ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ, ಸುಧಾರಿತ ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದ ಸಂಜಯ್ , ಅವರ ಪತ್ನಿ ಮತ್ತು ಸಂಬಂಧಿಕರೊಂದಿಗೆ ಸಾವನ್ನಪ್ಪಿದ್ದಾರೆ.

ಜಾರ್ಖಂಡ್ ರಾಜ್ಯದ ಸಂಜಯ್, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಏರ್ ಆಂಬ್ಯುಲೆನ್ಸ್ ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು,  ಏರ್​ ಆಂಬ್ಯುಲೆನ್ಸ್​ನಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್,  ಸಹ-ಪೈಲಟ್ ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಸಂಜಯ್ ಕುಮಾರ್ ,  ಅರ್ಚನಾ ದೇವಿ, ಧ್ರುವ ಕುಮಾರ್,  ಡಾ. ವಿಕಾಸ್ ಕುಮಾರ್ ಗುಪ್ತಾ  ಮತ್ತು ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ  ಮೃತಪಟ್ಟಿದ್ದಾರೆ.ಸಂಜಯ್​ ಕುಮಾರ್​ ಕುಟುಂಬವು ದೆಹಲಿ ಮೂಲದ ಚಾರ್ಟರ್ ಸೇವೆ ರೆಡ್‌ಬರ್ಡ್ ಏರ್‌ವೇಸ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ90 ವಿಮಾನವನ್ನು ಬಾಡಿಗೆಗೆ ಪಡೆಯಲು 8 ಲಕ್ಷ ರೂಪಾಯಿ ಸಾಲ ಪಡೆದಿತ್ತು ಎನ್ನಲಾಗಿದೆ.

ಸಂಜಯ್​ ಸಹೋದರ ಅಜಯ್ ಈ ಕುರಿತು ವಿವರಿಸಿದ್ದು, ತಮ್ಮ ಸಹೋದರ ಚಿಕಿತ್ಸೆಗಾಗಿ ತಮ್ಮ ಕುಟುಂಬ ಆಸ್ತಿ ಮತ್ತು ಭೂಮಿಯನ್ನು ಮಾರಾಟ ಮಾಡುವ ಬಗ್ಗೆ ಯೋಚಿಸಿತ್ತು. ಸಾಲ ತೆಗೆದುಕೊಂಡು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚವನ್ನು ಮತ್ತು ಏರ್ ಆಂಬ್ಯುಲೆನ್ಸ್ ಬಾಡಿಗೆ ಭರಿಸಲು ಸ್ನೇಹಿತರು ಮತ್ತು ಹಿತೈಷಿಗಳಿಂದ ಹಣವನ್ನು ಸಾಲ ಪಡೆಯಲಾಗಿತ್ತು ಎಂದಿದ್ದಾರೆ.

ಕಳೆದ ಸೋಮವಾರ ಚಂದ್ವಾದಲ್ಲಿರುವ ತಮ್ಮ ಸಣ್ಣ ಹೋಟೆಲ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಸಂಜಯ್ ತೀವ್ರವಾಗಿ ಗಾಯಗೊಂಡಿದ್ದರು. ಕುಟುಂಬದ ಏಕೈಕ ಆಧಾರವಾಗಿದ್ದ ಅವರ ಸ್ಥಿತಿ ಹದಗೆಟ್ಟಿತ್ತು. ಸ್ಥಳೀಯ ಚಿಕಿತ್ಸಾ ಆಯ್ಕೆಗಳು ಇರಲಿಲ್ಲ,  ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.

ಏರ್ ಆಂಬ್ಯುಲೆನ್ಸ್ ಸೋಮವಾರ ರಾಂಚಿಯಿಂದ ಹೊರಟಿತ್ತು. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ವಿಮಾನವು ಛತ್ರ ಜಿಲ್ಲೆಯಲ್ಲಿ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಏಳು ಜನರಲ್ಲಿ ಯಾರೂ ಬದುಕುಳಿದಿಲ್ಲ ಎಂದು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ