ಅದು 1980ರ ದಶಕ. ಆಗ ನಾನು ಇನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಚಿಕ್ಕ ಮಕ್ಕಳನ್ನು ಸಿನಿಮಾ ಮಂದಿರಕ್ಕೆ ಕರೆದುಕೊಂಡು ಹೋಗುವುದು ಅಷ್ಟಾಗಿ ರೂಢಿಯಲ್ಲದ ಕಾಲ. ಆದರೆ ನಮ್ಮ ತಂದೆ ಕೆಲಸ ಮಾಡುತ್ತಿದ್ದ ಬಿಇಎಲ್ ಸಂಸ್ಥೆಯ ಬಿಇಎಲ್ ಲಲಿತ ಕಲಾ ಸಂಘದ ಆಶ್ರಯದಲ್ಲಿ ವರ್ಷಕ್ಕೆ 24 ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ತಿಂಗಳಿಗೆ ಎರಡು ಸಿನಿಮಾಗಳಂತೆ ಬಿಇಎಲ್ ಕಲಾಕ್ಷೇತ್ರದಲ್ಲಿ (ಇಂದಿನ ಕುವೆಂಪು ಕಲಾಕ್ಷೇತ್ರ) ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕೆಲವೊಮ್ಮೆ ಇಂಗ್ಲಿಷ್ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.

ಆ ಪ್ರದರ್ಶನಗಳ ಮೂಲಕವೇ ನಮಗೆ ದಕ್ಷಿಣ ಭಾರತದ ಶ್ರೇಷ್ಠ ಚಿತ್ರಗಳ ಪರಿಚಯವಾಯಿತು. ಕಮಲ್ ಹಾಸನ್, ರಜನಿಕಾಂತ್, ಶಿವಾಜಿ ಗಣೇಶನ್, ಎನ್.ಟಿ.ಆರ್., ಅಕ್ಕಿನೇನಿ ನಾಗೇಶ್ವರರಾವ್, ಶ್ರೀದೇವಿ, ಜಯಪ್ರದಾ ಮೊದಲಾದ ನಟರೊಂದಿಗೆ ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ನಿರ್ದೇಶಕರಾದ ಕೆ. ಬಾಲಚಂದರ್, ಭಾಗ್ಯರಾಜ್ ಮತ್ತು ಭಾರತಿರಾಜ ಅವರಂತಹ ದಿಗ್ಗಜರ ಪರಿಚಯವೂ ಆಗಿತ್ತು.

ಅಂತಹ ಮಹಾನ್ ನಿರ್ದೇಶಕ, ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಭಾರತಿರಾಜ ಅವರು 2026ರ ಜೂನ್ 10ರಂದು ಚೆನ್ನೈನಲ್ಲಿ ನಿಧನರಾದರು ಎಂಬ ಸುದ್ದಿ ದಕ್ಷಿಣ ಭಾರತೀಯ ಚಿತ್ರರಂಗಕ್ಕಷ್ಟೇ ಅಲ್ಲ, ಭಾರತೀಯ ಸಿನಿರಂಗಕ್ಕೂ ಒಂದು ಯುಗದ ಅಂತ್ಯದ ಸಂಕೇತವಾಗಿದೆ.

ಸ್ಟುಡಿಯೋದಿಂದ ಹಳ್ಳಿಯತ್ತ

1970ರ ದಶಕದಲ್ಲಿ ದಕ್ಷಿಣ ಭಾರತದ ಬಹುತೇಕ ಚಿತ್ರಗಳು ಅದ್ದೂರಿ ಸೆಟ್‌ಗಳಲ್ಲಿ, ಸ್ಟುಡಿಯೋಗಳ ಒಳಗೆಯೇ ಚಿತ್ರೀಕರಣಗೊಳ್ಳುತ್ತಿದ್ದವು. ಆದರೆ ಆ ಸಂಪ್ರದಾಯಕ್ಕೆ ಹೊಸ ದಿಕ್ಕು ತೋರಿಸಿದವರು ಭಾರತಿರಾಜ. ಹಳ್ಳಿಯ ಮಣ್ಣಿನ ವಾಸನೆ, ಗ್ರಾಮೀಣ ಬದುಕಿನ ನೈಜ ಚಿತ್ರಣ, ಸಾಮಾಜಿಕ ಸಮಸ್ಯೆಗಳು ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕ್ಯಾಮೆರಾದ ಮೂಲಕ ತೆರೆಗೆ ತಂದ ಮೊದಲ ಸಾಲಿನ ನಿರ್ದೇಶಕರಲ್ಲಿ ಅವರು ಪ್ರಮುಖರು.

1941ರ ಜುಲೈ 17ರಂದು ತಮಿಳುನಾಡಿನ ತೇಣಿ ಜಿಲ್ಲೆಯ ಪಣ್ಣೈಪುರಂ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಭಾರತಿರಾಜ, ಬಾಲ್ಯದಿಂದಲೇ ನಾಟಕಗಳತ್ತ ಆಕರ್ಷಿತರಾಗಿದ್ದರು. ನಟನಾಗುವ ಕನಸು ಹೊತ್ತಿದ್ದ ಅವರು ಜೀವನೋಪಾಯಕ್ಕಾಗಿ ಕೆಲಕಾಲ ಆರೋಗ್ಯ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡಿದರು.

ಇಳಯರಾಜ ಎಂಬ ಜೀವದ ಗೆಳೆಯ

ಹಳ್ಳಿಗಳಲ್ಲಿ ನಾಟಕಗಳನ್ನು ಮಾಡುತ್ತಾ ಸುತ್ತುತ್ತಿದ್ದ ಸಮಯದಲ್ಲೇ ಅವರಿಗೆ ಪರಿಚಯವಾದವರು ಮತ್ತೊಬ್ಬ ಅದ್ಭುತ ಪ್ರತಿಭೆ ಇಳಯರಾಜ. ಸಿನಿಮಾ ಲೋಕದಲ್ಲಿ ಸಾಧನೆ ಮಾಡುವ ಕನಸನ್ನು ಹೊತ್ತು ಇಬ್ಬರೂ ಮದ್ರಾಸ್ (ಇಂದಿನ ಚೆನ್ನೈ) ನಗರಕ್ಕೆ ಬಂದರು. ಆರಂಭದ ದಿನಗಳಲ್ಲಿ ಹಸಿವು, ಕಷ್ಟ, ನಿರಾಸೆ ಎಲ್ಲವನ್ನೂ ಒಟ್ಟಿಗೆ ಅನುಭವಿಸಿದರು. ಮುಂದೆ ಒಬ್ಬರು ಭಾರತೀಯ ಸಂಗೀತದ ದಿಕ್ಕನ್ನೇ ಬದಲಿಸಿದರೆ, ಮತ್ತೊಬ್ಬರು ದಕ್ಷಿಣ ಭಾರತದ ಚಿತ್ರರಂಗದ ಕಥೆ ಹೇಳುವ ಶೈಲಿಯನ್ನೇ ಬದಲಿಸಿದರು. ಆದರೆ ಅವರ ಸ್ನೇಹ ಮಾತ್ರ ಕೊನೆಯವರೆಗೂ ಅಚಲವಾಗಿಯೇ ಉಳಿಯಿತು.

ಕನ್ನಡದೊಂದಿಗೆ ಅವಿನಾಭಾವ ನಂಟು

ಭಾರತಿರಾಜ ಮತ್ತು ಇಳಯರಾಜ ಅವರ ಆರಂಭಿಕ ಸಿನಿ ಪಯಣದಲ್ಲಿ ಕನ್ನಡಿಗರ ಪಾತ್ರ ಮಹತ್ವದ್ದಾಗಿದೆ.

ಇಳಯರಾಜ ಅವರು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರ ಬಳಿ ಸಂಗೀತದ ಪಾಠ ಕಲಿತರೆ, ಭಾರತಿರಾಜ ಅವರು ಕನ್ನಡದ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ