Sj*

ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಹಣ ಹಾಕಿರುವ ಬಾಲನ್ ದಿ ಬಾಯ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೂನ್ 19ಕ್ಕೆ ಈ ಚಿತ್ರ ಮಲಯಾಳಂ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ತೆರೆಗೆ ಎಂಟ್ರಿ ಕೊಡುತ್ತಿದೆ.

ಕೆವಿಎನ್ ಸಂಸ್ಥೆ ಒಡೆಯ ವೆಂಕಟ್ ಕೆ ನಾರಾಯಣ್ ಬಾಲನ್ ದಿ ಬಾಯ್ ಸಿನಿಮಾವನ್ನು ಅಂತರರಾಷ್ಟ್ರೀಯ ವೇದಿಕೆಗೆ ತೆಗೆದುಕೊಂಡು ಹೋಗ್ತಿದ್ದಾರೆ. ಇದೇ ತಿಂಗಳ 14ರಂದು ಅದ್ಧೂರಿಯಾಗಿ ಆರಂಭವಾಗಲಿರುವ ಕಾನ್ಸ್ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಸಂಭ್ರಮದ ನಡುವೆ ಚಿತ್ರತಂಡ ಬಿಡುಗಡೆ ದಿನಾಂಕ ಪ್ರಕಟಗೊಳಿಸಿದೆ.

balans

ಚಿತ್ರಕ್ಕೆ 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಚಿದಂಬರಂ ಅವರು ಆಕ್ಷನ್ ಕಟ್ ಹೇಳಿದ್ದು, ಹಾಗಾಗಿ ಚಿತ್ರದ ಮೇಲೆ ಸಹಜವಾಗಿಯೇ ಭಾರಿ ನಿರೀಕ್ಷೆಗಳಿವೆ. ಈ ಚಿತ್ರವನ್ನು 'ಆವೇಶಮ್' ಚಿತ್ರಕ್ಕೆ ಹೆಸರುವಾಸಿಯಾಗಿರುವ ಜಿತು ಮಾಧವನ್ ಬರೆದಿದ್ದಾರೆ.

ಈ ಚಿತ್ರ ಮಂಜುಮ್ಮೆಲ್ ಬಾಯ್ಸ್‌ನ ವಿಶ್ವಾಸಾರ್ಹ ತಾಂತ್ರಿಕ ತಂಡವನ್ನು ಮರಳಿ ತಂದಿದೆ. ಶೈಜು ಖಾಲಿದ್ ಕ್ಯಾಮರಾ ಕೈಚಳಕ, ವಿವೇಕ್ ಹರ್ಷನ್ ಎಡಿಟಿಂಗ್, ಸುಶಿನ್ ಶ್ಯಾಮ್ ಸಂಗೀತವಿದ್ದು, ನಿರ್ಮಾಣ ವಿನ್ಯಾಸವನ್ನು ಅಜಯನ್ ಚಾಲಿಸ್ಸೆರಿ ನಿರ್ವಹಿಸಿದ್ದಾರೆ. ನಟ-ಲೇಖಕ ಗಣಪತಿ ಕಾರ್ಯಕಾರಿ ನಿರ್ಮಾಪಕ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಆಗಿ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ