- ರಾಘವೇಂದ್ರ ಅಡಿಗ ಎಚ್ಚೆನ್.
ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣ್ಣುಮಕ್ಕಳಿಗೆ ಸಪೋರ್ಟ್ ಕಡಿಮೆ. ಕ್ರೀಡೆಯಲ್ಲಿ ಗಂಡು ಮಕ್ಕಳು ಡೊಮಿನೇಟ್ ಮಾಡ್ತಾರೆ. ಹೆಣ್ಣುಮಕ್ಕಳು ಕ್ರೀಡೆಯಲ್ಲಿ ಭಾಗಿಯಾಗಬೇಕು ಎಂದು ನಟಿ ರಮ್ಯಾ ಹೇಳಿದ್ದಾರೆ. ಕ್ವೀನ್ಸ್ ಪ್ರೀಮಿಯರ್ ಲೀಗ್ ಲೋಗೊ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಲೋಗೊ ಲಾಂಚ್ ಮಾಡಿ ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಯುನಿಟಿ ಕಾಣಿಸುತ್ತಿಲ್ಲ. ಈ ರೀತಿ ಸ್ಪೋರ್ಟ್ಸ್ ಹಮ್ಮಿಕೊಂಡರೆ ಆಗಲಾದರೂ ಒಗ್ಗಟ್ಟು ಕಾಣಿಸುತ್ತದೆ. ಕ್ವೀನ್ಸ್ ಪ್ರೀಮಿಯರ್ ಲೀಗ್‌ನಿಂದ ಹೆಣ್ಣುಮಕ್ಕಳಿಗೆ ಸ್ಪೋರ್ಟ್ಸ್‌ನಲ್ಲಿ ಭಾಗಿಯಾಗೋಕೆ ಅವಕಾಶ ಸಿಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಬೆರೆಯೋಕೆ, ಟೈಂ ಕಳೆಯೋಕೆ ಅವಕಾಶ ಸಿಗುತ್ತದೆ ಎಂದು ರಮ್ಯಾ ಹೇಳಿದರು. 'ಒಂದು ಸಿನಿಮಾ ರಿಲೀಸ್ ಆದಾಗಲೂ ಹೆಚ್ಚಾಗಿ ಪ್ರಚಾರ ಮಾಡಲು ಯಾರೂ ಹೋಗುವುದಿಲ್ಲ. ಇಂಡಸ್ಟ್ರಿಯಲ್ಲಿ ನಾಯಕತ್ವ ಅನ್ನುವುದು ತುಂಬಾನೇ ಮುಖ್ಯ. ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬಂದರೆ ಚೆನ್ನಾಗಿರುತ್ತೆ. ಇಂಡಸ್ಟ್ರಿಯಲ್ಲಿ ಆ ಒಗ್ಗಟ್ಟು ಯಾಕೆ ಇಲ್ಲ ಅನ್ನೋದು ನನಗೂ ಗೊತ್ತಿಲ್ಲ. ಆದರೆ ಒಗ್ಗಟ್ಟು ನನಗೆ ಕಾಣಿಸುತ್ತಿಲ್ಲ' ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಮುಖ್ಯವಾಗಿ ಹೊಸ ಪ್ರತಿಭೆಗಳ ಪರ ನಿಲ್ಲುತ್ತೇನೆ. ಹೊಸ ಹೊಸ ಸಿನಿಮಾ ತಂಡದವರು ಆಹ್ವಾನ ಮಾಡಿದರೆ ಅಥವಾ ಸಿನಿಮಾ ಪ್ರಮೋಷನ್ ಬಗ್ಗೆ ಕೇಳಿಕೊಂಡಾಗ ಮಾಡಿಕೊಟ್ಟಿದ್ದೇನೆ . ಹೊಸಬರಾದ್ರೂ ನಾನು ಅವರಿಗೆ ಸಪೋರ್ಟ್ ಮಾಡುತ್ತೇನೆ. ನಾನು ಮುಖ್ಯವಾಗಿ ಹೊಸ ಪ್ರತಿಭೆಗಳ ಪರ ನಿಲ್ಲುತ್ತೇನೆ. ನಮ್ಮ ಇಂಡಸ್ಟ್ರಿಯಲ್ಲಿ ಕೊನೆಯ ಹಿಟ್ ನೋಡಿ ತುಂಬಾ ದಿನಗಳಾಗಿವೆ. ಹಾಗಿದ್ದರೂ ತುಂಬಾ ಜನ ಇಂಡಸ್ಟ್ರಿಗೆ ಬರ್ತಿದ್ದಾರೆ. ಒಳ್ಳೆಯ ಸಿನಿಮಾಗಳ ಮಾಡಬೇಕು ಅಂತ ಪ್ರಯತ್ನ ಪಡುತ್ತಿದ್ದಾರೆ. ಅಂತವರಿಗೆ ನಾವು ಸಪೋರ್ಟ್ ಮಾಡಲೇಬೇಕು. ನಾನು ಇವತ್ತು ಈ ಸ್ಥಾನದಲ್ಲಿ ಇರೋಕೆ ಕಾರಣ ಮಾಧ್ಯಮದವರು ಹಾಗೂ ಕರುನಾಡಿನ ಜನತೆ.
ನೀವು ಸಿನಿಮಾ ನೋಡಿ, ನನಗೆ ಸಪೋರ್ಟ್ ಮಾಡಿದ್ದೀರಿ ಎಂದು ರಮ್ಯಾ ಹೇಳುತ್ತಾರೆ..
ತಮ್ಮ ಹಿಂದಿನ ದಿನಗಳ ಮೆಲುಕು ಹಾಕಿದ ರಮ್ಯಾ ಬಡವ, ಶ್ರೀಮಂತ ಎನ್ನದೇ ಎಲ್ಲರಿಗೂ ಕ್ರೀಡೆ.ಎಂದರೆ ಖುಷಿಯ ಸಂಗತಿ. ನಾನು ಬಾಸ್ಕೆಟ್‌ಬಾಲ್ ಪ್ಲೇಯರ್. ಅದರಲ್ಲಿ ನಾನು ಪ್ರವೀಣೆ. ನಾನು ಹೈಟ್ ಕಮ್ಮಿ ಇದೀನಿ ಅಂತಾ ಅಲ್ಲ. ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗೋದೇ ಇಲ್ಲ. ಅಪ್ಪು ನಾನು ಇಬ್ಬರು ಆರ್‌ಸಿಬಿ ತಂಡಕ್ಕೆ ರಾಯಭಾರಿ ಆಗಿದ್ದೆವು ಎಂದು ಹೇಳಿದ್ದಾರೆ.