ಈ ವರ್ಷ ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ "ಅವಳ ಹೆಜ್ಜೆ ಕಿರುಚಿತ್ರೋತ್ಸವ" ದ ಮೊದಲ ಆವೃತ್ತಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, 2026 ರ ಕಿರುಚಿತ್ರೋತ್ಸವಕ್ಕೆ ತಯಾರಿಯಾಗಿ ಮಹಿಳಾ ಸಬಲೀಕರಣ ಕ್ಕೆ ಸಂಬಂಧಪಟ್ಟ ಕಥಾವಸ್ತುವಿದ್ದು, ಮಹಿಳೆಯರು ನಿರ್ದೇಶಿಸಿದ ಕನ್ನಡ ಕಿರುಚಿತ್ರಗಳ ಸ್ಪರ್ಧೆ ಯನ್ನು ಮತ್ತೊಮ್ಮೆ ಏರ್ಪಡಿಸಲಾಗಿದೆ.ಅತ್ಯುತ್ತಮ ಕಿರುಚಿತ್ರಕ್ಕೆ "ಅವಳ ಹೆಜ್ಜೆ ಪ್ರಶಸ್ತಿ"ಯಾಗಿ ₹1,00,000 (ಒಂದು ಲಕ್ಷ) ನಗದು ಬಹುಮಾನ ಮತ್ತು ಹಲವಾರು ವಿಶೇಷ ವರ್ಗಗಳಲ್ಲಿ ತಲಾ ₹10,000 ನಗದು ಬಹುಮಾನವಿರುತ್ತದೆ. ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವುದು ಮತ್ತು ಕನ್ನಡ ನಿರ್ದೇಶಕಿಯರನ್ನು ಪ್ರೋತ್ಸಾಹಿಸುವುದು ಈ ಚಿತ್ರೋತ್ಸವದ ಮುಖ್ಯ ಉದ್ದೇಶ ಎಂದು ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

ರಾಜ್ಯೋತ್ಸವದ ಅಂಗವಾಗಿ 2025 ರ ನವಂಬರ್ 30 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ನಂತರದಲ್ಲಿ 1 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆಗಾಗಿ www.gubbivanitrust.ngo ಅಥವಾ ಮಾಹಿತಿಗೆ 88677 47236 ಸಂಪರ್ಕಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ