ನಿಮ್ಮ ವಿಂಟರ್ ವಾರ್ಡ್ ರೋಬ್ ನಲ್ಲಿ ನೇಚರ್ ಇನ್ ಸ್ಪೈರ್ಡ್ ಚಾರ್ಮ್ ಪಡೆಯಲು ಈ ಗ್ರೀನ್ ಉಲವ್ ಶಾಲನ್ನು ಅಗತ್ಯ ಸೇರಿಸಿಕೊಳ್ಳಿ. ಕೋಲ್ಡ್ ಸೀಸನ್‌ನಲ್ಲಿ ವಾರ್ವ್‌ಗ್ಲಾಮರಸ್ ಲುಕ್ಸ್ ಎರಡೂ ಸುಲಭ ಲಭ್ಯ!
ಈ ಕಲರ್ ಫುಲ್ ಉಲ್ಲನ್ ಸ್ಕಾರ್ಫ್ ನ್ನು ನಿಮ್ಮ ಯಾವುದೇ ಆಧುನಿಕ ಡ್ರೆಸ್, ಸ್ವೆಟರ್ ಅಥವಾ ಸೀರೆಯೊಂದಿಗೆ ಮ್ಯಾಚ್ ಮಾಡಿಕೊಂಡರೂ, ಚೆಂದವೇ! ಹೊಸ ವರ್ಷಕ್ಕೆ ಸ್ವಾಗತ ಕೋರಲು ಇನ್ನಿದಕ್ಕಿಂತ ಬೇಕೇ.....?

ಮಸ್ಟರ್ಡ್ ಮಿಶ್ರಿತ ಈ ದಟ್ಟ ಹಳದಿಯ ಅತ್ಯಾಕರ್ಷಕ ಕಾಂಜೀವರಂ ಸೀರೆ ಜೊತೆ, ಟೆಂಪಲ್ ಜ್ಯೂವೆಲರಿ ಕಾಂಟ್ರಾಸ್ಟಿಂಗ್ ಬ್ಲೌಸ್‌ನೊಂದಿಗೆ ಧರಿಸಿದರೆ, ಈ ಸಲದ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಕಳೆ ಬರುವುದರಲ್ಲಿ ಎರಡು ಮಾತಿಲ್ಲ!
ಪರ್ಪಲ್ ಮೇಲೆ ಗೋಲ್ಡನ್ ಕಲರ್ ನ ಕಸೂತಿಯುಳ್ಳ ಈ ಡಾರ್ಕ್ ಬ್ಲೂ ಸೀರೆ, ಹೊಸ ವರ್ಷದ ಮೊದಲ ಹಬ್ಬಾದ ಸಂಕ್ರಾಂತಿಗೆ ಬಲು ಪರ್ಫೆಕ್ಟ್ ಚಾಯ್ಸ್ ಆಗಿದೆ. ನಿಮ್ಮ ಲುಕ್ಸ್ ಪರಿಪೂರ್ಣವಾಗಲು ಈ ಸೀರೆ ಜೊತೆ ಮ್ಯಾಚಿಂಗ್ ಡೀಪ್ ನೆಕ್ ನ ಬ್ಲೌಸ್, ಲಾಂಗ್ ಇಯರ್ ರಿಂಗ್ಸ್, ಆಧುನಿಕ ಡಿಸೈನಿನ ಉಂಗುರ, ಕುತ್ತಿಗೆಗೊಂದು ನೆಕ್ ಬ್ಯಾಂಡ್, ಕ್ಲಚ್ ಬ್ಯಾಗ್, ಹೈ ಹೀಲ್ಸ್ ಇತ್ಯಾದಿ ಟ್ರೈ ಮಾಡಿ. ಸಂಕ್ರಾಂತಿಗೆ ಎಳ್ಳು ಬೀರಲು ಹೀಗೆ ಸಜ್ಜಾದರೆ ಸಾಲದೇ?

ಬ್ಯೂಟಿಫುಲ್ ಮೋಟಿಫ್ಸ್ ನಿಂದ ಸುಸಜ್ಜಿತಗೊಂಡ ಈ ಕ್ಲೋಡ್ ನೆಕ್ ಕಾಲರಿನ ಪ್ರಿಂಟೆಡ್ ಜ್ಯಾಕೆಟ್, ವಿಂಟರ್ ಲುಕ್ಸ್ ಗಾಗಿ ಪರ್ಫೆಕ್ಟ್ ಆಯ್ಕೆಯಾಗಿದೆ. ಇದನ್ನು ಕ್ಲಾಸಿಕ್ ಡೆನಿಮ್ ಅಥವಾ ಸ್ಟ್ರೇಟ್ ಫಿಟ್ ಪ್ಯಾಂಟ್ ಜೊತೆ ಟ್ರೈ ಮಾಡಿ ನೋಡಿ! ನ್ಯೂ ಇಯರ್ ಪಾರ್ಟಿಗೆ ಇದು ಅತ್ಯುತ್ತಮ ಆಯ್ಕೆ ಎನಿಸಿದೆ.
ಈ ಕ್ಲೋಸ್ಡ್ ನೆಕ್ ಕಾಲರ್ ನ ಲಾಂಗ್ ಎಲಿಗೆಂಟ್ ಸ್ಕರ್ಟ್ ಜೊತೆ ನೀವು ಸ್ಟ್ರೇಟ್ ಪ್ಯಾಂಟ್‌ನೀವು ಲೆಂತ್ ಬೂಟ್ಸ್ ಧರಿಸಿದ ಮೇಲೆ, ಈವ್ನಿಂಗ್ ಪಾರ್ಟಿಗೆ ಅಚ್ಚುಕಟ್ಟಾಗಿ ರೆಡಿಯಾಗಿದ್ದೀರಿ ಎಂದೇ ಅರ್ಥ!





