆಸ್‌ ಸೌಂದರ್ಯ ಸ್ಪರ್ಧೆಗಳ ಕ್ರೌನ್‌ ಪಡೆಯುವುದರ ಒಂದು ಲಾಭ ಎಂದರೆ, ಅಂಥ ಸುಂದರಿಗೆ ಬಹಳಷ್ಟು ಕಂಪನಿಗಳು, ತಮ್ಮ ಪ್ರಾಡಕ್ಟ್ ನ್ನು ಲಾಂಚ್‌ ಮಾಡಲು, ಆ ಕಾರ್ಯಕ್ರಮಕ್ಕೆ ಹೆಚ್ಚಿನ ರಂಗು ತುಂಬಿಸಲು ಕರೆಸಿಕೊಳ್ಳುತ್ತವೆ. ಮಯಾರಿ ಬ್ರಾಂಡ್‌ನ ಕಾಸ್ಮೆಟಿಕ್ಸ್ ಕಂಪನಿ, ಇತ್ತೀಚೆಗೆ ಲಾಸ್‌ ವೇಗಾಸ್‌ ನಲ್ಲಿ ಒಂದು ಭವ್ಯ ಹೋಟೆಲ್ ‌ನಲ್ಲಿ ಇವೆಂಟ್‌ ಏರ್ಪಡಿಸಿತ್ತು. ಆಗ ಅದು ಅಲ್ಲಿಗೆ ಮಿಸೆಸ್‌ ಯೂನಿವರ್ಸ್‌ 2024ಳನ್ನು ಕರೆಸಿಕೊಂಡು, ತನ್ನ ತಮಾಶಾ ಕಾರ್ಯಕ್ರಮದ ರಂಗೇರಿಸಿಕೊಂಡಿತು. ಇಂಥ ಎಲ್ಲಾ ಸಂದರ್ಭಗಳಲ್ಲೂ ಈ ಮಿಸ್‌/ಮಿಸೆಸ್‌, ತಾವು ಕ್ರೌನ್‌ ಪಡೆಯುವಾಗ ಧರಿಸಿದ್ದ ಅದೇ ಡ್ರೆಸ್ ನಲ್ಲೇ ಬಂದು ಇಳಿಯುತ್ತಾರೆ. ಆಗ ಮಾತ್ರ ಇವೆಂಟ್‌ ನ ಗ್ಲಾಮರ್‌ ಕೋಶೆಂಟ್‌ ಮುಗಿಲೇರುತ್ತದೆ!

rpmg-s-fertility-experts

ಇದರಲ್ಲಿ ಯಾವ ತಪ್ಪೂ ಇಲ್ಲ : ಭಾರತವನ್ನೂ ಒಳಗೊಂಡಂತೆ ಈಗ ವಿಶ್ವವಿಡೀ ಫರ್ಟಿಲಿಟಿ ಕ್ಲಿನಿಕ್ಸ್ ಎಲ್ಲೆಲ್ಲೂ ತೆರೆದುಕೊಂಡಿವೆ. ಸಾಯುತ್ತಿರುವವರನ್ನು ಬದುಕಿಸುವ ಆಸ್ಪತ್ರೆಗಳಿಗಿಂತ, ಟೆಸ್ಟ್ ಟ್ಯೂಬ್‌ ಬೇಬಿ ತಯಾರಿಸುವ ಇಂಥ ಕ್ಲಿನಿಕ್ಸ್ ಎಲ್ಲೆಲ್ಲೂ ಹೆಚ್ಚಾಗಿ ರಾರಾಜಿಸುತ್ತಿವೆ! ರೀಪ್ರೊಡಕ್ಟಿವ್ ‌ಪಾರ್ಟ್‌ ನರ್‌ ಮೆಡಿಕಲ್ ಗ್ರೂಪಿನ ಹೊಸ ಬಹು ಅಂತಸ್ತಿನ ಕ್ಲಿನಿಕ್‌ ಬಲು ರಿಚ್‌ ಗ್ರಾಂಡ್‌ ಆಗಿದೆ. ಅಲ್ಲಿನ ಸ್ಟಾಫ್‌ ಅಂತೂ ಬಲು ಸ್ಮಾರ್ಟ್‌, ಸ್ಮೈಲಿಂಗ್‌ ಹಾಗೂ ಸುಪರ್ಬ್‌! ಇವರ ಬಳಿ ತುಸು ಪ್ರೌಢ ದಂಪತಿಗಳು ಬಂದು ಸಂತಾನಪ್ರಾಪ್ತಿಗಾಗಿ ಹಪಹಪಿಸುತ್ತಾರೆ, ತಮ್ಮ ಇಡೀ ಯೌವನ ಅವರು ಕೆರಿಯರ್‌ ಗಾಗಿಯೇ ಕಳೆದುಬಿಟ್ಟಿರುತ್ತಾರೆ. ಈ ರೀತಿ ಕ್ಲಿನಿಕ್‌ ಹುಡುಕಿ ಬರುವುದರಲ್ಲಿ ಯಾವ ತಪ್ಪೂ ಇಲ್ಲ. ಹಿಂದೆಲ್ಲ ಹೆಂಗಸರು 45-50ರವರೆಗೂ ಸಹಜವಾಗಿ ಪ್ರಸವಿಸುತ್ತಿದ್ದರು. ಇಲ್ಲಿ ಅವರು ಕೇಳಿದಷ್ಟು ಲಕ್ಷಗಳನ್ನು ಚೆಲ್ಲುತ್ತಾ ಇರಬೇಕಷ್ಟೆ!

wildlife-children-s-book-author

ನಮ್ಮನ್ನೂ ಬದುಕಲು ಬಿಡಿ : ಬ್ರೇಕ್‌ ಫಾಸ್ಟ್ ವಿತ್‌ ಜಿರಾಫೆ ಅಂದ್ರೆ, ಅದರಲ್ಲೂ ಒಂದು ಆನಂದವಿದೆ. ಜಿರಾಫೆ ಮ್ಯಾನರ್‌ ಹೋಟೆಲ್ ‌ನ ವೈಶಿಷ್ಟ್ಯ ಅಂದ್ರೆ, ಇಲ್ಲಿ ನೀವು ಹಾಯಾಗಿ ಜಿರಾಫೆ ಜೊತೆ ಬ್ರೇಕ್‌ ಫಾಸ್ಟ್ ಸವಿಯಬಹುದು, ಪ್ರೇಮಿಯ ಸಾಂಗತ್ಯಕ್ಕಿಂತ ಇದು ಬಲು ಜೋರಾಗಿರುತ್ತದೆ! ಆಫ್ರಿಕಾದಲ್ಲಿ ಜಿರಾಫೆ ಮಾತ್ರವಲ್ಲದೆ ಇತರೆ ಕಾಡು ಪ್ರಾಣಿಗಳೂ ನಿಧಾನವಾಗಿ ಕಣ್ಮರೆ ಆಗುತ್ತಿವೆ. ಏಕೆಂದರೆ ಆಧುನಿಕ ಮಾನವರು ಅಲ್ಲೆಲ್ಲ ಟಾರು ರಸ್ತೆ, ಮೈನ್ಸ್, ಹೋಟೆಲ್‌, ನಗರ ನಿರ್ಮಿಸುತ್ತಿದ್ದಾರೆ. ಅಲ್ಲೀಗ ಕಾಡು ಪ್ರಾಣಿಗಳು ಬದುಕಲು ಜಾಗವೇ ಇಲ್ಲವಾಗಿದೆ. ಈ ಮೂಲಕ ಕಾಡುನಾಡಿನ ಪ್ರಾಣಿಗಳೆರಡೂ ನೆಮ್ಮದಿ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ!

miami-swp-2-copy

ಬೇಸಿಗೆಯ ಬೇಗೆಯನ್ನು ಹೀಗೆ ಓಡಿಸಿ : ಹೆಚ್ಚುತ್ತಿರುವ ಬೇಸಿಗೆಯ ಬೇಗೆಯೊಂದಿಗೆ ಪೈಪೋಟಿ ನಡೆಸಲು ಇದೀಗ ಗಾರ್ಮೆಂಟ್ ಕಂಪನಿಗಳು ಧಾವಿಸಿ ಬರುತ್ತಿವೆ. ಆಧುನಿಕ ಟೆಕ್ನಾಲಜಿ ಬಳಸಿಕೊಂಡು ಇವು, ನಮ್ಮ ಬಾಡಿ ಹೀಟ್‌ ನ್ನು ಕೂಲ್ ‌ಆಗಿಸುವಂಥ ಡ್ರೆಸ್ ತಯಾರಿಯಲ್ಲಿ ತೊಡಗಿವೆ. ಎವಾಪರೇಶನ್ನಿನ ಟೆಕ್ನಿಕ್ಸ್ ನ್ನು ಸಹ ಇಲ್ಲಿ ಬಳಸಲಾಗಿದೆ. ಅದನ್ನೇ ಹೊಸ ರೀತಿಯಲ್ಲಿ ಪ್ರಸ್ತುತಪಡಿಸಿ, ರಂಧ್ರಗಳುಳ್ಳಂಥ ಡ್ರೆಸ್‌ ತಯಾರಿಸಿ, ಬೆವರನ್ನು ಹೀರಿಕೊಳ್ಳುವಂಥ ಫೈಬರ್‌ ನ್ನು ಈ ಡ್ರೆಸ್‌ ಗೆ ಬೆರೆಸುತ್ತಿದ್ದಾರೆ. ಇದಲ್ಲವೇ ಹೊಸ ಟೆಕ್ನಿಕ್‌ ನ ಮಜಾ?

ultimo-cool-vest-white-suu

ಫ್ಯಾಷನ್ನೋಡುವುದೋ ಬಾಲೆಯರನ್ನೋ : ನಾರ್ಥ್‌ ಅಮೆರಿಕಾದ ಯುನೈಟೆಡ್‌ ಸ್ಟೇಟ್ಸ್ ರೂಪುಗೊಂಡಾಗಲೇ ಬಹುತೇಕ ಸೌತ್‌ ಅಮೆರಿಕಾದ ದೇಶ ಸಹ ರೂಪುಗೊಂಡಿತ್ತು. ಆದರೆ ಈಗಲೂ ಒಂದೇ ಸಮುದಾಯ (ರೇಸ್‌)ಕ್ಕೆ ಸೇರಿದ್ದರೂ, ಸೌತ್ ಅಮೆರಿಕಾದಲ್ಲಿ ಅತಿ ದಾರಿದ್ರ್ಯ, ಬಡತನ ತಾಂಡವವಾಡುತ್ತಿದೆ. ಈ ಇಮೇಜ್‌ ನ್ನು ದೂರ ಮಾಡಲು ಕೊಲಂಬಿಯಾ ತನ್ನ ಫ್ಯಾಷನ್ ಗ್ರೂಪ್‌ ನ್ನು ಮಿಯಾಮಿಗೆ ಕಳುಹಿಸಿತು. ಇದರಿಂದ ಸೌತ್‌ ಅಮೆರಿಕಾ ಬಡವಾದರೂ, ಯಾರಿಗೇನೂ ಕಡಿಮೆ ಇಲ್ಲ ಎಂದು ತೋರಿಸಿಕೊಂಡಿತು. ಫ್ಯಾಷನ್‌ ಪೆರೇಡ್‌ ನಲ್ಲಿನ ಈ ಸುಂದರಿಯರ ಸ್ವಿಮ್ ಸೂಟ್‌ ನೋಡಿ, ಇವರು ಯಾವ ಸೀಮೆ ಬಡವರು? ನಮ್ಮ ದೇಶೀ ಡಿಸೈನರ್‌, ಸ್ವಿಮ್ ಸೂಟಿಗೂ ಲೆಹಂಗಾ ತೊಡಿಸಿಬಿಟ್ಟಾರು!

shower-chique-cap

ಲ್ಯಾಶೆಸ್ಗೆ ಏನಾದೀತು? : ಇನೋವೇಶನ್‌ ಇದೀಗ ನಿಮ್ಮ ಬಾತ್‌ ರೂಮನ್ನೂ ಪ್ರವೇಶಿಸಿದೆ. ಹೊಸದಾಗಿ ತಯಾರಾಗಿರುವ ಆಧುನಿಕ ಶವರ್‌ ಕ್ಯಾಪ್‌ ಧರಿಸಿ ಸ್ನಾನ ಮಾಡಿದರೆ, ನಿಮ್ಮ ತಲೆಗೂದಲು ಒಂದಿಷ್ಟೂ ಒದ್ದೆ ಆಗದು. ಕೃತಕ ಐ ಲ್ಯಾಶೆಸ್‌ ಸಹ ಒದ್ದೆ ಆಗುವುದರಿಂದ ಬಚಾವು! ಶವರ್‌ ಚೆಕ್‌ ಕಂಪನಿಯ ಈ ಕ್ಯಾಪ್‌, ಮಾಡೆಲ್ಸ್ ಯಂಗ್‌ ಗರ್ಲ್ಸ್ ಗೆ ಬಲು ಉಪಕಾರಿ. ಏಕೆಂದರೆ ತಮ್ಮ ಕೃತಕ ಲ್ಯಾಶೆಸ್‌ ಏನಾದೀತೋ ಎಂದು ಸ್ನಾನ, ಸ್ವಿಮ್ ಮಾಡಲು ಹೆದರುತ್ತಿದ್ದರಿಗೆ ಇನ್ನು ಮುಂದೆ ಆ ಚಿಂತೆ ಇಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ