ಗುಬ್ಬಿವಾಣಿ ಟ್ರಸ್ಟ್ ಜೂನ್ 14 ರಂದು ಆಯೋಜಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ದೊರೆತಿದ್ದು,ಈಗ ಎರಡನೇ ಬಾರಿಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಈ ಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದು ಅವಳ ಹೆಜ್ಜೆ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ಆಯ್ಧ ಚಿತ್ರಗಳಾಗಿದ್ದು, ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ನಿರೂಪಿಸುತ್ತವೆ.

ಜುಲೈ 12-ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು ಇಲ್ಲಿ ಪ್ರದರ್ಶನವಾಗಲಿವೆ.

ಪ್ರವೇಶ ಉಚಿತವಿದ್ದು, https://forms.gle/gp3yrTJ2JD9W55ad6 ಈ ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ 88677 47236 ಅಥವಾ www.avalahejje.net ಸಂಪರ್ಕಿಸಬಹುದು.

ಜುಲೈ 12ರಂದು ಬೆಳಗ್ಗೆ 10  ಗಂಟೆಗೆ ಶಾಂತಲಾ ದಾಮ್ಲೆ ಕಾರ್ಯಕ್ರಮ ಉದ್ಘಾಟಿಸುವರು.
10.15 ಕ್ಕೆ ಸಿಂಚನಾ ಶೈಲೇಶ್ ನಿರ್ದೇಶನದ ಕೇಕ್ ವಾಕ್’ (2025), 10.30 ಕ್ಕೆ ಚಂದನಾ ನಾಗ್ ನಿರ್ದೇಶನದ ಉಭಯ (2024), 10.40ಕ್ಕೆ ಮಾನಸ ಯು ಶರ್ಮ ನಿರ್ದೇಶನದ ಸೊಲೋ ಟ್ರಾವೆಲ್ಲರ್’ (2023), 10.50ಕ್ಕೆ ಕವಿತಾ ಬಿ ನಾಯಕ್ ನಿರ್ದೇಶನದ ಗ್ಲೀ (2023), 11ಕ್ಕೆ ಕ್ಷಮಾ ಅಂಬೆಕಲ್ಲು ನಿರ್ದೇಶನದ ಪುಷ್ಪ (2024), 11.30ಕ್ಕೆ ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್ ಲೈನ್’ (2025), 11.50ಕ್ಕೆ ತೃಪ್ತಿ ಕುಲಕರ್ಣಿ ನಿರ್ದೇಶನದ ಹೌ ಆರ್ ಯು (2023), 12 ಗಂಟೆಗೆ ಮಂದಾರ ಬಟ್ಟಲಹಳ್ಳಿ ನಿರ್ದೇಶನದ ದಿ ಲಾಸ್ಟ್ ಹ್ಯಾಪಿ ಕಸ್ಟಮರ್ (2024), 12.30 ಕ್ಕೆ ಪುಟದಿಂದ ಪರದೆಗೆ- ಚೇತನ್ ಪಿ ದೇವನೂರು ಅವರಿಂದ ವಿಶೇಷ ಪ್ರಕಟಣೆ
12.35ಕ್ಕೆ ಪ್ರಶ್ನೋತ್ತರ, ಪ್ರೇಕ್ಷಕರ ಪ್ರತಿಕ್ರಿಯೆ ಕಾರ್ಯಕ್ರಮ ನಡೆಯಲಿದೆ ಎಂದು ಅವಳ ಹೆಜ್ಜೆ ಕಿರು ಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ