- ರಾಘವೇಂದ್ರ ಅಡಿಗ ಎಚ್ಚೆನ್.

ಇಷ್ಟು ದಿನ ಡೈಲಾಗ್ ಹೊಡೆದು ಸಾಕು ಅನಿಸಿದ್ದು ಇದೀಗ ಕಣ್ಣಲ್ಲೇ ಎಲ್ಲಾ ಹೇಳ್ಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು. "ಬೇಲ್" ಸಿನಿಮಾ ಕುರಿತು ವಿಶೇಷ ಮಾಹಿತಿ ಹಂಚಿಕೊಳ್ಳಲು ಪತ್ರಿಕಾ ಮಿತ್ರರನ್ನ ತಮ್ಮ ಮನೆಗೆ ಕರೆದಿದ್ದ ನಟಿ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದ್ದಾರೆ.

"ಬೇಲ್" ನಲ್ಲಿ ಮಾಸ್ ಡೈಲಾಗ್ ಇಲ್ಲ ಎಂದಲ್ಲ ಆದರೆ ಎಷ್ಟು ಬೇಕೋ ಅಷ್ಟು ಇದೆ. ಈವರೆಗೆ ಮಾತಾಡಿ ಸಾಕಾಗಿದೆ. ಈಗೀಗ ಕಣ್ಣುಗಳಲ್ಲೇ ಎಲ್ಲಾ ಹೇಳ್ಬೇಕು ಎಂದು ನಾನು ಅಂದುಕೊಂಡಿದ್ದೇನೆ. ಹಾಗಾಗಿ ಡೈಲಾಗ್ ಗಿಂತ ನಟನೆಗೆ ಹೆಚ್ಚು ಇಂಪಾರ್ಟೆನ್ಸ್ ಕೊಡಲಾಗಿದೆ ಎಂದು ಶಿವಣ್ಣ ಹೇಳಿದರು.

ಈ ಸಿನಿಮಾದಲ್ಲಿ ಫಸ್ಟ್ ಟೈಮ್ ವಯಸ್ಸಿಗೆ ಮೀರಿದ ಪಾತ್ರ ಮಾಡಿದ್ದು, ಈ ಸಿನಿಮಾದ ಒಂದು ಲವ್‌ಲಿ ಜರ್ನಿ ಎಂದಿರುವ ಶಿವರಾಜ್ ಕುಮಾರ್ ಜಯರಾಮ್, ಸಾಯಿಕುಮಾರ್ ಜೊತೆಗೆ ಕಾಂಬಿನೇಷನ್ ಸಖತ್ ಎಂಜಾಯ್ ಮಾಡಿ ಅಭಿನಯಿಸಿರುವುದಾಗಿ ಹೇಳಿದರು.

"ಬೇಲ್" ಡಾರ್ಕ್ ಕಾಮಿಡಿ ಕಥೆ, ನನ್ನ ಗೆಟಪ್ ಕೂಡ ಚೆನ್ನಾಗಿದೆ, ಅದನ್ನು ರಾಮ್‌ಚರಣ್ ಕೂಡ ಮೆಚ್ಚಿಕೊಂಡಿದ್ದಾರೆ,  ನಾನು ಚಿತ್ರಕ್ಕೆ ಡಬ್ ಮಾಡಬೇಕಾದ್ರೆ ಇದರಲ್ಲಿ ಏನೋ ಇದೆಯಲ್ಲ ಎನಿಸಿತು ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ತಮ್ಮ ಹೋಂ ಬ್ಯಾನರ್ ಚಿತ್ರಗಳ ಬಗ್ಗೆಯೂ ಮಾತಾಡಿದ ಶಿವಣ್ಣ ಈಗಾಗಲೇ "ಪಬ್ಬಾರ್" ಚಿತ್ರದ ಎಲ್ಲ ಕೆಲಸ ಮುಗಿದು ರಿಲೀಸ್‌ ಗೆ ರೆಡಿ ಇದೆ, "ಎ ಫಾರ್ ಆನಂದ್" ಚಿತ್ರವನ್ನು ಈ ರಜೆಯಲ್ಲಿ ಪ್ರಾರಂಭಿಸಬೇಕಿದೆ ಈ ಚಿತ್ರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ ಎಂದು ಹೇಳಿದರು.

ಮಾಧುರಿ ದೀಕ್ಷಿತ್ ಬರಲ್ಲ
"ಎ ಫಾರ್ ಆನಂದ್" ನಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅಭಿನಯಿಸುತ್ತಾರೆ ಎಂಬ ಸುದ್ದಿ ಹರಿದಾಡಿದ್ದು ಈ ಕುರಿತು ಸ್ಪಷ್ಟನೆ ನೀಡಿರುವ ಶಿವರಾಜ್ ಕುಮಾರ್ ಮಾಧುರಿ ದೀಕ್ಷಿತ್ ಕಥೆ ಕೇಳಿದ್ದಾರೆ, ಆ ಪಾತ್ರಕ್ಕೆ ಹೆಚ್ಚು ಡೈಲಾಗ್ ಇದೆ. ಅವರ ಸಿನಿಮಾಗೆ ಅವರೇ ಡಬ್ ಮಾಡಬೇಕು ಹಾಗಾಗಿ ಕನ್ನಡ ಕಲಿಯಲು ಸಮಯ ಹಿಡಿಯುತ್ತದೆ ಆ ಕಾರಣ ಈ ಚಿತ್ರದಲ್ಲಿ ಮಾಧುರಿ ಅವರು ಅಭಿನಯಿಸುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ.

ಡೈಲಿ ವಾಕಿಂಗ್, ಆರೋಗ್ಯಕರ ಊಟ
ಶಿವರಾಜ್ ಕುಮಾರ್ ಅವರ ಅನಾರೋಗ್ಯ, ಅದಕ್ಕೆ ನಡೆದ ಆಪರೇಷನ್ ಬಳಿಕ ಅವರು ಪ್ರತಿದಿನದ ರೊಟೀನ್ ಹೇಗಿದೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದೆ. ಇದಕ್ಕೆ ಉತ್ತರ ನೀಡಿದ ಶಿವಣ್ಣ "ವಿಶೇಷ ಏನಿಲ್ಲ ಅದೆ ನಿತ್ಯ ವಾಕಿಂಗ್, ಹೆಚ್ಚು ಆರೋಗ್ಯಕರ ಊಟ, ಡ್ರಿಂಕ್ಸ್ ಸಿಗರೇಟ್ ಸ್ಮೋಕಿಂಗ್ ಇಲ್ಲ, ನಾನ್ ವೆಜ್ ತಿನ್ನುತ್ತೇನೆ. ವಿಶೇಷವಾಗಿ ಫಿಶ್, ಸೀ ಫುಡ್ ತಿನ್ನುತ್ತೇನೆ. ವೈದ್ಯರು ಇಲ್ಲೇ ಬಂದು ನಿಯಮಿತ ಪರೀಕ್ಷೆ ನಡೆಸುತ್ತಾರೆ. ಬೇರೆಲ್ಲ ನಾರ್ಮಲ್ ಲೈಫ್. "ಎಂದಿದ್ದಾರೆ.

ಅ.2ಕ್ಕೆ "ಬೇಲ್" ತೆರೆಗೆ
ನಟ ಶಿವರಾಜ್ ಕುಮಾರ್ ಅಭಿನಯದ "ಬೇಲ್" ಸಿನಿಮಾ ಅ.2ರಂದು  ರಾಜ್ಯಾದ್ಯಂತ ತೆರೆಕಾಣುತ್ತಿದೆ, ಪವನ್ ಒಡೆಯರ್ ಚಿತ್ರದ ನಿರ್ದೇಶಕ, ಕೆಎಎಸ್ ಪ್ರೊಡಕ್ಷನ್‌ನ ವೆಂಕಟ್ ಕೆ.ನಾರಾಯಣ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಜಯರಾಂ, ಸಾಯಿಕುಮಾರ್, ಸಂಜನಾ ಆನಂದ್‌, ದೀಕ್ಷಿತ್‌ ಶೆಟ್ಟಿ, ಸಂಗೀತಾ, ಯೋಗಿ, ನಿವೇದಿತಾ ಹೀಗೆ ಎಲ್ಲ ಕಲಾವಿದರ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ