- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹೊಸ ಸೀಸನ್ ಸೆಟ್ಟೇರಲು ಸಿದ್ಧವಾಗಿದೆ. ನಿರೀಕ್ಷೆಯಂತೆ ಬಿಗ್ ಬಾಸ್ ಸೀಸನ್-12 ಸೆಪ್ಟೆಂಬರ್ ತಿಂಗಳಲ್ಲೇ ಆರಂಭವಾಗ್ತಿದ್ದು, ಸೆಪ್ಟೆಂಬರ್ 28ರಂದು ಅದ್ದೂರಿ ಚಾಲನೆ ಸಿಗಲಿದೆ. ನಿನ್ನೆ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಬಾಸ್ ಪ್ರೊಮೋ ಬಿಡುಗಡೆ ಆಗಿದೆ.
ಮಾರ್ಕ್ ಸಿನಿಮಾದ ವಿಶೇಷ ಗೆಟಪ್‌ನಲ್ಲಿ ಸುದೀಪ್ ಪ್ರೋಮೋದಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಗುಂಗುರು ಕೂದಲಿನ ಹೊಸ ಹೇರ್ ಸ್ಟೈಲಿನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

ಪ್ರೋಮೋದಲ್ಲಿ ಕಿಚ್ಚ ಹೇಳಿದ್ದೇನು? ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ ಎನ್ನುತ್ತ ಸುದೀಪ್ ಪ್ರೋಮೋದಲ್ಲಿ ಎಂಟ್ರಿ ನೀಡಿದ್ದಾರೆ. ಸುದೀಪ್ ಹೊಸ ಹೇರ್ ಸ್ಟೈಲ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ. ಇನ್ನು, ಪ್ರೋಮೋದಲ್ಲಿ ಕರ್ನಾಟಕ, ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ದೃಶ್ಯ ಇದೆ. ಬಿಗ್ ಬಾಸ್ ಶೋ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹದ ಜೊತೆಗೆ ಸುದೀಪ್ ಧ್ವನಿ ಕೇಳಿಸಿದೆ.
‘ಹೊಸ ಸೆಟ್ ರೆಡಿ.. ಹೊಸ ಕಂಟೆಸ್ಟೆಂಟ್ ರೆಡಿ, ಏಳು ಕೋಟಿ ಕನ್ನಡಿಗರು ಕೂಡ ರೆಡಿ.. ಸರ್ ನೀವು..? ಎಂದು ಹಿನ್ನೆಲೆ ಧ್ವನಿ ಕೇಳಿಸಿದೆ. ಅದಕ್ಕೆ ‘ನಾನು ರೆಡಿ’ ಎಂದು ಸುದೀಪ್ ಥಮ್ಸ್ಅಪ್ ಮಾಡಿದ್ದಾರೆ.
ಬಿಗ್ಬಾಸ್ ಪ್ರೋಮೋ ನೋಡಿ ಅಭಿಮಾನಿಗಳಿಗೆ ಬಹಳ ಖುಷಿ ಆಗಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರಬಹುದು ಎಂಬುದರ ಲೆಕ್ಕಾಚಾರ ಈಗಲೇ ಶುರುವಾಗಿದೆ. ಸುದೀಪ್ ಅವರು ‘ಮಾರ್ಕ್’ ಮತ್ತು ‘ಬಿಲ್ಲ ರಂಗ ಭಾಷಾ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಅವರು ಬಿಗ್ ಬಾಸ್ ಶೋ ನಡೆಸಿಕೊಡಲು ಸಜ್ಜಾಗಿದ್ದಾರೆ.





