ಮಾಡೆಲಿಂಗ್ನಿಂದ ನಟನೆಯ ರಂಗಕ್ಕೆ ಕಾಲಿಟ್ಟ ಬರ್ಖಾಳ ಸಂಘರ್ಷವೇ ಫುಲ್ ಫಿಲ್ಮೀ ಸ್ಟೈಲ್ ನಂತಿದೆ. ಆಕೆಯ ಪ್ರೊಫೆಶನಲ್ ಹಾಗೂ ಪರ್ಸನಲ್ ವಿಷಯಗಳ ಬಗ್ಗೆ ಅವಳಿಂದಲೇ ತಿಳಿಯೋಣವೇ......?

ಬರ್ಖಾ ಬಿಷ್ಟ್ ಹರಿಯಾಣಾ ರಾಜ್ಯದ ಹಿಸಾರ್‌ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದಳು. ತನ್ನ ಮೊದಲ ವಿದ್ಯಾಭ್ಯಾಸವನ್ನು ಕೋಲ್ಕತಾದಲ್ಲಿ ಆರಂಭಿಸಿ, ಪುಣೆಯಲ್ಲಿ ಕಾಲೇಜಿನ ವ್ಯಾಸಂಗ ಮುಂದುವರಿಸಿದಳು. ಆ ದಿನಗಳಲ್ಲೇ ಈಕೆ ಮಾಡೆಲಿಂಗ್‌ ಪ್ರವೇಶಿಸಿದ್ದು. 2000ದಲ್ಲಿ ಈಕೆ ಕ್ವೀನ್‌ ಬ್ಯೂಟಿ ಪೇಜೆಂಟ್‌ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತೆಯಾದಳು! ಅಲ್ಲಿಂದ ಅವಳು ನಟನೆಯತ್ತ ವಾಲಿದಳು. ಅವಳ ತಂದೆಗೆ ಅದು ಇಷ್ಟವಿರಲಿಲ್ಲ.

ಅದನ್ನು ಕಡೆಗಣಿಸಿ ಅವಳು ಮುಂಬೈಗೆ ಧಾವಿಸಿದಳು. ಅಲ್ಲಿ ಅವಳು ಮೊದಲಿಗೆ ಕಿರುತೆರೆಯ `ಕಿತ್ನಿ ಮಸ್ತ್ ಹೈ ಝಿಂದಗಿ' ಧಾರಾವಾಹಿಯಲ್ಲಿ ಉದಿತಾಳ ಪಾತ್ರ ನಿರ್ವಹಿಸಿದಳು. ಇದಾದ ನಂತರ ಈಕೆ, `ಕಸೌಟಿ ಝಿಂದಗೀ ಕೀ, ಕ್ಯಾ ಹೋಗಾ ನಿಮ್ಮೋ ಕಾ, ಕಾವ್ಯಾಂಜಲಿ'ಯಂಥ ಯಶಸ್ವೀ ಧಾರಾವಾಹಿಗಳಲ್ಲಿ ಮಿಂಚಿದಳು.

ದಿಟ್ಟ ಕೆರಿಯರ್‌ ಬಾಲಿವುಡ್‌ ಗೆ ಅಡಿಯಿಟ್ಟ ಹೊಸತರಲ್ಲಿ ಈಕೆ ತನ್ನ ಸಹನಟ ಇಂದ್ರಿನೀ ಸೇನ್‌ ಗುಪ್ತಾ ಜೊತೆ ಪ್ರೇಮಾನುರಾಗಕ್ಕೆ ಸಿಲುಕಿ, ವರ್ಷದಲ್ಲೇ ಮದುವೆ ಆದಳು. ಇದಕ್ಕೆ ಮೊದಲು ಇವಳು ತನ್ನ ಮಾಜಿ ಪ್ರೇಮಿ ಕರಣ್‌ ಸಿಂಗ್‌ ಗ್ರೋವರ್‌ ಜೊತೆ ಎಂಗೇಜ್‌ ಮೆಂಟ್‌ ಮುಗಿಸಿ, 2006ರಲ್ಲಿ ಅದರಿಂದ ಹೊರಬಿದ್ದಳು. ಮುಂದೆ ಇವಳು ಹೆಣ್ಣುಮಗುವಿನ ತಾಯಿಯಾದಳು. 2021ರ ಹೊತ್ತಿಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆದು ವಿಚ್ಛೇದನ ಆಗಿಹೋಯಿತು.

ಮುಂದೆ ಈಕೆ `ಕಾಮೆಡಿ ಸರ್ಕಸ್‌ ಕೀ ಅಜೂಬೆ, ಪಾಪ್‌ ಕಾರ್ನ್‌' ಶೋಗಳಲ್ಲಿ ಹೋಸ್ಟ್ ಆಗಿದ್ದಳು. ಮುಂದೆ 2010ರಲ್ಲಿ ತನ್ನ ಮೊದಲ ಚಿತ್ರ `ರಾಜನೀತಿ'ಯಲ್ಲಿ ಉತ್ತಮ ಹೆಸರು ಪಡೆದಳು. ಈ ಚಿತ್ರದ `ಇಶ್ಕ್ ಬರ್ಸೆ....' ಗ್ಲಾಮರಸ್‌ ಹಾಡಿನಲ್ಲಿ ಬಹಳ ಮಿಂಚಿದ್ದಳು.

bipasha-basu

ನಂತರದ `1920 : ಹಾರರ್ಸ್‌ ಆಫ್‌ ದಿ ಹಾರ್ಟ್‌' ಹಾರರ್‌ ಚಿತ್ರದಲ್ಲಿ ಈಕೆ ಹೈಸ್ಕೂಲ್ ‌ಹುಡುಗಿಯ ತಾಯಿಯ ಪಾತ್ರ ವಹಿಸಿದಳು. ನಟನೆ ಬಲು ಗಂಭೀರ ಎನಿಸಿತ್ತು.

ದೆವ್ವದ ಚಿತ್ರ ಏಕೆ ಆರಿಸಿಕೊಂಡೆ ಎಂದಿದ್ದಕ್ಕೆ, ``ಈ ಹಿಂದೆ ನಾನು ಹಾರರ್‌ ಚಿತ್ರದಲ್ಲಿ ನಟಿಸಿರಲಿಲ್ಲ. ಹೀಗೊಂದು ವಿಭಿನ್ನ ಪ್ರಯತ್ನ ಮಾಡೋಣ ಅಂತ. ಇದು ನಿರ್ದೇಶಕ ವಿಕ್ರಂ ಭಟ್‌ ರ ಮೊದಲ ಚಿತ್ರ. ಮೊದಲಿನಿಂದಲೂ ದೆವ್ವದ ಚಿತ್ರ ಅಂದ್ರೆ ನನಗೆ ಇಷ್ಟ, ಭಾರಿ ಕುತೂಹಲ. ಈ ಚಿತ್ರದಲ್ಲಿ ನಾನೇ ದೆವ್ವವಾಗಿ ಪ್ರೇಕ್ಷಕರನ್ನು ಭಯಪಡಿಸಲು ಯತ್ನಿಸಿದ್ದೇನೆ!''

ಬೆಳ್ಳಿತೆರೆಯ ಡ್ರಾಮಾ ಡೈವೋರ್ಸ್

ನಂತರ ಯಶಸ್ವಿ ಸಿಂಗ್‌ ಮದರ್‌ ಎನಿಸಿದ ಈಕೆಗೆ, ತೆರೆಯಲ್ಲಿ ತಾಯಿಯ ಪಾತ್ರ ನಿರ್ವಹಿಸುವುದು ಕಷ್ಟವೇ ಆಗಲಿಲ್ಲ. ರೀಲ್‌ರಿಯಲ್ ತಾಯಿಗೆ ಬಹಳ ಅಂತರವಿದೆ.

``ಚಿತ್ರದಲ್ಲಿ ತಾಯಿಯ ಎಮೋಶನಲ್ಸ್ ವ್ಯಕ್ತಪಡಿಸುವುದು ಬಹಳ ಸುಲಭ. ಇದಕ್ಕೆ ತಕ್ಕ ಹಿನ್ನೆಲೆ, ಕಥೆ ಇರುತ್ತದೆ. ಅಲ್ಲಿ ತಾಯಿ ಮಗಳನ್ನು ಅತಿಯಾಗಿ ಪ್ರೀತಿಸಿ, ರಕ್ಷಿಸುತ್ತಾಳೆ.

``ನನ್ನ 11 ವರ್ಷದ ಮಗಳು ಮೀರಾ ಒಬ್ಬಳೇ ನನ್ನ ಪ್ರಪಂಚ. ಪರದೆ ಮೇಲಿನ ಡ್ರಾಮಾ ಜೀವನಕ್ಕೆ ಬೇಕಿಲ್ಲ. ರಿಯಲ್ ನಲ್ಲಿ ಜವಾಬ್ದಾರಿ ಹೆಚ್ಚು, ರೀಲ್ ‌ನಲ್ಲಿ ಭಾವಾತಿರೇಕ ಹೆಚ್ಚು! ರಿಯಲ್ ನಲ್ಲಿ ವಾಸ್ತವತೆ ಎದುರಿಸಬೇಕು, ಮಗಳನ್ನು ಗೆಳತಿಯಂತೆ ಆದರಿಸಬೇಕು. ರೀಲ್ ‌ನಲ್ಲಿ ಕಂಟ್ರೋಲ್ ಮಾಡುವಂತೆ ರಿಯಲ್ ನಲ್ಲಿ ಆಗೋಲ್ಲ. ಇಲ್ಲಿ ತಾಯಿ ಎಷ್ಟೋ ಸಲ ಸೋಲಬೇಕಾಗುತ್ತದೆ!''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ