- ರಾಘವೇಂದ್ರ ಅಡಿಗ ಎಚ್ಚೆನ್.

‘ಶಾಖಾಹಾರಿ’ ಖ್ಯಾತಿಯ ನಿರ್ದೇಶಕ ಸಂದೀಪ್ ಸುಂಕದ್ ಆ್ಯಕ್ಷನ್-ಕಟ್ ಹೇಳಿರುವ, ಧೀರೇನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿರುವ ಈ ಸಿನಿಮಾದ ‘ಲಾಲಿ ಹಾಡು ಮಮತೆ ಜಾಡು ತವರ ಗೂಡಲಿ ಸೇರಾಯ್ತು’ ಎಂಬ ವಿಶೇಷ ಗೀತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ‘ಭಾಗ್ಯದ ಬಳೆಗಾರ’ನಾಗಿ ಕಾಣಿಸಿಕೊಂಡು ಹೆಜ್ಜೆ ಹಾಕಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅನುರಾಗ್ ಕುಲಕರ್ಣಿ ಮತ್ತು ಮೇಘನಾ ಹಳಿಯಾಳ್ ಅವರ ಮಧುರ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿಗೆ ಮಯೂರ್ ಅಂಬೆಕಲ್ಲು ಇಂಪಾದ ಸಂಗೀತ ಸಂಯೋಜಿಸಿದ್ದಾರೆ.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಿವರಾಜ್‌ಕುಮಾರ್, ‘ಸಿನಿಮಾ ಮೇಕಿಂಗ್‌ನಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು. ವಿಶೇಷವಾಗಿ ಊಟದ ವಿಷಯ ಸೇರಿದಂತೆ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಗೀತಾ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ. ‘ಪಬ್ಬಾರ್’ ಕಥೆ ತುಂಬಾ ಸೂಕ್ಷ್ಮವಾಗಿದ್ದು, ಇಂದಿನ ಕಾಲದ ಅತಿಯಾದ ಗ್ಲಾಮರ್ ನಡುವೆ ಇಂತಹ ಸಹಜ ಸಿನಿಮಾ ಮಾಡಿರುವುದು ಖುಷಿ ತಂದಿದೆ. ಧೀರೇನ್ ಮತ್ತು ಅಮೃತಾ ಪ್ರೇಮ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ‘ಬಳೆಗಾರ’ ಹಾಡಿನ ವಿಷಯ ಬಂದಾಗ ನಿರ್ದೇಶಕರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದೆಂದು ನಾನು ಸುಮ್ಮನಿದ್ದೆ. ಆದರೆ, ಸಂದೀಪ್ ಅವರೇ ಬಂದು ನನ್ನನ್ನು ಕೇಳಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡೆ. ‘ಪಬ್ಬಾರ್’ ಖಂಡಿತವಾಗಿಯೂ ಪ್ರೇಕ್ಷಕರಿಗೆ ಒಂದೊಳ್ಳೆಯ ಅನುಭವ ನೀಡಲಿದೆ’ ಎಂದು ಹಾರೈಸಿದರು.
ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಈ ಹಾಡು ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ನಿರ್ದೇಶಕ ಸಂದೀಪ್ ಮತ್ತು ಧೀರೇನ್ ಬಂದು ಕಥೆ ಹೇಳಿದಾಗಲೇ ನಮಗೆ ತುಂಬಾ ಇಷ್ಟವಾಗಿ ‘ಗೀತಾ ಪಿಕ್ಚರ್ಸ್’ ಮೂಲಕ ನಿರ್ಮಿಸಲು ಮುಂದಾದೆವು. ಉತ್ತರ ಭಾರತದ ಸೊನ್ನೆ ಡಿಗ್ರಿ ಕೊರೆಯುವ ಚಳಿಯಲ್ಲಿ ಧೀರೇನ್, ಅಮೃತಾ ಸೇರಿದಂತೆ ಇಡೀ ತಂತ್ರಜ್ಞರ ಮತ್ತು ಪ್ರೊಡಕ್ಷನ್ ತಂಡದ ಶ್ರಮ ಅಪಾರವಾಗಿದೆ ಎಂದು ಚಿತ್ರತಂಡದ ಪರಿಶ್ರಮವನ್ನು ಶ್ಲಾಘಿಸಿದರು.
ನಾಯಕ ನಟ ಧೀರೇನ್ ಭಾವುಕರಾಗಿ ಮಾತನಾಡುತ್ತಾ, ನನ್ನ ದೊಡ್ಡ ಮಾಮ ಶಿವಣ್ಣ ಮತ್ತು ಗೀತಾ ಆಂಟಿ ನನ್ನ ಪಾಲಿಗೆ ತಾತಾ-ಅಜ್ಜಿಯವರ ಸ್ಥಾನದಲ್ಲಿದ್ದಾರೆ. ಅನೇಕ ಕಡೆ ಅವಕಾಶಗಳಿಗಾಗಿ ಅಲೆದಾಡುತ್ತಿದ್ದ ನನಗೆ ನನ್ನ ಅಜ್ಜಿಯ ಹುಟ್ಟುಹಬ್ಬದ ದಿನದಂದೇ ಈ ಸಿನಿಮಾ ಘೋಷಿಸುವ ಮೂಲಕ ದೊಡ್ಡ ಕನಸನ್ನು ನನಸು ಮಾಡಿದರು. ನನ್ನ ಕುಟುಂಬದ ದೊಡ್ಡ ಹೆಸರಿನ ಆಚೆಗೆ ನನ್ನದೇ ಆದ ಅಸ್ತಿತ್ವವನ್ನು ಹುಡುಕಿಕೊಳ್ಳುವ ಸೂಕ್ಷ್ಮ ಪಾತ್ರ ಇದಾಗಿದ್ದು, ಇದಕ್ಕಾಗಿ ನನ್ನ ತೂಕವನ್ನು 75 ಕೆಜಿಯಿಂದ 63 ಕೆಜಿಗೆ ಇಳಿಸಿಕೊಂಡೆ. ಹಿಮಾಚಲ ಪ್ರದೇಶದ ಕಿನ್ನೌರ್ನಂತಹ ಅತ್ಯಂತ ಕಠಿಣ ಚಳಿಯ ಪ್ರದೇಶಗಳಿಂದ ಹಿಡಿದು 45 ಡಿಗ್ರಿ ಬಿಸಿಲಿನ ವಾರಣಾಸಿ, ಜೈಪುರ ಹಾಗೂ ಕೂರ್ಗ್, ಮೈಸೂರು, ಕಾಸರಗೋಡಿನವರೆಗೆ ಒಂದೂವರೆ ವರ್ಷಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ ಎಂದು ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ