- ರಾಘವೇಂದ್ರ ಅಡಿಗ ಎಚ್ಚೆನ್.
ಬ್ಲಿಂಕ್’ ಸಿನಿಮಾ ಮೂಲಕ ಅಪರೂಪದ ಕಥಾ ಶೈಲಿಯಿಂದ ಕನ್ನಡಿಗರ ಮನಸು ಗೆದ್ದಿದ್ದ ಬ್ಲಿಂಕ್ ತಂಡ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಹೊಸದಾಗಿ ಅನಾವರಣಗೊಂಡಿರುವ ಹಾರರ್ ಥ್ರಿಲ್ಲರ್ “ವೀಡಿಯೋ” ಸಿನಿಮಾದ ಮೊದಲ ಟೀಸರ್ ಮತ್ತು ಥೀಮ್ ಮ್ಯೂಸಿಕ್ ಇದೀಗ ಬಿಡುಗಡೆಯಾಗಿದೆ.’
‘ಬ್ಲಿಂಕ್’ ಸಿನಿಮಾ ಮೂಲಕ ಹಿಟ್ ಕೊಟ್ಟಿದ್ದ ದೀಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಶ್ರೀನಿಧಿ ಬೆಂಗಳೂರು ಇದೀಗ ಮತ್ತೊಂದು ವಿನೂತನ ಹಾರರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ವೀಡಿಯೋ ಚಿತ್ರದ ಮೊದಲ‌ ಟೀಸರ್ ಹಾಗೂ ಥೀಮ್ ಮ್ಯೂಸಿಕ್ ಬಿಡುಗಡೆಯಾಗಿದ್ದು. ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟಿಯರಿಂದ ಟೀಸರ್ ಬಿಡುಗಡೆ ಮಾಡಿದ್ದು ವಿಶೇಷವೆನಿಸಿದೆ. ಇನ್ನು ವಿಶೇಷವಾಗಿ ಟೀಸರ್ ಲಾಂಚ್ ವೇಳೆ ದೆವ್ವದ ಹಾಡು ಹಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ.

WhatsApp-Image-2025-05-25-at-1.15.16-PM-1-2025-05-4f5d92203fc78ad9f0762f5550660e7c-16x9
ದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು. ಇನ್ನು ಈ ಸಿನಿಮಾದಲ್ಲಿ ಭರತ, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ ಆಚಾರ್, ನಲ್ಮೇ ನಾಚಿಯಾರ್ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸನ್ನ ಕುಮಾರ್ ಸಿನಿಮಾಗೆ ಸಂಗೀತ ನಿರ್ದೇಶಕರಾಗಿದ್ದು. ಅವಿನಾಶ್ ಶಾಸ್ತ್ರಿ ಛಾಯಾಗ್ರಹಣದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಸದ್ಯ ಟೀಸರ್ ಬಿಡುಗಡೆ ಮಾಡಿರೋ ಚಿತ್ರತಂಡ ಇಲ್ಲಿಂದ ಚಿತ್ರೀಕರಣ ಆರಂಭಿಸಲಿದ್ದು, ಇದೇ ವರ್ಷ ಚಿತ್ರವನ್ನ ತೆರೆಗೆ‌ ತರುವ ಉತ್ಸಾಹದಲ್ಲಿದೆ.

WhatsApp-Image-2025-05-25-at-1.15.16-PM-2025-05-007630a3c2eba3a940dce5c2c580977a-16x9
ಕನ್ನಡಿಗರ ಈ ಬ್ಲಿಂಕ್ ಸಿನಿಮಾದ ಓಟಿಟಿಯಲ್ಲಿದೆ. ಅಮೇಜಾನ್ ಪ್ರೈಮ್‌ನಲ್ಲಿ ಎಂಟ್ರಿ ಕೊಟ್ಟ ಮೂರನೇ ದಿನಕ್ಕೆ 7 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಆಗಿದೆ. ನಾಲ್ಕನೆ ದಿನಕ್ಕೆ 10 ಮಿಲಿಯನ್ ಮಿನಿಟ್ಸ್ ರೀಚ್ ಆಗಿದೆ. ಹೊಸಬರ ಈ ಚಿತ್ರಕ್ಕೆ ಇಷ್ಟು ರೆಸ್ಪಾನ್ಸ್ ಸಿಕ್ಕಿರೋದು ಇಡೀ ತಂಡಕ್ಕೆ ತುಂಬಾನೆ ಖುಷಿ ತಂದಿತ್ತು. ಬ್ಲಿಂಕ್ ಚಿತ್ರ ಪರ ಭಾಷೆಗೂ ಬರುತ್ತದೆ. ಬ್ಲಿಂಕ್ ಸಿನಿಮಾ ಬಗ್ಗೆ ಆರಂಭದಿಂದಲೂ ಒಳ್ಳೆ ಅಭಿಪ್ರಾಯ ಇದೆ. ಕನ್ನಡದಲ್ಲಿ ಬಂದಿರೋ ದಿ ಬೆಸ್ಟ್ ಸಿನಿಮಾ ಅನ್ನೋ ಮಾತುಗಳೂ ಇವೆ. ಎಲ್ಲರನ್ನೂ ಸೆಳೆಯಬಲ್ಲ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ದಿಯಾ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್ ಸೇರಿದಂತೆ ಇನ್ನೂ ಅನೇಕರು ಅಭಿನಯಿಸಿದ್ದಾರೆ.

WhatsApp-Image-2025-05-25-at-1.15.16-PM-2-2025-05-14097bb25c624107c4ec51a1f095034d-16x9

ಶ್ರೀನಿಧಿ ಬೆಂಗಳೂರು ಡೈರೆಕ್ಟ್ ಮಾಡಿರೋ ಈ ಬ್ಲಿಂಕ್ ಚಿತ್ರ ಓಟಿಟಿಯಲ್ಲಿ ಚೆನ್ನಾಗಿಯೇ ಓಡುತ್ತಿದೆ. ಓಟಿಟಿ ಟಾಪ್-10 ಚಿತ್ರಗಳಲ್ಲಿ ಟಾಪ್ ಅಲ್ಲಿಯೇ ಈ ಸಿನಿಮಾ ಇದೆ. ಈ ಒಂದು ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಿತ್ತು. ಎಲ್ಲರ ಗಮನ ಕೂಡ ಸೆಳೆಯುತ್ತಿದೆ ಅಂತಲೂ ಹೇಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ